ಒಂದು ಸಿದ್ಧಾಂತ ಉಳಿದೆಲ್ಲಾ ಆಲೋಚನೆಗಳ ಮೇಲೆ ಸವಾರಿ ಮಾಡುತ್ತಿದೆ; BJP, RSS ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಒಂದು ಸಿದ್ಧಾಂತ ಉಳಿದೆಲ್ಲಾ ಆಲೋಚನೆಗಳ ಮೇಲೆ ಸವಾರಿ ಮಾಡುತ್ತಿದೆ; BJP, RSS ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ

West Bengal Elections 2021: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಬ್ಬರಿಗೆ ಉಪಕಾರಿ. ಹಮ್ ದೋ ಹಮಾರೆ ದೋಗಳಿಗೆ ಅವರು ಉಪಯುಕ್ತರು. ಬಡವರಿಗೆ ಮೋದಿ ನಿರುಪಯುಕ್ತರಾಗಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

TV9kannada Web Team

| Edited By: ganapathi bhat

Apr 06, 2022 | 7:40 PM

ಚೆನ್ನೈ: ಪ್ರಧಾನಮಂತ್ರಿ RSS ಮತ್ತು BJP ಹೊರತುಪಡಿಸಿ ಎಲ್ಲಾ ಯೋಚನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಭಾರತ ಒಂದು ಸಂಪ್ರದಾಯ, ಒಂದು ಇತಿಹಾಸ, ಒಂದು ಭಾಷೆ ಎಂದು ಮೋದಿ ಹೇಳುತ್ತಾರೆ. ಅಂದರೆ, ತಮಿಳು ಭಾಷೆ, ಇತಿಹಾಸ, ಸಂಪ್ರದಾಯಗಳು ಭಾರತದ್ದಲ್ಲ ಎಂದು ಅದರ ಅರ್ಥವೇ? ಒಂದು ಸಿದ್ಧಾಂತ ಅಥವಾ ವಿಚಾರವು ಉಳಿದೆಲ್ಲಾ ಆಲೋಚನೆಗಳ ಮೇಲೆ ಸವಾರಿ ಮಾಡುವ ಭಾರತ ನಮಗೆ ಬೇಡ ಎಂದು ರಾಹುಲ್ ಗಾಂಧಿ ಹರಿಹಾಯ್ದರು.

ತಮಿಳುನಾಡು, ಪುದುಚೇರಿ, ಕೇರಳ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಾರ್ಚ್ ಮತ್ತು ಏಪ್ರಿಲ್​ನಲ್ಲಿ ಚುನಾವಣೆ ನಡೆಯಲಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಗಳು ಆಡಳಿತದ ಚುಕ್ಕಾಣಿ ಹಿಡಿಯಲು ಶತಪ್ರಯತ್ನ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಪೂರ್ವ ಪ್ರಚಾರದಲ್ಲಿ ಪಾಲ್ಗೊಂಡರು.

ಪ್ರಧಾನ ಮಂತ್ರಿ ಉಪಕಾರಿಯೇ ಅಥವಾ ನಿರುಪಕಾರಿಯೇ ಎಂಬುದು ಪ್ರಶ್ನೆಯಲ್ಲ. ಅವರು ಯಾರಿಗೆ ಉಪಯುಕ್ತರು ಎಂಬುದು ಪ್ರಶ್ನೆ ಎಂದು ರಾಹುಲ್ ಗಾಂಧಿ ಕುಟುಕಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಬ್ಬರಿಗೆ ಉಪಕಾರಿ. ಹಮ್ ದೋ ಹಮಾರೆ ದೋಗಳಿಗೆ ಅವರು ಉಪಯುಕ್ತರು. ಅವರು ತಮ್ಮ ಶ್ರೀಮಂತಿಕೆ ಹೆಚ್ಚಿಸಲು ಮೋದಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಅದರ ಹೊರತಾಗಿ ಬಡವರಿಗೆ ಮೋದಿ ನಿರುಪಯುಕ್ತರಾಗಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಸಂಪತ್ತಿನ ಹಂಚಿಕೆ ಭಾರತದಲ್ಲಿ ಅಸ್ಥವ್ಯಸ್ಥವಾಗಿದೆ. ಬಿಜೆಪಿ ಆಡಳಿತದಲ್ಲಿ ಈ ಸನ್ನಿವೇಶ ಮತ್ತಷ್ಟು ಹೀನಾಯವಾಗಿದೆ. ಬಡವರಿಗೆ ಕನಿಷ್ಠ ಆದಾಯ ಭರವಸೆಗಾಗಿ ನಾವು NYAY ಯೋಜನೆಯನ್ನು ಜಾರಿಗೆ ತರುತ್ತೇವೆ. ನಮಗೆ ಆಡಳಿತ ಸಿಕ್ಕರೆ ಕನಿಷ್ಠ ಆದಾಯ ಸಿಗುವಂತೆ ನೋಡಿಕೊಳ್ಳುತ್ತೇವೆ. ಬಡತನ ನಿವಾರಣೆಯಾಗುವವರೆಗೆ ಈ ಯೋಜನೆ ಜಾರಿಯಾಗಿರುತ್ತದೆ ಎಂದು ರಾಹುಲ್ ಗಾಂಧಿ ಆಶ್ವಾಸನೆ ನೀಡಿದರು.

ನ್ಯಾಯಾಂಗ ಮತ್ತು ಪಾರ್ಲಿಮೆಂಟ್​ನಲ್ಲಿ ಮಹಿಳಾ ಮೀಸಲಾತಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಎಲ್ಲಾ ಕ್ಷೇತ್ರಗಳಲ್ಲೂ ಭಾರತೀಯ ಪುರುಷರು ಮಹಿಳೆಯರನ್ನು ಸಮಾನವಾಗಿ ಕಾಣಬೇಕು. ತಮ್ಮನ್ನು ತಾವು ಕಂಡಂತೆ ಮಹಿಳೆಯರನ್ನು ಕೂಡ ನೋಡಬೇಕು ಎಂದು ತೂತುಕುಡಿಯ VOC ಕಾಲೇಜ್​ನಲ್ಲಿ ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.

ಕಳೆದ 6 ವರ್ಷಗಳಿಂದ ಭಾರತದ ಆಯ್ದ ಸಂಸ್ಥೆಗಳ ಮೇಲೆ ಹಾಗೂ ಭಾರತವನ್ನು ಒಂದಾಗಿ ಹಿಡಿದಿಡುವ ಮಾಧ್ಯಮಗಳ ಮೇಲೆ ವ್ಯವಸ್ಥಿತ ದಾಳಿಗಳಾಗುತ್ತಿದೆ. ಪ್ರಜಾಪ್ರಭುತ್ವವು ಒಮ್ಮಲೆ ಸಾಯುವುದಿಲ್ಲ. ಆದರೆ, ನಿಧಾನವಾಗಿ ಸಾವನ್ನಪ್ಪುತ್ತದೆ. RSS ಸಾಂಸ್ಥಿಕ ಸಮತೋಲನವನ್ನು ಹಾಳುಗೆವಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ತಮಿಳುನಾಡು ತೂತುಕುಡಿಗೆ ಆಗಮಿಸಿದ ರಾಹುಲ್ ಗಾಂಧಿಗೆ ಭರ್ಜರಿ ಸ್ವಾಗತ

ಇದನ್ನೂ ಓದಿ: Rahul Gandhi at Kerala: ಕೇರಳದಲ್ಲಿ ರಾಹುಲ್ ಗಾಂಧಿ; ಮೀನುಗಾರರ ಒಡನಾಟ, ಮತಬೇಟೆಯ ಉತ್ಸಾಹ

ಸ್ವಕ್ಷೇತ್ರ ವಯನಾಡ್​ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ

Follow us on

Related Stories

Most Read Stories

Click on your DTH Provider to Add TV9 Kannada