AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp Scam: ವಾಟ್ಸ್​ಆ್ಯಪ್​ನಲ್ಲಿ ನಡೆಯುತ್ತಿದೆ ಬಹುದೊಡ್ಡ ವಂಚನೆ: ತಪ್ಪಿಯೂ ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ

ಗುಜರಾತ್, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ವಾಟ್ಸ್​ಆ್ಯಪ್ ಮೂಲಕ ವಿದ್ಯುತ್ ಬಿಲ್ ಪಾವತಿಸುವಂತೆ ಮೆಸೇಜ್ ಹರಿದಾಡುತ್ತಿದೆ. "ಪ್ರಿಯ ಗ್ರಾಹಕರೇ, ನಿಮ್ಮ ಹಿಂದಿನ ತಿಂಗಳ ಬಿಲ್ ಅಪ್ಡೇಟ್ ಆಗದ ಕಾರಣ ಇಂದು ರಾತ್ರಿ 9.30 ಕ್ಕೆ ವಿದ್ಯುತ್ ಕಚೇರಿಯಿಂದ ನಿಮ್ಮ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.

WhatsApp Scam: ವಾಟ್ಸ್​ಆ್ಯಪ್​ನಲ್ಲಿ ನಡೆಯುತ್ತಿದೆ ಬಹುದೊಡ್ಡ ವಂಚನೆ: ತಪ್ಪಿಯೂ ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ
WhatsApp Scam
TV9 Web
| Edited By: |

Updated on:Oct 08, 2026 | 3:22 PM

Share

ಕಳೆದ ಕೆಲವು ವರ್ಷಗಳಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ ಪ್ರಕರಣಗಳು ದಾಖಲಾಗುತ್ತಲೇ ಇದೆ. ಮುಖ್ಯವಾಗಿ ವಿಶ್ವದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಟಾ (Facebook) ಮಾಲೀಕತ್ವದ ವಾಟ್ಸ್ಆ್ಯಪ್​ ಸ್ಕ್ಯಾಮ್ (WhatsApp Scam) ಮೆಸೇಜ್‌ಗಳ ತಾಣವಾಗಿ ಬಿಟ್ಟಿದೆ. ದಿನಕ್ಕೊಂದರಂತೆ ವಂಚನೆ ಮೆಸೇಜ್‌ಗಳು ವಾಟ್ಸ್ಆ್ಯಪ್​​ನಲ್ಲಿ ಹರಿದಾಡುತ್ತಿರುತ್ತದೆ. ಇದರ ಮೂಲಕ ಅವರ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಹಣವನ್ನು ಕದಿಯುತ್ತಿದ್ದಾರೆ. ಇದೀಗ ಇದಕ್ಕೆ ಉದಾಹರಣೆ ಎಂಬಂತೆ ಆನ್‌ಲೈನ್ ವಂಚನೆ ದೇಶದ ಕೆಲವು ಕಡೆಗಳಲ್ಲಿ ವರದಿಯಾಗಿದೆ. ವಾಟ್ಸ್​ಆ್ಯಪ್​​​ನಲ್ಲಿ ತಮ್ಮ ವಿದ್ಯುತ್ ಬಿಲ್​ಗಳನ್ನು (Electricity Bill) ಪಾವತಿಸಲು ನೆನಪಿಸುವ ಸಂದೇಶಗಳು ಹರಿದಾಡುತ್ತಿದೆ. ಇಲ್ಲಿ ಲಿಂಕ್ ಅನ್ನು ಕ್ಲಿಕ್ ಮಾಡಿ ಮುಂದುವರೆದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುವುದು ಖಚಿತ.

ಗುಜರಾತ್, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ವಾಟ್ಸ್​ಆ್ಯಪ್ ಮೂಲಕ ವಿದ್ಯುತ್ ಬಿಲ್ ಪಾವತಿಸುವಂತೆ ಮೆಸೇಜ್ ಹರಿದಾಡುತ್ತಿದೆ. “ಪ್ರಿಯ ಗ್ರಾಹಕರೇ, ನಿಮ್ಮ ಹಿಂದಿನ ತಿಂಗಳ ಬಿಲ್ ಅಪ್ಡೇಟ್ ಆಗದ ಕಾರಣ ಇಂದು ರಾತ್ರಿ 9.30 ಕ್ಕೆ ವಿದ್ಯುತ್ ಕಚೇರಿಯಿಂದ ನಿಮ್ಮ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. ದಯವಿಟ್ಟು ತಕ್ಷಣವೇ ನಮ್ಮ ವಿದ್ಯುತ್ ಅಧಿಕಾರಿಯನ್ನು ಸಂಪರ್ಕಿಸಿ 8260303942 ಧನ್ಯವಾದಗಳು”, ಎಂದು ಸಂದೇಶದಲ್ಲಿ ಬರೆಯಲಾಗಿರುತ್ತದೆ. ಈ ಸಂದೇಶವು ಅಧಿಕೃತ ಮೂಲದಿಂದ ಬರದಿದ್ದರೂ, ಬಹಳಷ್ಟು ಜನರು ಈ ಸಂಖ್ಯೆಗೆ ಕರೆ ಮಾಡಿ ಮೋಸ ಹೋಗುತ್ತಿದ್ದಾರೆ.

ಇಂತಹ ವಂಚನೆಗಳಿಂದ ಸುರಕ್ಷಿತವಾಗಿರುವುದು ಹೇಗೆ?

ವಾಟ್ಸ್​ಆ್ಯಪ್​ ಮೂಲಕ ಹೆಚ್ಚುತ್ತಿರುವ ಸೈಬರ್ ವಂಚನೆ ಘಟನೆಗಳನ್ನು ಗಮನಿಸಿದರೆ, ಅಂತಹ ವಂಚನೆಗಳನ್ನು ಗುರುತಿಸುವುದು ತುಂಬಾ ಕಷ್ಟ. ಆದರೆ ಅಂತಹ ವಂಚನೆಗಳನ್ನು ನೀವು ಗುರುತಿಸಬಹುದಾದ ಕೆಲವು ತಂತ್ರಗಳಿವೆ. ಅಪರಿಚಿತ ವ್ಯಕ್ತಿ ಅಥವಾ ಸಂಖ್ಯೆಯಿಂದ ಸ್ವೀಕರಿಸಿದ ಲಿಂಕ್‌ಗಳನ್ನು ಎಂದಿಗೂ ಕ್ಲಿಕ್ ಮಾಡಬಾರದು. ಲಿಂಕ್ ಅಧಿಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಹಾಗೆ ಮಾಡಲು, url ಅನ್ನು ಸರಿಯಾಗಿ ಪರಿಶೀಲಿಸಿ. ಅಧಿಕೃತ ವೆಬ್‌ಸೈಟ್‌ಗಳಾಗಿರುವ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ. ಹಣದ ಲಾಭವನ್ನು ಪಡೆದುಕೊಳ್ಳುವ ಲಿಂಕ್‌ಗಳು ಅಥವಾ ಸಂದೇಶಗಳ ಮೇಲೆ ಎಂದಿಗೂ ಕ್ಲಿಕ್ ಮಾಡಬೇಡಿ. ಇಂತಹ ಸಂದೇಶಗಳನ್ನು ಹೆಚ್ಚಾಗಿ ಸ್ಕ್ಯಾಮರ್‌ಗಳು ಕಳುಹಿಸುತ್ತಾರೆ. ಅಧಿಕೃತ ನ್ಯೂಸ್‌ ಮೆಸೇಜ್‌ಗಳು ಯಾವುದೇ ಅಕ್ಷರ ದೋಷ ಹೊಂದಿರುವುದಿಲ್ಲ. ಆದರೆ ವಾಟ್ಸ್ಆ್ಯಪ್​ನಲ್ಲಿ ಹೆಚ್ಚು ಫಾರ್ವರ್ಡ್ ಮಾಡಲಾದ ಫೇಕ್‌ ಮೆಸೇಜ್‌ಗಳು ಹೆಚ್ಚು ಅಕ್ಷರ ದೋಷಗಳು, ಸ್ಪೆಲ್ಲಿಂಗ್‌ ತಪ್ಪುಗಳನ್ನು ಹೊಂದಿರುತ್ತವೆ. ಆದ್ದರಿಂದ ಎಚ್ಚರ ವಹಿಸಿ ಓದಿ.

ಅಂತೆಯೆ ಅಧಿಕೃತವಾಗಿ ಪ್ರಕಟಿಸಲಾದ ಮೆಸೇಜ್ ಸಾಮಾನ್ಯವಾಗಿ ಲಿಂಕ್‌ ಹೊಂದಿರುವುದಿಲ್ಲ. ಆದರೆ ಫೇಕ್‌ ಮೆಸೇಜ್‌ಗಳು ಲಿಂಕ್‌ ಅನ್ನು ಹೊಂದಿರುತ್ತವೆ. ಉದಾಹರಣೆ ಬಿಎಸ್‌ಎನ್‌ಎಲ್‌ ಕುರಿತ ಅನ್‌ಲಿಮಿಟೆಡ್ ಡೇಟಾ ಮತ್ತು ವಾಯ್ಸ್ ಕರೆ ಕುರಿತ ಫೇಕ್‌ ಮೆಸೇಜ್‌ ಲಿಂಕ್‌ ಅನ್ನು ಹೊಂದಿದೆ. ಯುಆರ್‌ಎಲ್‌ ಗಮನಿಸಿ. ಇಂತಹ ತಪ್ಪು ಯುಆರ್‌ಎಲ್‌ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಿರಿ ಹಾಗೂ ಫಾರ್ವರ್ಡ್‌ ಸಹ ಮಾಡದಿರಿ. ಕೆಲವು ಮೆಸೇಜ್‌ಗಳು ಉಚಿತ ರೀಚಾರ್ಜ್‌, ಅನ್‌ಲಿಮಿಟೆಡ್, ಹಣ ಬಹುಮಾನ ಬಂದಿರುವ ಬಗ್ಗೆ ಭರವಸೆ ನೀಡಿ, ಮೆಸೇಜ್‌ ಅನ್ನು 10 ಜನರಿಗೆ ಫಾರ್ವರ್ಡ್ ಮಾಡಿ ಎಂದು ಹೇಳುತ್ತವೆ. ಆದ್ದರಿಂದ ಮೆಸೇಜ್‌ಗಳನ್ನು ಓದುವ ಬದಲು ಅದನ್ನು ಕಡೆಗಣಿಸಿ.

Published On - 1:57 pm, Mon, 10 October 22

Follow Us
TV9 Web
TV9 Web

TV9 Kannada

Read More
ನಾಡಹಬ್ಬ ಮೈಸೂರು ದಸರಾದಲ್ಲಿ ಪ್ಲಾಸ್ಟಿಕ್, ಫ್ಲೆಕ್ಸ್​ಗೆ ಸಂಪೂರ್ಣ ಕಡಿವಾಣ
ನಾಡಹಬ್ಬ ಮೈಸೂರು ದಸರಾದಲ್ಲಿ ಪ್ಲಾಸ್ಟಿಕ್, ಫ್ಲೆಕ್ಸ್​ಗೆ ಸಂಪೂರ್ಣ ಕಡಿವಾಣ
ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ದೊಡ್ಮನೆಯಲ್ಲಿ ಅದ್ದೂರಿ ಸ್ವಾಗತ
ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ದೊಡ್ಮನೆಯಲ್ಲಿ ಅದ್ದೂರಿ ಸ್ವಾಗತ
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ