ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿದ್ದ ಭಾರತೀಯ ವಾಯುಪಡೆಯ ಅತ್ಯಂತ ಅಪಾಯಕಾರಿ ಫೈಟರ್ ಜೆಟ್ ಎಂದೇ ಕರೆಯಲ್ಪಡುವ ಸೂಪರ್ ಹರ್ಕ್ಯುಲಸ್ C-130J ವಿಮಾನ ಇಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ರಾಜಸ್ಥಾನದ ಬರ್ಮೆರ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಗೆ ತುರ್ತು ಭೂಸ್ಪರ್ಶದ ಸೌಲಭ್ಯಕ್ಕಾಗಿ ಹೆದ್ದಾರಿಯನ್ನು ನಿರ್ಮಿಸಿದೆ. ಈ ರಸ್ತೆಯಲ್ಲಿ ಇಬ್ಬರು ಕೇಂದ್ರ ಸಚಿವರು ಹಾಗೂ ವಾಯುಪಡೆಯ ಚೀಫ್ ಮಾರ್ಷಲ್ ಆರ್ಕೆಎಸ್ ಬದೂರಿಯ ಅವರಿದ್ದ ಯುದ್ಧ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.
ಭಾರತಮಾಲಾ ಯೋಜನೆಯ ಅಡಿ 765.52 ಕೋಟಿ ರೂ. ವೆಚ್ಚದಲ್ಲಿ ಗಗರಿಯಾ-ಭಕಾಸರ್ ಮತ್ತು ಸತ್ತ-ಗಾಂಧವ್ ವಿಭಾಗದ ದ್ವಿಪಥದ ಒಟ್ಟು 196.97 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ವಾಯುಪಡೆಯ ವಿಮಾನಗಳ ತುರ್ತು ಭೂಸ್ಪರ್ಶಕ್ಕೆ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದೆ. ಭಾರತೀಯ ವಾಯುಪಡೆ ತುರ್ತು ಭೂ ಸ್ಪರ್ಶಕ್ಕಾಗಿ ಬಳಸಲಾಗಿರುವ ಮೊದಲ ರಾಷ್ಟ್ರೀಯ ಹೆದ್ದಾರಿ ಇದಾಗಿದೆ ಎಂದು ಎಎನ್ಐ ವರದಿ ಮಾಡಿದೆ.
#WATCH | In a first, Jaguar aircraft carries out a touch and go landing at the emergency landing field on the national highway in Jalore, Rajasthan pic.twitter.com/e2FIPHUUa2
— ANI (@ANI) September 9, 2021
ಕೇಂದ್ರ ಸಚಿವರು ಹಾಗೂ ವಾಯುಪಡೆಯ ಚೀಫ್ ಮಾರ್ಷಲ್ ಇದ್ದ ಯುದ್ಧ ವಿಮಾನ ಹೆದ್ದಾರಿಯಲ್ಲಿ ಲ್ಯಾಂಡ್ ಆಗಿರುವ ವಿಡಿಯೋಗಳು ವೈರಲ್ ಆಗಿವೆ. ಈ ಮೂಲಕ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತೊಂದು ಮೈಲುಗಲ್ಲು ಸಾಧಿಸಿದೆ.
#WATCH | For the first time, a Sukhoi Su-30 MKI fighter aircraft lands at the national highway in Jalore, Rajasthan pic.twitter.com/BVVOtCpT0H
— ANI (@ANI) September 9, 2021
ಬರ್ಮೆರ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ 3.5 ಕಿ.ಮೀ. ಉದ್ದದ ಏರ್ಸ್ಟ್ರಿಪ್ನಲ್ಲಿ ಯುದ್ಧ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ. ಈ ವೇಳೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಾನು ಈ ಹೊಸ ಪ್ರಯತ್ನದಲ್ಲಿ ಭಾಗಿಯಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ರಸ್ತೆಯಲ್ಲಿ ಸಾಮಾನ್ಯವಾಗಿ ಕಾರು, ಬಸ್, ಟ್ರಕ್, ಬೈಕ್ಗಳು ಮಾತ್ರ ಓಡಾಡುತ್ತಿತ್ತು. ಆದರೆ, ಈಗ ವಿಮಾನ ಕೂಡ ಚಲಿಸುವ ಅತ್ಯಾಧುನಿಕ ಸೌಲಭ್ಯವನ್ನು ಲೋಕಾರ್ಪಣೆ ಮಾಡಿದ್ದೇವೆ. ಈ ಯುದ್ಧ ವಿಮಾನ 1971ರಲ್ಲಿ ನಡೆದ ಯುದ್ಧಕ್ಕೆ ಸಾಕ್ಷಿಯಾಗಿತ್ತು. ಇಲ್ಲೇ ಸಮೀಪದಲ್ಲಿ ಅಂತಾರಾಷ್ಟ್ರೀಯ ಗಡಿಯೂ ಇರುವುದರಿಂದ ಮುಂದಿನ ದಿನಗಳಲ್ಲಿ ಈ ಹೆದ್ದಾರಿ ಅನುಕೂಲವಾಗಲಿದೆ ಎಂದಿದ್ದಾರೆ.
#WATCH | C-130J Super Hercules transport aircraft with Defence Minister Rajnath Singh, Road Transport Minister Nitin Gadkari & Air Chief Marshal RKS Bhadauria onboard lands at Emergency Field Landing at the National Highway in Jalore, Rajasthan pic.twitter.com/BmOKmqyC5u
— ANI (@ANI) September 9, 2021
ಇದು ಕೇವಲ ಯುದ್ಧದ ಸಂದರ್ಭದಲ್ಲಿ ಬಳಸಲು ನಿರ್ಮಿಸಿರುವುದಲ್ಲ. ಇದರಿಂದ ರಕ್ಷಣಾ ಕಾರ್ಯಾಚರಣೆಗೂ ಬಹಳ ಸಹಕಾರಿಯಾಗಲಿದೆ. ಇಲ್ಲಿ ಹೆಲಿಪ್ಯಾಡ್ ಅನ್ನು ಕೂಡ ನಿರ್ಮಿಸಲಾಗುತ್ತಿದೆ. ನೈಸರ್ಗಿಕ ವಿಕೋಪಗಳು ಕೂಡ ಯಾವ ಯುದ್ಧಕ್ಕೂ ಕಡಿಮೆಯಿಲ್ಲ. ಯುದ್ಧದ ವೇಳೆ ಆಗುವ ಅನಾಹುತ, ನಷ್ಟಗಳು ಇಂತಹ ಪ್ರಾಕೃತಿಕ ದುರಂತದ ಸಂದರ್ಭದಲ್ಲೂ ನಡೆಯುತ್ತವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
#WATCH | C-130J Super Hercules transport aircraft with Defence Minister Rajnath Singh, Road Transport Minister Nitin Gadkari & Air Chief Marshal RKS Bhadauria onboard lands at Emergency Field Landing at the National Highway in Jalore, Rajasthan pic.twitter.com/BmOKmqyC5u
— ANI (@ANI) September 9, 2021
ಈ ವೇಳೆ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಭಾರತೀಯ ವಾಯುಪಡೆಗಾಗಿ 15 ದಿನಗಳಲ್ಲಿ ಏರ್ಸ್ಟ್ರಿಪ್ ನಿರ್ಮಿಸುವ ಮೂಲಕ ರಸ್ತೆ ಸಾರಿಗೆ ಇಲಾಖೆ ಅಭಿವೃದ್ಧಿಯತ್ತ ಮತ್ತೊಂದು ಹೆಜ್ಜೆಯಿಟ್ಟಿದೆ. ಏರ್ಸ್ಟ್ರಿಪ್ ನಿರ್ಮಿಸಲು ಸಾಮಾನ್ಯವಾಗಿ ಒಂದರಿಂದ ಒಂದೂವರೆ ವರ್ಷ ಸಮಯ ಬೇಕಾಗುತ್ತದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಆರ್ಕೆಎಸ್ ಬದೌರಿಯ ಹೇಳಿದ್ದರು. ಆದರೆ, ಕೇವಲ 15 ದಿನಗಳಲ್ಲಿ ಉತ್ತಮ ಉಣಮಟ್ಟದಲ್ಲಿ ಅದನ್ನು ನಿರ್ಮಿಸಿಕೊಡುವುದಾಗಿ ನಾನು ಅವರಿಗೆ ಭರವಸೆ ನೀಡಿದ್ದೆ. ಅದರಂತೆ ನಾನು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
Whenever an out-of-the-box idea is proposed, apprehensions emerge. But glad for the support from the Defence Ministry and Airforce that has led to the successful launch of this 3 km long road-cum-air strip: Union Transport Minister Nitin Gadkari in Jalore, Rajasthan pic.twitter.com/LiV3vRtLAc
— ANI (@ANI) September 9, 2021
ಕೊವಿಡ್ ಅಬ್ಬರದ ನಡುವೆಯೂ ನಾವು ಪ್ರತಿ ದಿನ 38 ಕಿ.ಮೀ. ರಸ್ತೆಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದು ವಿಶ್ವದಲ್ಲೇ ಮೊದಲಾಗಿದೆ. ಕೇವಲ 24 ಗಂಟೆಯಲ್ಲಿ 2.5 ಕಿ.ಮೀ ಉದ್ದದ ಮುಂಬೈ- ದೆಹಲಿ ಎಕ್ಸ್ಪ್ರೆಸ್ ಹೈವೇ ನಿರ್ಮಿಸಿದ್ದೇವೆ. ಒಂದೇ ದಿನದಲ್ಲಿ ಬಿಜಾಪುರದಿಂದ ಸೋಲಾಪುರದವರೆಗೆ 26 ಕಿ.ಮೀ. ಉದ್ದದ ಸಿಂಗಲ್ ಲೇನ್ ರಸ್ತೆಯನ್ನು ನಿರ್ಮಿಸಿದ್ದೇವೆ. ಈ ಮೂರು ಕೂಡ ವಿಶ್ವ ದಾಖಲೆಯಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಇದನ್ನೂ ಓದಿ: Viral Video: ಚಮಚದಿಂದ ಜೈಲಿನ ಟಾಯ್ಲೆಟ್ ನೆಲ ಕೊರೆದು ಹಾಲಿವುಡ್ ಸ್ಟೈಲಲ್ಲಿ ಉಗ್ರರು ಪರಾರಿ!
ಪ್ರಥಮ ‘ಸ್ವದೇಶಿ’ ವಿಮಾನವಾಹಕ ನೌಕೆ ಮುಂದಿನ ವರ್ಷ ಕಾರ್ಯಾರಂಭ: ರಾಜನಾಥ್ ಸಿಂಗ್
(WATCH Video IAF Drill on India’s New Emergency Landing Strip on Rajasthan Highway Rajnath Singh, Nitin Gadkari on Board)
Published On - 1:54 pm, Thu, 9 September 21