ಬುರ್ಖಾ ತೊಟ್ಟ ಮತದಾರರನ್ನು ಪತ್ತೆ ಹಚ್ಚಲು ಮಹಿಳಾ ಪೊಲೀಸರನ್ನು ನೇಮಿಸಿ: ಬಿಜೆಪಿ ಮನವಿ
ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮಹಿಳೆಯರು ಗುಂಪು ಗುಂಪಾಗಿ ಬರುವುದರಿಂದ ಮತಗಟ್ಟೆಗಳಲ್ಲಿರುವ ಪುರುಷ ಪೊಲೀಸ್ ಸಿಬ್ಬಂದಿಗಳಿಗೆ ಬುರ್ಖಾ ತೊಟ್ಟವರನ್ನು ಪರಿಶೀಲಿಸುವುದು ಕಷ್ಟ. ಅಲ್ಲದೇ ಬಾಂಗ್ಲಾ ಗಡಿ ಭಾಗದಂತಹ ಪ್ರದೇಶಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಿರುವುದು ಸಂಶಯಾಸ್ಪದ ಆಗಿದೆ.
ಕೋಲ್ಕತ್ತಾ: ಬುರ್ಖಾ ತೊಟ್ಟು ಮತ ಚಲಾಯಿಸಲು ಬರುವ ಮತದಾರರ ಗುರುತು ಪತ್ತೆ ಮಾಡಲು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನೇಮಿಸಬೇಕೆಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕವು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಪಾರದರ್ಶಕ ಮತದಾನ ಪ್ರಕ್ರಿಯೆಗೆ ಅನುವಾಗುವ ಸಲುವಾಗಿ ಮತಗಟ್ಟೆಗಳಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮುಸ್ಲಿಂ ಮತದಾರರು ಅಧಿಕವಾಗಿರುವ ಪ್ರದೇಶಗಳಲ್ಲಿ ಬುರ್ಖಾ ತೊಟ್ಟು ಬರುವವರ ಗುರುತು ಪತ್ತೆ ಹಚ್ಚಲು ಮತ್ತು ಆ ಮೂಲಕ ಅಕ್ರಮ ತಡೆಗಟ್ಟಲು ಮಹಿಳಾ ಸಿಬ್ಬಂದಿ ಅವಶ್ಯಕತೆ ಇದೆ. ಇದನ್ನು ಗಮನದಲ್ಲಿರಿಸಿಕೊಂಡು ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಬಿಜೆಪಿ ಈ ಪತ್ರ ಬರೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಚುನಾವಣಾ ಆಯೋಗದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಈ ಪತ್ರವನ್ನು ಎಎನ್ಐ ಸುದ್ದಿ ಸಂಸ್ಥೆ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
WB: BJP writes to Dy Election Commissioner for deployment of female CPF personnel in Assembly polls."In minority (Muslim) areas,female voters normally come clad in burqa. It's not possible for CPF jawans to establish their identity before permitting them entry in booths,"it reads pic.twitter.com/gRZVtfKD12
— ANI (@ANI) December 17, 2020
ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮಹಿಳೆಯರು ಗುಂಪು ಗುಂಪಾಗಿ ಬರುವುದರಿಂದ ಮತಗಟ್ಟೆಗಳಲ್ಲಿರುವ ಪುರುಷ ಪೊಲೀಸ್ ಸಿಬ್ಬಂದಿಗೆ ಬುರ್ಖಾ ತೊಟ್ಟವರನ್ನು ಪರಿಶೀಲಿಸುವುದು ಕಷ್ಟ. ಅಲ್ಲದೇ ಬಾಂಗ್ಲಾ ಗಡಿ ಭಾಗದಂತಹ ಪ್ರದೇಶಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಿರುವುದು ಸಂಶಯಾಸ್ಪದ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ಪರಿಶೀಲನೆಯ ಅಗತ್ಯವಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಕಳೆದ ಚುನಾವಣೆಗಳಲ್ಲಿ ಮೃತಪಟ್ಟವರು ಹಾಗೂ ಬೇರೆ ಊರುಗಳಿಗೆ ತೆರಳಿದವರ ಹೆಸರು ಸಹ ಮತದಾರರ ಪಟ್ಟಿಯಲ್ಲಿತ್ತು. ಅಲ್ಲದೇ ಕೆಲವು ಪ್ರದೇಶಗಳಲ್ಲಿ ಸತ್ತವರ ಹೆಸರಿನಲ್ಲೂ ಮತ ಚಲಾವಣೆ ಆಗಿರುವ ಉದಾಹರಣೆ ಇದೆ. ಈ ತೆರನಾದ ಅಕ್ರಮಗಳನ್ನು ತಡೆಗಟ್ಟಲು ಮಹಿಳಾ ಸಿಬ್ಬಂದಿಯನ್ನು ನೇಮಿಸಿ ಬುರ್ಖಾ ತೊಟ್ಟವರನ್ನು ಪರಿಶೀಲಿಸುವುದು ಅನಿವಾರ್ಯ ಎಂದು ಪಶ್ಚಿಮ ಬಂಗಾಳ ಬಿಜೆಪಿ ಚುನಾವಣಾ ಆಯೋಗದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದೆ.
ಬುರ್ಖಾ ಧರಿಸಿ ವಾಚ್ ಅಂಗಡಿಗೆ ಎಂಟ್ರಿ ಕೊಟ್ಟ ವೈದ್ಯ ಪೊಲೀಸರ ಅತಿಥಿಯಾದ!