ನಮ್ಮದೇ ಬಾಹ್ಯಾಕಾಶ ನಿಲ್ದಾಣ ಹೊಂದುತ್ತೇವೆ; ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ಪ್ರಧಾನಿ ಮೋದಿ ವಿಶ್ವಾಸ

ಇಂದು ರಾಷ್ಟ್ರೀಯ ಬಾಹ್ಯಾಕಾಶ ದಿನ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ಕಾರ್ಯಾಚರಣೆಯ ಯಶಸ್ಸನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಭಾರತ ದೇಶವು ಶೀಘ್ರದಲ್ಲೇ ಗಗನಯಾತ್ರಿಗಳ ತಂಡವನ್ನು ನಿರ್ಮಿಸಲಿದೆ, ನಾವು ನಮ್ಮದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಹೊಂದುತ್ತೇವೆ ಎಂದು ಘೋಷಿಸಿದ್ದಾರೆ.

ನಮ್ಮದೇ ಬಾಹ್ಯಾಕಾಶ ನಿಲ್ದಾಣ ಹೊಂದುತ್ತೇವೆ; ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ಪ್ರಧಾನಿ ಮೋದಿ ವಿಶ್ವಾಸ
Modi

Updated on: Aug 23, 2025 | 7:45 PM

ನವದೆಹಲಿ, ಆಗಸ್ಟ್ 23: ಇಂದು (ಶನಿವಾರ) ರಾಷ್ಟ್ರೀಯ ಬಾಹ್ಯಾಕಾಶ ದಿನದ ಹಿನ್ನೆಲೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಭಾರತ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವತ್ತ ಕೆಲಸ ಮಾಡುತ್ತಿದೆ ಎಂದು ಘೋಷಿಸಿದ್ದಾರೆ. ಈ ವೇಳೆ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಅವರ ಬಾಹ್ಯಾಕಾಶ ಕಾರ್ಯಾಚರಣೆಯ ಯಶಸ್ಸನ್ನು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. ಭಾರತವು ಶೀಘ್ರದಲ್ಲೇ ಗಗನಯಾತ್ರಿಗಳ ಗುಂಪನ್ನು ನಿರ್ಮಿಸಲಿದೆ ಎಂದು ಅವರು ಘೋಷಿಸಿದ್ದಾರೆ. ಗಗನಯಾನದತ್ತ ಆಸಕ್ತಿ ತೋರಿಸಲು ಮೋದಿ ಯುವಕ-ಯುವತಿಯರನ್ನು ಮನವಿ ಮಾಡಿದ್ದಾರೆ.

“ಇಂದು ಭಾರತವು ಅರೆ-ಕ್ರಯೋಜೆನಿಕ್ ಎಂಜಿನ್‌ಗಳು ಮತ್ತು ವಿದ್ಯುತ್ ಪ್ರೊಪಲ್ಷನ್‌ನಂತಹ ಅದ್ಭುತ ತಂತ್ರಜ್ಞಾನಗಳಲ್ಲಿ ವೇಗವಾಗಿ ಮುನ್ನಡೆಯುತ್ತಿದೆ. ಶೀಘ್ರದಲ್ಲೇ ಎಲ್ಲ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ ಭಾರತವು ಗಗನಯಾನದೊಂದಿಗೆ ಮೇಲೇರಲಿದೆ. ಮುಂಬರುವ ದಿನಗಳಲ್ಲಿ ಭಾರತವು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Shubhanshu Shukla: ಬಾಹ್ಯಾಕಾಶದಿಂದ ಭೂಮಿಗೆ ಮರಳಿರುವ ಶುಭಾಂಶು ಶುಕ್ಲಾ ಭಾರತಕ್ಕೆ ಬರೋದು ಯಾವಾಗ?

ಈ ವರ್ಷ ‘ಆರ್ಯಭಟದಿಂದ ಗಗನಯಾನಕ್ಕೆ: ಪ್ರಾಚೀನ ಬುದ್ಧಿವಂತಿಕೆಯಿಂದ ಅನಂತ ಸಾಧ್ಯತೆಗಳಿಗೆ’ ಎಂಬ ವಿಷಯದ ಮೇಲೆ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತಿದೆ.


“3 ದಿನಗಳ ಹಿಂದೆ ನಾನು ಬಾಹ್ಯಾಕಾಶ ಯಾನ ಮುಗಿಸಿಕೊಂಡು ಬಂದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಭೇಟಿಯಾದೆ. ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಪ್ರತಿಯೊಬ್ಬ ಭಾರತೀಯನಲ್ಲಿ ಹೆಮ್ಮೆಯನ್ನು ತುಂಬಿದರು. ಅವರು ನನಗೆ ತ್ರಿವರ್ಣ ಧ್ವಜವನ್ನು ತೋರಿಸಿದ ಕ್ಷಣ, ಭಾವನೆ, ಪದಗಳಿಗೆ ಮೀರಿದ್ದು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ

“ಗ್ರೂಪ್ ಕ್ಯಾಪ್ಟನ್ ಶುಭಾಂಶು ಅವರೊಂದಿಗಿನ ನನ್ನ ಚರ್ಚೆಯಲ್ಲಿ ಹೊಸ ಭಾರತದ ಯುವಕರ ಅಪಾರ ಧೈರ್ಯ ಮತ್ತು ಕನಸುಗಳನ್ನು ನೋಡಿದ್ದೇನೆ. ಈ ಕನಸುಗಳನ್ನು ಮುಂದಕ್ಕೆ ಕೊಂಡೊಯ್ಯಲು ನಾವು ಭಾರತದ ಗಗನಯಾತ್ರಿಗಳ ಗುಂಪನ್ನು ಸಹ ಸಿದ್ಧಪಡಿಸಲಿದ್ದೇವೆ. ಇಂದು ಬಾಹ್ಯಾಕಾಶ ದಿನದಂದು ಭಾರತದ ಕನಸುಗಳಿಗೆ ರೆಕ್ಕೆಗಳನ್ನು ನೀಡಲು ಈ ಗಗನಯಾತ್ರಿಗಳ ಗುಂಪಿಗೆ ಸೇರಲು ನಾನು ನನ್ನ ಯುವ ಸ್ನೇಹಿತರನ್ನು ಆಹ್ವಾನಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ