ದಯೆಯನ್ನು ದೌರ್ಬಲ್ಯವೆಂದು ಭಾವಿಸಬಾರದು, ರಾಮ ಚರಿತ ಮಾನಸದ ಸಾಲುಗಳ ನೆನೆದ ಏರ್ ಮಾರ್ಷಲ್ ಭಾರ್ತಿ

‘‘ದಯೆಯನ್ನು ದೌರ್ಬಲ್ಯವೆಂದು ಭಾವಿಸಬಾರದು’’ ಎನ್ನುವ ರಾಮಧಾರಿ ಸಿಂಗ್ ದಿನಕರ್ ರಾಮ ಚರಿತ ಮಾನಸದಲ್ಲಿ ಬರೆದಿರುವ ಸಾಲುಗಳನ್ನು ಏರ್ ಮಾರ್ಷಲ್ ಎಕೆ ಭಾರ್ತಿ ಮೆಲುಕುಹಾಕಿದ್ದಾರೆ. ಆಪರೇಷನ್ ಸಿಂಧೂರ್(Operation Sindoor) ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ, ಇಷ್ಟು ದಿನ ಪಾಕಿಸ್ತಾನದ ಬಗ್ಗೆ ತೋರಿದ ದಯೆಯನ್ನು ನಮ್ಮ ದುರ್ಬಲತೆ ಎಂದುಕೊಳ್ಳಬಾರದು ಎಂದು ಹೇಳಿದ್ದಾರೆ.

ದಯೆಯನ್ನು ದೌರ್ಬಲ್ಯವೆಂದು ಭಾವಿಸಬಾರದು, ರಾಮ ಚರಿತ ಮಾನಸದ ಸಾಲುಗಳ ನೆನೆದ ಏರ್ ಮಾರ್ಷಲ್ ಭಾರ್ತಿ
ಎಕೆ ಭಾರ್ತಿ

Updated on: May 14, 2025 | 3:39 PM

ನವದೆಹಲಿ, ಮೇ 12: ‘‘ದಯೆಯನ್ನು ದೌರ್ಬಲ್ಯವೆಂದು ಭಾವಿಸಬಾರದು’’ ಎನ್ನುವ ರಾಮಧಾರಿ ಸಿಂಗ್ ದಿನಕರ್ ರಾಮ ಚರಿತ ಮಾನಸದಲ್ಲಿ ಬರೆದಿರುವ ಸಾಲುಗಳನ್ನು ಏರ್ ಮಾರ್ಷಲ್ ಎಕೆ ಭಾರ್ತಿ ಮೆಲುಕುಹಾಕಿದ್ದಾರೆ. ಆಪರೇಷನ್ ಸಿಂಧೂರ್(Operation Sindoor) ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ, ಇಷ್ಟು ದಿನ ಪಾಕಿಸ್ತಾನದ ಬಗ್ಗೆ ತೋರಿದ ದಯೆಯನ್ನು ನಮ್ಮ ದುರ್ಬಲತೆ ಎಂದುಕೊಳ್ಳಬಾರದು ಎಂದು ಹೇಳಿದ್ದಾರೆ.
‘विनय ना मानत जलध जड़ गए तीन दिन बीति। बोले राम सकोप तब भय बिनु होय ना प्रीति’ ಎನ್ನುವ ಸಾಲುಗಳನ್ನು ಹೇಳಿದ್ದಾರೆ. ಈ ಸಾಲುಗಳನ್ನು ಶ್ರೀ ರಾಮಚರತ ಮಾನಸದ ಸುಂದರಕಾಂಡದಿಂದ ತೆಗೆದುಕೊಳ್ಳಲಾಗಿದೆ.

ಇದರಲ್ಲಿ ಶ್ರೀರಾಮನು ಸಮುದ್ರದ ಬಳಿ ಲಂಕೆಗೆ ದಾರಿ ಮಾಡಲು ವಿನಂತಿಸುತ್ತಾನೆ. ಮೂರು ದಿನಗಳ ಕಾಲ ಬೇಡಿಕೊಂಡ ನಂತರವೂ ಸಮುದ್ರವು ಶಾಂತವಾಗದಿದ್ದಾಗ, ಶ್ರೀರಾಮ ಕೋಪಗೊಂಡು, ಭಯವಿಲ್ಲದೆ ಯಾವುದೇ ವ್ಯಕ್ತಿ ಅಥವಾ ಯಾವುದೇ ವಸ್ತುವು ಯಾವುದನ್ನೂ ಪಾಲನೆ ಮಾಡುವುದಿಲ್ಲ ಎಂದು ಹೇಳುತ್ತಾನೆ. ಅದನ್ನು ಇಲ್ಲಿ ವಿವರಿಸಲಾಗಿದೆ. ಮತ್ತೊಂದು ಅರ್ಥದಲ್ಲಿ ನಮ್ರತೆಗೆ ಬೆಲೆ ಕೊಡದಿದ್ದರೆ, ಬಲವು ಅಗತ್ಯವಾಗುತ್ತದೆ ಎನ್ನುವ ಸಂದೇಶವನ್ನು ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ಗುಡುಗಿದ್ದಾರೆ.

ಮತ್ತಷ್ಟು ಓದಿ: ಮಿಲಿಟರಿ ಬೇಸ್​​ಗಳಿಗೆ ಹಾನಿಯಾಗಿಲ್ಲ: ಯಾವುದೇ ಪರಿಸ್ಥಿತಿ ಎದುರಿಸಲು ಸರ್ವಸನ್ನದ್ಧ ಎಂದ ಭಾರತೀಯ ಸೇನೆ

ಇದನ್ನೂ ಓದಿ
ಪ್ರಮುಖ ವಾಯುನೆಲೆ ಧ್ವಂಸಗೊಳಿಸಿದ ಭಾರತ, ಇದಕ್ಕೆ ಬೆದರಿತೇ ಪಾಕಿಸ್ತಾನ?
ಪ್ರಬಲ ಸಮರ ತಂತ್ರ: ಭಾರತದ ಉದಾಹರಣೆ ಕೊಟ್ಟ ಜಾನ್ ಸ್ಪೆನ್ಸರ್
1971 ಹಾಗೂ 2025ರ ಪರಿಸ್ಥಿತಿಯಲ್ಲಿ ವ್ಯತ್ಯಾಸವಿದೆ: ಶಶಿ ತರೂರ್
ಭಾರತದ ಈ ಮಿಸೈಲ್ ದಾಳಿಗೆ ಪಾಕ್ ಮಾತ್ರವಲ್ಲ, ಅಮೆರಿಕಕ್ಕೂ ಆಗಿತ್ತು ನಡುಕ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಏರ್ ಮಾರ್ಷಲ್ ಎ.ಕೆ. ಭಾರ್ತಿ, ಅದು ಟರ್ಕಿಶ್ ಡ್ರೋನ್‌ಗಳಾಗಿರಲಿ ಅಥವಾ ಬೇರೆ ಯಾವುದೇ ದೇಶದ ಡ್ರೋನ್‌ಗಳಾಗಿರಲಿ, ನಮ್ಮ ವಾಯು ರಕ್ಷಣೆಯ ಮುಂದೆ ಕಾಣಿಸಿಕೊಂಡರೆ ಏನಾಗುತ್ತದೆ ಎಂಬುದನ್ನು ನೀವೇ ನೋಡಿದ್ದೀರಿ.

ನೌಕಾಪಡೆಯು ಜಂಟಿ ಮಿಲಿಟರಿ ಕಾರ್ಯಾಚರಣೆಯಡಿಯಲ್ಲಿ ಕಾರ್ಯನಿರ್ವಹಿಸಿದೆ ಎಂದು ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಹೇಳಿದರು. ನಮ್ಮ ವಿಮಾನವು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿತ್ತು. ಯಾವುದೇ ಅನುಮಾನಾಸ್ಪದ ಅಥವಾ ಶತ್ರು ಹಡಗುಗಳಿಗೆ ನೂರಾರು ಕಿಲೋಮೀಟರ್‌ಗಳಿಗಿಂತ ಹತ್ತಿರ ಬರುವ ಅವಕಾಶ ನೀಡಲಾಗಿಲ್ಲ ಎಂದರು.

ಪಾಕಿಸ್ತಾನ ನಮ್ಮ ವಾಯುನೆಲೆಗಳ ಮೇಲೆ ಪದೇ ಪದೇ ದಾಳಿ ಮಾಡಿದಾಗಲೆಲ್ಲಾ, ನಮ್ಮ ಬಲಿಷ್ಠ ವಾಯು ರಕ್ಷಣಾ ಗ್ರಿಡ್ ಮುಂದೆ ಅವರು ವಿಫಲರಾದರು ಎಂದು ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಹೇಳಿದರು. ನಮ್ಮ ವಾಯು ರಕ್ಷಣೆ ಎಷ್ಟು ಬಲಿಷ್ಠವಾಗಿತ್ತೆಂದರೆ ಪಾಕಿಸ್ತಾನಕ್ಕೆ ಯಾವುದೇ ಅವಕಾಶವಿರಲಿಲ್ಲ. ನಿನ್ನೆ ನೀವು ಪಾಕಿಸ್ತಾನಿ ವಾಯುನೆಲೆಯ ದುಃಸ್ಥಿತಿಯನ್ನು ನೋಡಿದ್ದೀರಿ. ನಮ್ಮ ಎಲ್ಲಾ ವಾಯುನೆಲೆಗಳು ಉತ್ತಮ ಸ್ಥಿತಿಯಲ್ಲಿವೆ ಎಂದರು.

ಆಪರೇಷನ್ ಸಿಂಧೂರ್ ಅಡಿಯಲ್ಲಿ ನಡೆಸಲಾದ ಜಂಟಿ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ನಿನ್ನೆ ನಾವು ಮಾಹಿತಿ ನೀಡಿದ್ದೇವೆ ಎಂದು ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಎ.ಕೆ. ಭಾರ್ತಿ ಹೇಳಿದರು. ನಮ್ಮ ಹೋರಾಟ ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧವೇ ಹೊರತು ಪಾಕಿಸ್ತಾನಿ ಸೈನ್ಯದ ವಿರುದ್ಧವಲ್ಲ ಎಂದು ನಾವು ಹೇಳಿದ್ದೆವು.

ಆದರೆ ಪಾಕಿಸ್ತಾನಿ ಸೈನ್ಯವು ಭಯೋತ್ಪಾದಕರ ಜೊತೆ ನಿಲ್ಲುವುದು ಸೂಕ್ತವೆಂದು ಭಾವಿಸಿ ಅವರ ಹೋರಾಟವನ್ನು ತನ್ನದೇ ಆದ ಹೋರಾಟವನ್ನಾಗಿ ಮಾಡಿಕೊಂಡಿತು. ಅಂತಹ ಪರಿಸ್ಥಿತಿಯಲ್ಲಿ, ಅವರು ಅನುಭವಿಸುವ ಯಾವುದೇ ನಷ್ಟಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 3:54 pm, Mon, 12 May 25