
ದೆಹಲಿ: ಭಾರತದಲ್ಲಿ ಕೊವಿಡ್ 19 ಅಲೆ ಜಾಸ್ತಿಯಾಗಿದೆ. ಕೊವಿಡ್ 19 ಸೋಂಕು ಕಾಲಿಟ್ಟಾಗಿನಿಂದಲೂ ಮಾಸ್ಕ್ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಈಗಂತೂ ಡಬಲ್ ಮಾಸ್ಕ್ ಧರಿಸಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಹಲವು ಗೊಂದಲಗಳಿವೆ. ಇನ್ನು ಎರಡು ಮಾಸ್ಕ್ ಹೇಗೆ ಧರಿಸಬೇಕು? ಅದು ಹೇಗಿರಬೇಕು? ಎಂಬ ಬಗ್ಗೆ ಕೇಂದ್ರ ಸರ್ಕಾರ ಭಾನುವಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಎರಡು ಮಾಸ್ಕ್ ಧರಿಸುವ ಕ್ರಮ ಹೇಗಿರಬೇಕು?
1. ಎರಡು ಮಾಸ್ಕ್ಗಳಲ್ಲಿ ಒಂದು ಸರ್ಜಿಕಲ್ ಮಾಸ್ಕ್ ಆಗಿರಬೇಕು ಹಾಗೂ ಇನ್ನೊಂದು ಎರಡು ಅಥವಾ ಮೂರು ಲೇಯರ್ಗಳುಳ್ಳ ಬಟ್ಟೆಯ ಮಾಸ್ಕ್ ಆಗಿರಬೇಕು.
2. ಮೂಗಿನ ಮೇಲ್ಭಾಗವನ್ನು ಗಟ್ಟಿಯಾಗಿ ಬಿಗಿದಿರುವಂತೆ ಮಾಸ್ಕ್ ಧರಿಸಬೇಕು. ಹಾಗೇ, ಉಸಿರಾಟಕ್ಕೆ ಯಾವುದೇ ತೊಂದರೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
3. ಇದರಲ್ಲಿ ಸರ್ಜಿಕಲ್ ಮಾಸ್ಕ್ನ್ನು ಬದಲಿಸಬೇಕು. ಬಟ್ಟೆ ಮಾಸ್ಕ್ನ್ನು ಪ್ರತಿದಿನ ತೊಳೆಯಬೇಕು.
ಏನು ಮಾಡಬಾರದು?
1. ಒಂದೇ ತೆರನಾದ ಎರಡು ಮಾಸ್ಕ್ಗಳನ್ನು ಧರಿಸಬಾರದು. ಅಂದರೆ ಎರಡೂ ಬಟ್ಟೆಯ ಮಾಸ್ಕ್ ಆಗಬಾರದು ಅಥವಾ ಎರಡೂ ಸರ್ಜಿಕಲ್ ಮಾಸ್ಕ್ ಆಗಿರಬಾರದು. ಎರಡು ಬೇರೆಬೇರೆ ವಿಧದ ಮಾಸ್ಕ್ ಧರಿಸುವುದು ಕಡ್ಡಾಯ ಹಾಗೂ ಸುರಕ್ಷಿತ.
2. ಪ್ರತಿದಿನವೂ ಮಾಸ್ಕ್ ಚೇಂಜ್ ಮಾಡಲೇಬೇಕು. ಅದರಲ್ಲಿ ಬಟ್ಟೆಯ ಮಾಸ್ಕ್ನ್ನು ತೊಳೆದು ಬಳಸಬಹುದು.
ಸಾರ್ಸ್ ಕೊವಿಡ್ 19 ಕಣಗಳು ಬಾಯಿ-ಮೂಗು ಪ್ರವೇಶಿಸದಂತೆ ತಡೆಯುವಲ್ಲಿ ಒಂದು ಮಾಸ್ಕ್ಗಿಂತ, ಎರಡು ಮಾಸ್ಕ್ಗಳು ಪರಿಣಾಮಕಾರಿ ಎಂಬುದು ಅಧ್ಯಯನದಲ್ಲಿ ಸ್ಪಷ್ಟವಾಗಿದೆ. ಈ ವಿಚಾರವನ್ನು JAMA ಎಂಬ ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ಜರ್ನಲ್ ಕೂಡ ಪ್ರಕಟಿಸಿದೆ.
ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಮತ್ತೆ ಮುಂದೂಡಿಕೆ: ಕೊವಿಡ್ನಿಂದಾಗಿ ಚುನಾವಣೆ ಬೇಡ ಎಂದ ಕಾಂಗ್ರೆಸ್ ನಾಯಕರು
ಕೊಪ್ಪಳ: ರೆಮ್ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಪ್ರಕರಣ; ಬೆಳಕಿಗೆ ಬಂದ 3 ಲಕ್ಷ ವ್ಯವಹಾರ
Wearing two masks to prevent the Covid 19 infection study reveals
Published On - 4:56 pm, Mon, 10 May 21