ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ‘ವೇದ ನಿಲಯಂ’ ನಿವಾಸವನ್ನು ನಿನ್ನೆ ಅವರ ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ಸ್ವಾಧೀನಪಡಿಸಿಕೊಂಡಿದ್ದಾರೆ. ಮದ್ರಾಸ್ ಹೈಕೋರ್ಟ್ ಆದೇಶದಂತೆ ಚೆನ್ನೈ ಜಿಲ್ಲಾಧಿಕಾರಿ ಜೆ. ವಿಜಯಾ ರಾಣಿ ಅವರು ಜಯಲಲಿತಾ ಅವರ ಮನೆಯ ಬೀಗದ ಕೀಯನ್ನು ದೀಪಾ ಜಯಕುಮಾರ್ ಮತ್ತು ಜೆ. ದೀಪಕ್ ಅವರಿಗೆ ಹಸ್ತಾಂತರಿಸಿದ್ದಾರೆ. ಪೋಯಸ್ ಗಾರ್ಡನ್ ಪ್ರದೇಶದಲ್ಲಿರುವ ಈ ಮನೆಯು ಜಯಲಲಿತಾ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಎರಡು ದಶಕಗಳಿಗೂ ಹೆಚ್ಚು ಕಾಲ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿತ್ತು. 2017ರ ಫೆಬ್ರವರಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಯಾಗುವವರೆಗೂ ಶಶಿಕಲಾ ಅವರೇ ಈ ಮನೆಯಲ್ಲಿ ವಾಸವಾಗಿದ್ದರು.
ಹಿಂದಿನ ಎಐಎಡಿಎಂಕೆ ಸರ್ಕಾರವು 2020ರಲ್ಲಿ ದಿವಂಗತ ಜಯಲಲಿತಾ ಅವರ ಸ್ಮಾರಕವನ್ನು ರಚಿಸಲು ಈ ಮನೆಯನ್ನು ಸ್ವಾಧೀನಪಡಿಸಿಕೊಂಡಿದ್ದರೂ ಈ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿತ್ತು. ನವೆಂಬರ್ 24ರಂದು ರಾಜ್ಯ ಸರ್ಕಾರವು ಮೂರು ವಾರಗಳ ಅವಧಿಯಲ್ಲಿ ಅವರ ಕಾನೂನುಬದ್ಧ ವಾರಸ್ದಾರರಾದ ಜಯಲಲಿತಾ ಅವರ ಸಹೋದರ ಜಯಕುಮಾರ್ ಅವರ ಮಕ್ಕಳಾದ ದೀಪಾ ಮತ್ತು ದೀಪಕ್ ಅವರಿಗೆ ಆಸ್ತಿಯನ್ನು ಹಸ್ತಾಂತರಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು.
After the court’s verdict, govt has handed over the keys to us. There used to be lots of clashes between us & the Sasikala family. Now I am neither for nor against her: Deepa Jayakumar, niece of ex Tamil Nadu CM J Jayalalithaa after getting keys to her aunt’s Poes Garden bungalow pic.twitter.com/ghvinOri62
— ANI (@ANI) December 10, 2021
ನಾನು ಈ ಮನೆಗೆ ಮೊದಲೆಲ್ಲ ಬರುತ್ತಿದ್ದೆ. ಜಯಲಲಿತಾ ಅವರು ಬದುಕಿದ್ದಾಗ ಈ ಮನೆ ಬಹಳ ಸುಂದರವಾಗಿತ್ತು. ಆದರೆ, ಈಗ ಮನೆಯ ಅಂದವೇ ಹಾಳಾಗಿದೆ. ಆ ಮನೆಯ ರೂಮ್ಗಳು ಈಗ ಸಣ್ಣದಾಗಿವೆ. ಅಲ್ಲದೆ, ಮನೆಯಲ್ಲಿದ್ದ ಹಲವಾರು ವಸ್ತುಗಳು ಕಾಣೆಯಾಗಿದ್ದು, ಮನೆ ಖಾಲಿ ಬಿದ್ದಿದೆ ಎಂದು ದೀಪಾ ತಿಳಿಸಿದ್ದಾರೆ. ಅಲ್ಲದೆ, ಜಯಲಲಿತಾ ಅವರಿಗೆ ಆಪ್ತೆಯಾಗಿದ್ದ ಶಶಿಕಲಾ ವಿರುದ್ಧವೂ ವಾಗ್ದಾಳಿ ನಡೆಸಿರುವ ದೀಪಾ, ಜಯಲಲಿತಾ ಅವರ ಮನೆಯನ್ನು ಅವರ ಮನಸಿಗೆ ಬಂದಂತೆ ಬದಲಾಯಿಸಿರುವುದು ಸರಿಯಲ್ಲ ಎಂದಿದ್ದಾರೆ.
ಜಯಲಲಿತಾ ಅವರ ಮನೆಯ ಸ್ಥಿತಿಗತಿ ಕುರಿತು ಮಾತನಾಡಿದ ಜಯಲಲಿತಾ ಅವರ ಸೊಸೆ ದೀಪಾ, ಇಂದು ನಾವು ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಕಲೆಕ್ಟರ್‌ನಿಂದ ಕೀಗಳನ್ನು ಸಂಗ್ರಹಿಸಿ ನಂತರ ನಾವು ಇಲ್ಲಿಗೆ ಬಂದಿದ್ದೇವೆ. ಸರ್ಕಾರಿ ಅಧಿಕಾರಿಗಳು ಮನೆಯ ಬಾಗಿಲನ್ನು ಎರೆದು ಕೊಟ್ಟರು. ಆದರೆ ನಾವು ಬಂದಾಗ ವಿದ್ಯುತ್ ಇರಲಿಲ್ಲ. ನಾವಿಬ್ಬರೂ (ದೀಪಕ್ ಮತ್ತು ನಾನು) ಕುಳಿತುಕೊಂಡು ಮನೆಯನ್ನು ನವೀಕರಿಸುವುದನ್ನು ಮತ್ತು ಇಲ್ಲಿ ಉಳಿದಿರುವ ವಸ್ತುಗಳನ್ನು ಏನು ಮಾಡಬೇಕೆಂದು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನಾವು ಮನೆಯನ್ನು ಬಳಸಬೇಕಾದರೆ, ನಾವು ಮಾಡಬೇಕು ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಜಯಲಲಿತಾ ನಿವಾಸ ಸ್ಮಾರಕ ಮಾಡುವ ನಿರ್ಧಾರಕ್ಕೆ ಮದ್ರಾಸ್ ಹೈಕೋರ್ಟ್ ತಡೆ
ಜಯಲಲಿತಾ ಸ್ಮಾರಕಕ್ಕೆ ವಿ.ಕೆ.ಶಶಿಕಲಾ ಭೇಟಿ; ಕಣ್ಣೀರಿಡುತ್ತಲೇ ಪುಷ್ಪ ನಮನ ಸಲ್ಲಿಸಿದ ಅಮ್ಮನ ಆಪ್ತೆ
Published On - 1:26 pm, Sat, 11 December 21