ಬಂಗಾಳ ಸರ್ಕಾರವೇ ಹೊಣೆ: ಕೋಲ್ಕತ್ತಾ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ರಾಜ್ಯಪಾಲರ ಪ್ರತಿಕ್ರಿಯೆ

ಪ್ರತಿಭಟನಾನಿರತ ವೈದ್ಯರನ್ನು ಭೇಟಿ ಮಾಡಿದ ನಂತರ ಸಿವಿ ಆನಂದ ಬೋಸ್, ನಾನು ನಿಮ್ಮೊಂದಿಗಿದ್ದೇನೆ ಮತ್ತು ಇದನ್ನು ಪರಿಹರಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ನಾನು ನಿಮಗೆ ನ್ಯಾಯದ ಭರವಸೆ ನೀಡುತ್ತೇನೆ. ನನ್ನ ಕಿವಿ ಮತ್ತು ಕಣ್ಣುಗಳು ತೆರೆದಿವೆ ಎಂದು ಹೇಳಿದ್ದಾರೆ. ಹಿಂದಿನ ರಾತ್ರಿ ವಿಧ್ವಂಸಕ ಕೃತ್ಯ ನಡೆದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತುರ್ತು ವಿಭಾಗವನ್ನೂ ರಾಜ್ಯಪಾಲರು ಪರಿಶೀಲಿಸಿದರು.

ಬಂಗಾಳ ಸರ್ಕಾರವೇ ಹೊಣೆ: ಕೋಲ್ಕತ್ತಾ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ರಾಜ್ಯಪಾಲರ ಪ್ರತಿಕ್ರಿಯೆ
ಸಿವಿ ಆನಂದ್ ಬೋಸ್

Updated on: Aug 15, 2024 | 4:50 PM

ಕೊಲ್ಕತ್ತಾ ಆಗಸ್ಟ್ 15: ಗುರುವಾರ ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ ಕೋಲ್ಕತ್ತಾದ (Kolkata) ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (RG Kar Medical College and Hospital) ಪಶ್ಚಿಮ ಬಂಗಾಳದ ಗವರ್ನರ್ ಸಿವಿ ಆನಂದ ಬೋಸ್  (CV Ananda Bose)ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಆಗಸ್ಟ್ 9 ರಂದು ಸ್ನಾತಕೋತ್ತರ ತರಬೇತಿ ವೈದ್ಯರ ಶವ ಪತ್ತೆಯಾದ ವೈದ್ಯಕೀಯ ಸಂಸ್ಥೆಯಲ್ಲಿ ಧರಣಿ ನಿರತ ಕಿರಿಯ ವೈದ್ಯರೊಂದಿಗೆ ಆನಂದ ಬೋಸ್ ಮಾತನಾಡಿದ್ದಾರೆ.  ಏತನ್ಮಧ್ಯೆ, ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣವನ್ನು ಕೈಗೆತ್ತಿಕೊಂಡ ಕೇಂದ್ರೀಯ ತನಿಖಾ ದಳ, ಪಶ್ಚಿಮ ಬಂಗಾಳದ ಉತ್ತರ 24 ಪರಗಣದಲ್ಲಿರುವ ಸಂತ್ರಸ್ತೆಯ ನಿವಾಸಕ್ಕೆ ಭೇಟಿ ನೀಡಿ ಆಕೆಯ ಪೋಷಕರ ಹೇಳಿಕೆಗಳನ್ನು ದಾಖಲಿಸಿದೆ.

ಮಧ್ಯಾಹ್ನ, ಪ್ರಶಿಕ್ಷಣಾರ್ಥಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ನರ್ಸಿಂಗ್ ಸಿಬ್ಬಂದಿ, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಮುತ್ತಿಗೆ ಹಾಕಿ ಉತ್ತರ ನೀಡುವಂತೆ ಪ್ರಾಂಶುಪಾಲರಿಗೆ ಒತ್ತಾಯಿಸಿದ್ದಾರೆ. ಬುಧವಾರ ಮಧ್ಯರಾತ್ರಿ, ಗುಂಪೊಂದು ಆರ್‌ಜಿ ಕರ್ ಆಸ್ಪತ್ರೆ ಆವರಣಕ್ಕೆ ನುಗ್ಗಿ ಪ್ರತಿಭಟನೆಯ ಸ್ಥಳವನ್ನು ಧ್ವಂಸಗೊಳಿಸಿದ್ದು ಮಾತ್ರವಲ್ಲದೆ ವಾಹನಗಳು ಮತ್ತು ಸಾರ್ವಜನಿಕ ಆಸ್ತಿಗಳ ಮೇಲೆ ದಾಳಿ ಮಾಡಿತು. ಭದ್ರತಾ ಅಧಿಕಾರಿಗಳು ಗುಂಪು ಚದುರಿಸಿದ್ದರು.

ರಾಜ್ಯಪಾಲರ ಸುದ್ದಿಗೋಷ್ಠಿ

ಕೋಲ್ಕತ್ತಾ ವೈದ್ಯರ ಅತ್ಯಾಚಾರ-ಕೊಲೆ: ಪ್ರತಿಭಟನೆ ಮತ್ತು ಪ್ರಕರಣದ ಇತ್ತೀಚಿನ ಅಪ್ಡೇಟ್ಸ್

ಪ್ರತಿಭಟನಾನಿರತ ವೈದ್ಯರನ್ನು ಭೇಟಿ ಮಾಡಿದ ನಂತರ ಸಿವಿ ಆನಂದ ಬೋಸ್, ನಾನು ನಿಮ್ಮೊಂದಿಗಿದ್ದೇನೆ ಮತ್ತು ಇದನ್ನು ಪರಿಹರಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ನಾನು ನಿಮಗೆ ನ್ಯಾಯದ ಭರವಸೆ ನೀಡುತ್ತೇನೆ. ನನ್ನ ಕಿವಿ ಮತ್ತು ಕಣ್ಣುಗಳು ತೆರೆದಿವೆ ಎಂದು ಹೇಳಿದ್ದಾರೆ. ಹಿಂದಿನ ರಾತ್ರಿ ವಿಧ್ವಂಸಕ ಕೃತ್ಯ ನಡೆದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತುರ್ತು ವಿಭಾಗವನ್ನೂ ರಾಜ್ಯಪಾಲರು ಪರಿಶೀಲಿಸಿದರು.

“ನಾನು ಏನು ನೋಡಿದೆ, ನಾನು ಏನು ಕೇಳಿದೆ, ನನಗೆ ಏನು ಹೇಳಲಾಗಿದೆ ಮತ್ತು ಏನು ವರದಿಯಾಗಿದೆ ಎಂಬುದು ಗೊತ್ತು. ಇಲ್ಲಿ ನಡೆದಿರುವ ಘಟನೆ ಆಘಾತಕಾರಿ, ಛಿದ್ರಕಾರಿ ಮತ್ತು ಶೋಚನೀಯ. ಇದು ಬಂಗಾಳ ಮತ್ತು ಭಾರತ ಮತ್ತು ಮಾನವೀಯತೆಗೆ ನಾಚಿಕೆಗೇಡಿನ ಸಂಗತಿಯಾಗಿದೆ.ಇದು ನಮ್ಮ ಸುತ್ತಲಿನ ನಾವು ಕಂಡ ಅತ್ಯಂತ ದೊಡ್ಡ ಕುಕೃತ್ಯ. ಕಾನೂನು ಪಾಲಕರೇ ಸಂಚುಕೋರರಾಗಿದ್ದಾರೆ’ ಎಂದು ರಾಜ್ಯಪಾಲರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪೊಲೀಸ್‌ನ ಒಂದು ವಿಭಾಗವನ್ನು ರಾಜಕೀಯಗೊಳಿಸಲಾಗಿದೆ ಮತ್ತು ಅಪರಾಧೀಕರಣಗೊಳಿಸಲಾಗಿದೆ. ಇದು ಕೊನೆಗೊಳ್ಳಬೇಕು. ಇದಕ್ಕೆ ಸರ್ಕಾರವೇ ಹೊಣೆ. ಮೊದಲ ಜವಾಬ್ದಾರಿ ಸರ್ಕಾರದ್ದು. ನಾವು ಭದ್ರತೆಯನ್ನು ಬಯಸುತ್ತೇವೆ ಆದ್ದರಿಂದ ನೀವು ರಾತ್ರಿಯಲ್ಲಿ ಕೆಲಸಕ್ಕೆ ಹೋದಾಗ ನೀವು ಸುರಕ್ಷಿತವಾಗಿರುತ್ತೀರಿ. ಇದು ರಕ್ತಪಾತವಲ್ಲದೆ ಬೇರೇನೂ ಅಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ.

ಮೆಡಿಕಲ್ ಕಾಲೇಜು ಆವರಣವನ್ನು ಧ್ವಂಸಗೊಳಿಸಿದ ಗುಂಪಿನ ಕೃತ್ಯದ ಬಗ್ಗೆ ವಿದ್ಯಾರ್ಥಿಗಳು ಅವರನ್ನು ಕೇಳಿದಾಗ ಬೋಸ್, “ನಾನು ಪೊಲೀಸರಿನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ಅವಲೋಕಿಸಲಿದ್ದೇನೆ. ಆಮೇಲೆ ನಾನು ನಿಮ್ಮೊಂದಿಗೆ ಚರ್ಚಿಸಿ ನಿಮ್ಮ ಅಭಿಪ್ರಾಯವನ್ನು ಪಡೆಯುತ್ತೇನೆ. ನಂತರ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸದವರು ಕಾಂಗ್ರೆಸ್‌ಗೆ ಸಲಹೆ ನೀಡುತ್ತಿದ್ದಾರೆ; ಮಲ್ಲಿಕಾರ್ಜುನ ಖರ್ಗೆ ಆರೋಪ

ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಜೂನಿಯರ್ ವೈದ್ಯೆಯ ಅಮಾನುಷ ಅತ್ಯಾಚಾರ ಮತ್ತು ಹತ್ಯೆಯ ಅಪರಾಧದ ಸ್ಥಳಕ್ಕೆ ಆಗಸ್ಟ್ 14 ರ ತಡರಾತ್ರಿ ಭುಗಿಲೆದ್ದ ಗುಂಪು ವಿಧ್ವಂಸಕ ಕೃತ್ಯದ ಸಮಯದಲ್ಲಿ ಹಾನಿಯಾಗಿಲ್ಲ ಎಂದು ಕೋಲ್ಕತ್ತಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಕೋಲ್ಕತ್ತಾದ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಅನುಪಮ್ ರಾಯ್ ಗುರುವಾರ ಜನಸಮೂಹವು ಉದ್ದೇಶಪೂರ್ವಕ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದೆ ಎಂದು ಆರೋಪಿಸಿದ್ದು ವೈದ್ಯರಿಗೆ ಸುರಕ್ಷಿತ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಬೆಂಬಲವನ್ನು ನೀಡಲು ಸಾರ್ವಜನಿಕರ ಬೆಂಬಲವನ್ನು ಕೋರಿದರು. ಪೊಲೀಸರ ಪ್ರಕಾರ, ಸುಮಾರು 40 ಜನರ ಗುಂಪು ಪ್ರತಿಭಟನಾಕಾರರಂತೆ ವೇಷ ಧರಿಸಿ ಆಸ್ಪತ್ರೆಯ ಆವರಣಕ್ಕೆ ನುಗ್ಗಿ ಆಸ್ತಿಯನ್ನು ಧ್ವಂಸಗೊಳಿಸಿತು. ಇವರು ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದ್ದು ಗುಂಪನ್ನು ಚದುರಿಸಲು ಅಶ್ರುವಾಯು ಪ್ರಯೋಗ ಮಾಡಲಾಗಿತ್ತು. ಘಟನೆಯಲ್ಲಿ ಪೊಲೀಸ್ ವಾಹನ ಮತ್ತು ಸ್ಥಳದಲ್ಲಿದ್ದ ಕೆಲವು ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ