ದೆಹಲಿ: ಯಾರಾದರೂ ಲಂಚ ಕೇಳಿದಾಗ ಇಲ್ಲ ಎಂದು ಹೇಳಬೇಡಿ ಬದಲಿಗೆ ಸಂಭಾಷಣೆಯನ್ನು ರೆಕಾರ್ಡ್ ಮಾಡಿ . ಆ ವಿಡಿಯೊ/ಆಡಿಯೊವನ್ನು ವಾಟ್ಸ್ಆ್ಯಪ್ ( WhatsApp) ಸಂಖ್ಯೆಗೆ ಕಳುಹಿಸಿ. ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ ಎಂದು ಅರವಿಂದ ಕೇಜ್ರಿವಾಲ್(Arvind Kejriwal) ಹೇಳಿದ್ದಾರೆ. ಪಂಜಾಬ್ ನಲ್ಲಿ ಭ್ರಷ್ಟಾಚಾರ ವಿರೋಧಿ ಸಹಾಯವಾಣಿಯನ್ನು ಪ್ರಾರಂಭಿಸುವ ಪಂಜಾಬ್ ಸಿಎಂ ಘೋಷಣೆ ಬಗ್ಗೆ ದೆಹಲಿ ಸಿಎಂ ಈ ರೀತಿ ಹೇಳಿದ್ದಾರೆ. ಪಂಜಾಬ್‌ನ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರು ಮಾರ್ಚ್ 23 ಶಹೀದ್ ದಿವಸ್‌ನಂದು ಭ್ರಷ್ಟಾಚಾರ ವಿರೋಧಿ ಸಹಾಯವಾಣಿಯನ್ನು ಪ್ರಾರಂಭಿಸಲಾಗುವುದು ಎಂದು ಗುರುವಾರ ಘೋಷಿಸಿದರು. ‘‘ರಾಜ್ಯದ ಜನರು ಭ್ರಷ್ಟಾಚಾರದ ಕುರಿತು ವಾಟ್ಸಾಪ್ ಮೂಲಕ ದೂರು ಸಲ್ಲಿಸಬಹುದು. ಅದು ನನ್ನ ವೈಯಕ್ತಿಕ ವಾಟ್ಸಾಪ್ ನಂಬರ್ ಆಗಿರುತ್ತದೆ. ಯಾರಾದರೂ ಲಂಚ ಕೇಳಿದರೆ ಅದರ ವಿಡಿಯೋ/ಆಡಿಯೊ ರೆಕಾರ್ಡಿಂಗ್ ಮಾಡಿ ನನಗೆ ಕಳುಹಿಸಿ. ಕಠಿಣ ಕ್ರಮ ಕೈಗೊಳ್ಳಲಾಗುವುದು. ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಪಂಜಾಬ್‌ನಲ್ಲಿ ಭ್ರಷ್ಟಾಚಾರ ಇರುವುದಿಲ್ಲ ಎಂದು ಮಾನ್ ಹೇಳಿದ್ದಾರೆ. “ಪಂಜಾಬ್‌ನ ಹಿತಾಸಕ್ತಿಯಿಂದ ಇಂದು ಬಹಳ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು” ಎಂದು ಅವರು ತಿಳಿಸಿದ ನಂತರ ಈ ಘೋಷಣೆ ಬಂದಿದೆ. “ಪಂಜಾಬ್ ಇತಿಹಾಸದಲ್ಲಿ ಇಲ್ಲಿಯವರೆಗೆ ಯಾರೂ ಇಂತಹ ನಿರ್ಧಾರವನ್ನು ತೆಗೆದುಕೊಂಡಿಲ್ಲ” ಎಂದು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.
When someone asks you for a bribe then don’t say no instead record the conversation and send the video/audio to the WhatsApp no. We assure you that immediately strict action will be taken: Delhi CM Arvind Kejriwal on Punjab CM’s announcement of launching anti-corruption helpline pic.twitter.com/G2VwyBzeA0
— ANI (@ANI) March 17, 2022
ಬುಧವಾರ ಮುಖ್ಯಮಂತ್ರಿ ಭಗವಂತ್ ಮಾನ್ ಸೇರಿದಂತೆ ಪಂಜಾಬ್‌ನ ಹೊಸದಾಗಿ ಚುನಾಯಿತ ಶಾಸಕರು ವಿಧಾನಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ನೂತನವಾಗಿ ಆಯ್ಕೆಯಾದ ಶಾಸಕರಿಗೆ ಹಂಗಾಮಿ ಸ್ಪೀಕರ್ ಡಾ. ಇಂದರ್‌ಬೀರ್ ಸಿಂಗ್ ನಿಜ್ಜರ್ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
“ಪಂಜಾಬ್ ವಿಧಾನಸೌಧದಲ್ಲಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಲಾಗಿದೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಹೊಸ ಬದಲಾವಣೆಯನ್ನು ತರಲಿದೆ ಅದಕ್ಕಾಗಿ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ನಮ್ಮ ಸರ್ಕಾರವು ಪಂಜಾಬ್‌ನ ಅತ್ಯಂತ ಪ್ರಾಮಾಣಿಕ ಸರ್ಕಾರ ಎಂದು ಕರೆಯಲ್ಪಡುತ್ತದೆ” ಎಂದು ಮಾನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಶೀಘ್ರದಲ್ಲೇ ಬಹುದೊಡ್ಡ, ಇತಿಹಾಸ ಕಾಣದ ನಿರ್ಧಾರ ಘೋಷಣೆ ಮಾಡುವುದಾಗಿ ಪಂಜಾಬ್ ಸಿಎಂ ಭಗವಂತ್ ಮಾನ್ ಟ್ವೀಟ್
Published On - 4:54 pm, Thu, 17 March 22