Operation Sindoor: ಪ್ರಧಾನಿ ಮೋದಿ ರಕ್ತ, ನೀರಿನ ಹರಿವೆರಡನ್ನೂ ನಿಲ್ಲಿಸಿದ್ದಾರೆ: ಸಂಬಿತ್ ಪಾತ್ರಾ
ಪ್ರಧಾನಿ ನರೇಂದ್ರ ಮೋದಿ ರಕ್ತ ಹಾಗೂ ನೀರಿನ ಹರಿವೆರಡನ್ನೂ ನಿಲ್ಲಿಸಿದ್ದಾರೆ ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರಾ ಹೇಳಿದ್ದಾರೆ. ಒಂದು ದೇಶವು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರದೊಳಗೆ ಆಳವಾಗಿ ದಾಳಿ ಮಾಡಿರುವುದು ಇದೇ ಮೊದಲು. ಎರಡೂ ಕಡೆಯ ನಡುವಿನ ಪ್ರಸ್ತುತ ಪರಿಸ್ಥಿತಿ ಕದನ ವಿರಾಮವಲ್ಲ, ಬದಲಾಗಿ ಒಂದು ತಿಳಿವಳಿಕೆಯಾಗಿದೆ ಎಂದು ಬಿಜೆಪಿ ನಾಯಕ ಸ್ಪಷ್ಟಪಡಿಸಿದರು. ಪಾಕಿಸ್ತಾನ ಭಾರತದ ಮೇಲೆ ಮತ್ತೊಂದು ಭಯೋತ್ಪಾದಕ ದಾಳಿ ನಡೆಸಿದ ಕ್ಷಣ ನಾವು ಆ ಬೇಲಿಯಲ್ಲವನ್ನೂ ಮುರಿದು ಮುನ್ನುಗ್ಗುತ್ತೇವೆ ಎಂದು ಪಾತ್ರಾ ಎಚ್ಚರಿಸಿದರು.

ನವದೆಹಲಿ, ಮೇ 12: ಸಿಂಧೂ ನದಿ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿ, ಆಪರೇಷನ್ ಸಿಂಧೂರ್(Operation Sindoor) ಆರಂಭಿಸುವ ಮೂಲಕ ಭಾರತ ರಕ್ತ ಮತ್ತು ನೀರಿನ ಹರಿವನ್ನು ನಿಲ್ಲಿಸಿದೆ ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಇದು ಅಸಾಧಾರಣ ಸಾಧನೆ. ಪಾಕಿಸ್ತಾನದೊಳಗೆ ನುಗ್ಗಿ ದಾಳಿ ಮಾಡಿ ಅವರ ಭಯೋತ್ಪಾದಕ ಶಿಬಿರಗಳನ್ನು ನಿರ್ಮೂಲನೆ ಮಾಡುವುದು ಸುಲಭವಲ್ಲ.
ಇದು ನೂತನ ಭಾರತ, ನಾವು ಅವರ ನೆಲಕ್ಕೆ ತೆರಳಿ ಅವರ ಮೇಲೆ ದಾಳಿ ಮಾಡಿದ್ದೇವೆ ಎಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾತ್ರಾ ಹೇಳಿದ್ದಾರೆ. ಒಂದು ದೇಶವು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರದೊಳಗೆ ಆಳವಾಗಿ ದಾಳಿ ಮಾಡಿರುವುದು ಇದೇ ಮೊದಲು. ಎರಡೂ ಕಡೆಯ ನಡುವಿನ ಪ್ರಸ್ತುತ ಪರಿಸ್ಥಿತಿ ಕದನ ವಿರಾಮವಲ್ಲ, ಬದಲಾಗಿ ಒಂದು ತಿಳಿವಳಿಕೆಯಾಗಿದೆ ಎಂದು ಬಿಜೆಪಿ ನಾಯಕ ಸ್ಪಷ್ಟಪಡಿಸಿದರು.
ಪಾಕಿಸ್ತಾನ ಭಾರತದ ಮೇಲೆ ಮತ್ತೊಂದು ಭಯೋತ್ಪಾದಕ ದಾಳಿ ನಡೆಸಿದ ಕ್ಷಣ ನಾವು ಆ ಬೇಲಿಯಲ್ಲವನ್ನೂ ಮುರಿದು ಮುನ್ನುಗ್ಗುತ್ತೇವೆ ಎಂದು ಪಾತ್ರಾ ಎಚ್ಚರಿಸಿದರು. ಏಪ್ರಿಲ್ 22 ರಿಂದ ಮೇ 7 ರವರೆಗೆ ದೇಶದೊಳಗೆ ತಕ್ಷಣದ ಕ್ರಮ ಕೈಗೊಳ್ಳುವ ಬೇಡಿಕೆ ಇತ್ತು ಎಂದು ಹೇಳಿದರು.
ಮತ್ತಷ್ಟು ಓದಿ: ಯುದ್ಧ ಬಾಲಿವುಡ್ ಸಿನಿಮಾ ಅಲ್ಲ: ಭಾರತೀಯ ಸೇನಾ ಮಾಜಿ ಮುಖ್ಯಸ್ಥ ನರವಾಣೆ
ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು ಬಿಜೆಪಿ ಸಂಸದರು ಹೇಳಿದರು. ಇದು ಶತ್ರುಗಳ ಕಲ್ಪನೆಗೂ ಮೀರಿದ್ದು. ಭಾರತೀಯ ಸಶಸ್ತ್ರ ಪಡೆಗಳು ತಮ್ಮ ಭರವಸೆಯನ್ನು ಈಡೇರಿಸಿವೆ ಮತ್ತು ಹಿಂದೆ ಸರ್ಜಿಕಲ್ ಸ್ಟ್ರೈಕ್‌ಗಳಿದ್ದರೂ, ಪಾಕಿಸ್ತಾನ ಯಾವಾಗ ದಾಳಿ ಮಾಡುತ್ತದೆ ಎಂದು ಊಹಿಸಲು ಸಾಧ್ಯವಾಗಲಿಲ್ಲ ಎಂದರು.
#OperationSindoor में भारतीय सेना ने अदम्य साहस का परिचय दिया है। आज पूरा भारत अपने सभी सैनिकों को सलाम करता है। pic.twitter.com/OprnRqOUkB
— Sambit Patra (@sambitswaraj) May 12, 2025
ಮೇ 7 ರಂದು ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ನಿಖರ ದಾಳಿಯಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಜೈಶ್-ಎ-ಮೊಹಮ್ಮದ್ (ಜೆಇಎಂ), ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ಗೆ ಸಂಬಂಧಿಸಿದ 9 ಪ್ರಮುಖ ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಒಂಬತ್ತು ಭಯೋತ್ಪಾದಕ ಶಿಬಿರಗಳಲ್ಲಿ ಐದು ಪಿಒಕೆಯಲ್ಲಿ ಮತ್ತು ಉಳಿದ ನಾಲ್ಕು ಪಾಕಿಸ್ತಾನದಲ್ಲಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:06 pm, Mon, 12 May 25








