ವಿ.ಕೆ.ಶಶಿಕಲಾಗೆ ಮತ್ತೆ ಐಟಿ ಸಂಕಷ್ಟ; 100 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ
ಈ 11 ಆಸ್ತಿಗಳ ಬೆಲೆ 1990ರ ದಶಕದಲ್ಲಿ ಖರೀದಿ ಮಾಡುವಾಗ ಕೇವಲ 20 ಲಕ್ಷ ರೂಪಾಯಿ ಆಗಿತ್ತು. ಆದರೀಗ ಸುಮಾರು 100 ಕೋಟಿ ರೂಪಾಯಿ ಬೆಲೆಬಾಳುತ್ತವೆ.
ಚೆನ್ನೈ: ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ವಿ.ಕೆ.ಶಶಿಕಲಾ ಅವರಿಗೆ ಸಂಬಂಧಪಟ್ಟ ಸುಮಾರು 11 ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ (Incom Tax Department) ಜಪ್ತಿ ಮಾಡಿದೆ. ಮಾಜಿ ಸಿಎಂ ಜಯಲಲಿತಾರ ಆಪ್ತೆಯಾಗಿದ್ದ ಶಶಿಕಲಾ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದು, ರಾಜಕಾರಣವನ್ನು ತೊರೆದಿದ್ದಾರೆ. ಇದೀಗ ಚೆನ್ನೈನ ಹೊರವಲಯದಲ್ಲಿರುವ ಪಯನೂರ್ ಗ್ರಾಮದಲ್ಲಿ, ಸುಮಾರು 24 ಎಕರೆ ಪ್ರದೇಶಗಳಷ್ಟು ವಿಸ್ತೀರ್ಣದಲ್ಲಿದ್ದ 11 ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ, ಬೇನಾಮಿ ನಿಷೇಧ ಕಾಯ್ದೆಯಡಿ ಮುಟ್ಟುಗೋಲು ಹಾಕಿದೆ. ಇವೆಲ್ಲವೂ ಜಯಲಲಿತಾ ಮುಖ್ಯಮಂತ್ರಿಯಾಗಿದ್ದ 1991-1996ರ ಅವಧಿಯಲ್ಲಿ ಖರೀದಿ ಮಾಡಿದ್ದಾಗಿತ್ತು ಎಂದು ಹೇಳಲಾಗಿದೆ.
ಈ 11 ಆಸ್ತಿಗಳ ಬೆಲೆ 1990ರ ದಶಕದಲ್ಲಿ ಖರೀದಿ ಮಾಡುವಾಗ ಕೇವಲ 20 ಲಕ್ಷ ರೂಪಾಯಿ ಆಗಿತ್ತು. ಆದರೀಗ ಸುಮಾರು 100 ಕೋಟಿ ರೂಪಾಯಿ ಬೆಲೆಬಾಳುತ್ತವೆ. 2014ರಲ್ಲಿ ಕರ್ನಾಟಕ ವಿಶೇಷ ಕೋರ್ಟ್ನ ಅಂದಿನ ನ್ಯಾಯಾಧೀಶರಾಗಿದ್ದ ಜಾನ್ ಮೈಕೆಲ್ , ಈ 11 ಆಸ್ತಿಗಳ ಸಂಬಂಧ ತೀರ್ಪು ನೀಡುವಾಗ ಇವಿಷ್ಟೂ ಕೂಡ ನ್ಯಾಯಸಮ್ಮತವಾಗಿ ಮಾಡಿದ ಆಸ್ತಿಗಳಲ್ಲ ಎಂದು ಹೇಳಿದ್ದರು. ಆ ತೀರ್ಪನ್ನು ಆಧರಿಸಿಯೇ ಇದೀಗ ಐಟಿ ಇಲಾಖೆ ಜಪ್ತಿ ಮಾಡಿದೆ. ಅದರ ಅನ್ವಯ, ವಿ.ಕೆ.ಶಶಿಕಲಾ ಈ ಆಸ್ತಿಗಳನ್ನು ಬಳಕೆ ಮಾಡಬಹುದು. ಆದರೆ ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ವ್ಯವಹಾರಗಳನ್ನೂ ಮಾಡುವಂತಿಲ್ಲ. 66ವರ್ಷದ ಶಶಿಕಲಾ 2017ರಿಂದಲೈ ಜೈಲಿನಲ್ಲಿಯೇ ಇದ್ದರು. 2019ರಲ್ಲಿ ಶಶಿಕಲಾ ಅವರ ಸುಮಾರು 1600 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಐಟಿ ಇಲಾಖೆ ಮುಟ್ಟುಗೋಲು ಹಾಕಿದೆ.
ಇದನ್ನೂ ಓದಿ: ಆ್ಯಂಕರ್ ಅನುಶ್ರೀಗೆ ಮತ್ತೆ ಸಂಕಷ್ಟ; ಪ್ರಕರಣ ರೀ ಓಪನ್ ಮಾಡಲು ಅರ್ಜಿ
ಟೋಯಿಂಗ್ ಸಿಬ್ಬಂದಿ ಜೊತೆ ಕಾರು ಮಾಲಕಿ ಮಾತಿನ ಚಕಮಕಿ; ಟೋಯಿಂಗ್ ವಾಹನ ಹತ್ತಿ ಪ್ರತಿಭಟನೆ
Published On - 5:12 pm, Wed, 8 September 21