ಜಯಲಲಿತಾ ನಿವಾಸ ಸ್ಮಾರಕ ಮಾಡುವ ನಿರ್ಧಾರಕ್ಕೆ ಮದ್ರಾಸ್ ಹೈಕೋರ್ಟ್ ತಡೆ

Poes garden ಎಐಎಡಿಎಂಕೆ (AIADMK) ಸರ್ಕಾರ ಈ ಮನೆಯನ್ನು ಸ್ಮಾರಕವನ್ನಾಗಿ ಪರಿವರ್ತಿಸಿತ್ತು. ಜಯಲಲಿತಾ ಅವರ ಕಾನೂನು ವಾರಸುದಾರರಾದ ದೀಪಾ ಮತ್ತು ದೀಪಕ್ ಸರ್ಕಾರದ ಈ ಸ್ವಾಧೀನಕ್ಕೆ ಸವಾಲು ಹಾಕಿದ್ದರು.

ಜಯಲಲಿತಾ ನಿವಾಸ ಸ್ಮಾರಕ ಮಾಡುವ ನಿರ್ಧಾರಕ್ಕೆ ಮದ್ರಾಸ್ ಹೈಕೋರ್ಟ್ ತಡೆ
ಪೋಯಸ್ ಗಾರ್ಡನ್ (ಸಂಗ್ರಹ ಚಿತ್ರ)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 24, 2021 | 3:34 PM

ಚೆನ್ನೈ: ತಮಿಳುನಾಡು (Tamil Nadu) ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ (J Jayalalithaa) ಅವರ ಪೋಯಸ್ ಗಾರ್ಡನ್ (Poes garden) ನಿವಾಸವನ್ನು ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಳ್ಳುವುದನ್ನು ಮದ್ರಾಸ್ ಹೈಕೋರ್ಟ್  (Madras High Court) ಬುಧವಾರ ರದ್ದುಗೊಳಿಸಿದೆ. ಎಐಎಡಿಎಂಕೆ (AIADMK) ಸರ್ಕಾರ ಈ ಮನೆಯನ್ನು ಸ್ಮಾರಕವನ್ನಾಗಿ ಪರಿವರ್ತಿಸಿತ್ತು. ಜಯಲಲಿತಾ ಅವರ ಕಾನೂನು ವಾರಸುದಾರರಾದ ದೀಪಾ ಮತ್ತು ದೀಪಕ್ ಸರ್ಕಾರದ ಈ ಸ್ವಾಧೀನಕ್ಕೆ ಸವಾಲು ಹಾಕಿದ್ದರು. ಎಪ್ರಿಲ್ 2021 ರ ಚುನಾವಣೆಯಲ್ಲಿ ಸೋತ ಎಡಪ್ಪಾಡಿ ಕೆ ಪಳನಿಸ್ವಾಮಿ ಸರ್ಕಾರದ ಆದೇಶವನ್ನು ತಳ್ಳಿಹಾಕಿದ ಹೈಕೋರ್ಟ್, ಜಯಲಲಿತಾ ಅವರ ಏಕೈಕ ಸಹೋದರ ಜಯಕುಮಾರ್ ಅವರ ಮಕ್ಕಳಾದ ದೀಪಾ ಮತ್ತು ದೀಪಕ್ ಅವರಿಗೆ ನಿವಾಸವನ್ನು ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಜಯಲಲಿತಾ ಅವರು ಯಾವುದೇ ಉಯಿಲುಗಳನ್ನು ಬರೆಯದ ಕಾರಣ ದೀಪಾ ಮತ್ತು ದೀಪಕ್ ಅವರ ಕಾನೂನುಬದ್ಧ ವಾರಸುದಾರರು ಎಂದು 2020 ರಲ್ಲಿ ಹೈಕೋರ್ಟ್ ತೀರ್ಪು ನೀಡಿತ್ತು. ಆಗಿನ ಎಐಎಡಿಎಂಕೆ ಸರ್ಕಾರವು ದೀಪಾ ಮತ್ತು ದೀಪಕ್ ಅವರ ಇಚ್ಛೆಗೆ ವಿರುದ್ಧವಾಗಿ ಬಂಗಲೆಯನ್ನು ಸ್ವಾಧೀನಪಡಿಸಿಕೊಂಡಿದ್ದು ಅದನ್ನು ಜಯಲಲಿತಾ ಅವರ ಸ್ಮಾರಕವನ್ನಾಗಿ ಪರಿವರ್ತಿಸಿತ್ತು.

1960 ರ ದಶಕದ ಕೊನೆಯಲ್ಲಿ ಜಯಲಲಿತಾ ಅವರ ತಾಯಿ ಸಂಧ್ಯಾ ಅವರು ಬಂಗಲೆಯನ್ನು ಖರೀದಿಸಿದ ನಂತರ ಸುಮಾರು 50 ವರ್ಷಗಳ ಕಾಲ ಪೋಯಸ್ ಗಾರ್ಡನ್‌ನಲ್ಲಿರುವ ವಿಸ್ತಾರವಾದ ಮಹಲಿನಲ್ಲಿ ಜಯಲಲಿತಾ ವಾಸವಾಗಿದ್ದರು. ತಮ್ಮ ಆಪ್ತ ಎಂ ಜಿ ರಾಮಚಂದ್ರನ್ ಅವರು ಸ್ಥಾಪಿಸಿದ ಪಕ್ಷವನ್ನು ಪೋಷಿಸಿದ ಜಯಲಲಿತಾ ಅವರು ಬದುಕಿದ್ದಾಗ ಪೋಯಸ್ ಗಾರ್ಡನ್ ನಿವಾಸಕ್ಕೆ ಭೇಟಿ ನೀಡುವುದು ಲಕ್ಷಗಟ್ಟಲೆ ಎಐಎಡಿಎಂಕೆ ಕಾರ್ಯಕರ್ತರಿಗೆ ತೀರ್ಥಯಾತ್ರೆಗಿಂತ ಕಡಿಮೆಯಾಗಿರಲಿಲ್ಲ.

2016 ರಲ್ಲಿ ಅವರ ಮರಣದ ನಂತರ ತಮಿಳುನಾಡು ಸರ್ಕಾರವು 2017 ರಲ್ಲಿ ಪೋಯಸ್ ಗಾರ್ಡನ್ ಬಂಗಲೆಯನ್ನು ಜಯಲಲಿತಾ ಅವರ ಸ್ಮಾರಕವಾಗಿ ಪರಿವರ್ತಿಸುವುದಾಗಿ ಘೋಷಿಸಿತ್ತು.

1967 ರಲ್ಲಿ ಜಯಲಲಿತಾ ಅವರ ತಾಯಿ ಸಂಧ್ಯಾ ಅವರು 1.32 ಲಕ್ಷ ರೂ.ಗೆ ಖರೀದಿಸಿದ ಈ ಬಂಗಲೆಯು ಈಗ 100 ಕೋಟಿ ರೂ ಮೌಲ್ಯ ಹೊಂದಿದೆ. ಸಂಧ್ಯಾ ಅವರು 1960 ರ ದಶಕದಲ್ಲಿ ಮಹಲಿನ ಮುಂಭಾಗವನ್ನು ಖರೀದಿಸಿದ್ದರು. ಆದರೆ ಜಯಲಲಿತಾ ಅವರು ಹತ್ತಿರದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಬಂಗಲೆಯನ್ನು ಮತ್ತಷ್ಟು ದೊಡ್ಡದು ಮಾಡಿದರು. ಜಯಲಲಿತಾ ಅವರಿಗೆ ಪೋಯಸ್ ಗಾರ್ಡನ್ ನಿವಾಸವು ಮನೆಗಿಂತ ಹೆಚ್ಚಾಗಿತ್ತು. ಹೆಚ್ಚು ಪುಸ್ತಕಗಳನ್ನು ಓದುತ್ತಿದ್ದ ಜಯಲಲಿತಾ ಸುಮಾರು 8,000 ಪುಸ್ತಕಗಳನ್ನು ಹೊಂದಿದ್ದ ಗ್ರಂಥಾಲಯವನ್ನು ಸ್ಥಾಪಿಸಿದ್ದರು.

ಇದನ್ನೂ ಓದಿ: ಮುದ್ರಣ ಜಾಹೀರಾತಿನಲ್ಲಿ ವಿಡಿಯೊ ಕ್ಯುಆರ್ ಕೋಡ್ ಬಳಸಲಿದೆ ಮೋದಿ ಸರ್ಕಾರ

Published On - 3:14 pm, Wed, 24 November 21

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ