ಟಿವಿ9 ನೆಟ್ವರ್ಕ್ ಬಹುದೊಡ್ಡ ವೇದಿಕೆಯನ್ನು ನಿರ್ಮಾಣ ಮಾಡಿದ ‘ವಾಟ್ ಇಂಡಿಯಾ ಟುಡೇ ಥಿಂಕ್ಸ್’ ಎಂಬ ಕಾರ್ಯಕ್ರಮದ ಮೂಲಕ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದೆ.ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಫೆ.25ರಿಂದ ಫೆ.27ರವರೆಗೆ ದೆಹಲಿಯಲ್ಲಿ ನಡೆಯಲಿದೆ. ಈ ವೇದಿಕೆಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು ಅರ್ಜುನ್ ಮುಂಡಾ ಭಾಗವಹಿಸಲಿದ್ದಾರೆ. ದೇಶದ ರೈತರ ಅಸಮಾಧಾನ ಮತ್ತು ಅವರ ಚಳವಳಿಯ ಅಂತ್ಯಕ್ಕೆ ಸಂಬಂಧಿಸಿದಂತೆ ಮುಂಡಾ ಅವರು ಕೆಲವು ಪರಿಣಾಮಕಾರಿ ವಿಚಾರಗಳನ್ನು ಉಲ್ಲೇಖಿಸಬಹುದು. ಈಗಾಗಲೇ ಚಳವಳಿ ಅಂತ್ಯಗೊಳಿಸುವ ಕುರಿತು 3 ಕೇಂದ್ರ ಸಚಿವರ ತಂಡವು ಮುಂಡಾ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದೆ.
ಅರ್ಜುನ್ ಮುಂಡಾ ‘ಜೈ ಕಿಸಾನ್, ಕ್ಯಾ ಸಮಾಧಾನ್’ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಂವಾದ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ರೈತರ ಬೇಡಿಕೆಗಳು ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ಬಗ್ಗೆ ಮಾತನಾಡಬಹುದು. ಆದರೆ ಈಗಾಗಲೇ ಸರಕಾರ ಮತ್ತು ರೈತ ಸಂಘಟನೆಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದರೂ ಎಲ್ಲವೂ ವಿಫಲವಾಗಿವೆ. ಇದೀಗ ರೈತರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ.
ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ರೈತರ ಆಂದೋಲನದ ಬಗ್ಗೆ ಕೃಷಿ ಸಚಿವ ಅರ್ಜುನ್ ಮುಂಡಾ ಈಗಾಗಲೇ ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ಹಲವು ಸುತ್ತಿನ ಮಾತುಕತೆಗಳಲ್ಲಿ ಕೆಲವು ವಿಷಯಗಳನ್ನು ಒಪ್ಪಿಕೊಳ್ಳಬೇಕು ಅದಕ್ಕೆ ಕೆಲವೊಂದು ಪ್ರಯತ್ನಗಳು ನಡೆಯುತ್ತದೆ. ರೈತರ ಹಿತದೃಷ್ಟಿಯಿಂದ ಕೆಲಸ ಮಾಡಲು ಮೋದಿ ಸರ್ಕಾರ ಬದ್ಧವಾಗಿದೆ. ಇದುವರೆಗೆ ನಡೆದ 4ನೇ ಸುತ್ತಿನ ಮಾತುಕತೆಯಲ್ಲಿ ಸಾಕಷ್ಟು ಅರ್ಥಪೂರ್ಣ ಮಾತುಕತೆ ನಡೆದಿದೆ. ಪ್ರತಿಯೊಬ್ಬರ ಹಿತಾಸಕ್ತಿ ಹೊಂದಿರುವ ಇಂತಹ ಪರಿಹಾರವನ್ನು ನಾವು ಬಯಸುತ್ತೇವೆ. ಮಾತುಕತೆಯಿಂದ ಮಾತ್ರ ಈ ಪರಿಹಾರ ಸಾಧ್ಯ. ನಾವು ಮತ್ತೆ ಮಾತುಕತೆಗೆ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ರೈತರ ಚಳವಳಿ ದೆಹಲಿಗೆ ಬರದಂತೆ ತಡೆಯಲು ಹರಿಯಾಣ ಮತ್ತು ಪಂಜಾಬ್ ಗಡಿಯಲ್ಲಿ ಅತ್ಯಂತ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಪಂಜಾಬ್ ಮತ್ತು ಹರಿಯಾಣದ ಹಲವು ಜಿಲ್ಲೆಗಳಲ್ಲಿ ಇಂಟರ್ನೆಟ್ ಕೂಡ ನಿಷೇಧಿಸಲಾಗಿದೆ. ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳ ಅನುಷ್ಠಾನದ ಜೊತೆಗೆ ಪಿಂಚಣಿ, ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು, 2021 ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ, ವಿದ್ಯುತ್ ದರ ಹೆಚ್ಚಳ ಮತ್ತು 2020-21 ಆಂದೋಲನದಲ್ಲಿ ಸಾವನ್ನಪ್ಪಿದವರಿಗೆ ರೈತರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರಕ್ಕೆ ಒತ್ತಡ ತರಲಾಗಿದೆ.