AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳನ್ನು ರೇಪ್ ಮಾಡುವ ಅರ್ಚಕ ದೇವರಿಗೆ ಸಮರ್ಪಿಸಿದ್ದನ್ನು ಯಾವ ದೇವರು ಸ್ವೀಕರಿಸುತ್ತಾರೆ?: ಕೇರಳ ಹೈಕೋರ್ಟ್

Kerala High Court:ತಾಯಿಯ ಮಾನಸಿಕ ಸ್ಥಿತಿ, ಸಮಾಜಕ್ಕೆ ಅವಮಾನ. ಗಂಡ ತ್ಯಜಿಸಿದ್ದರಿಂದ ಮೂರು ಮಕ್ಕಳು ಮತ್ತು ಆಹಾರ ಅಥವಾ ಆಶ್ರಯವಿಲ್ಲದೆ ಅನುಭವಿಸುವ ಒತ್ತಡ ಅರ್ಥವಾಗುತ್ತದೆ. ಮಕ್ಕಳು ದೈಹಿಕ, ಮಾನಸಿಕ ಮತ್ತು ಲೈಂಗಿಕ ಹಿಂಸೆಗೆ ಒಳಗಾಗುತ್ತಾರೆ. ಇಂಥಾ ಸಂದರ್ಭಗಳಲ್ಲಿ ಯಾವ ತಾಯಿ ಮಾನಸಿಕ ಸ್ಥಿಮಿತದಲ್ಲಿರಲು ಸಾಧ್ಯ ಎಂದು ಕೋರ್ಟ್ ಪ್ರಶ್ನಿಸಿದೆ.

ಮಕ್ಕಳನ್ನು ರೇಪ್ ಮಾಡುವ ಅರ್ಚಕ ದೇವರಿಗೆ ಸಮರ್ಪಿಸಿದ್ದನ್ನು ಯಾವ ದೇವರು ಸ್ವೀಕರಿಸುತ್ತಾರೆ?: ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 24, 2021 | 5:14 PM

ತಿರುವನಂತಪುರಂ: ಅಪ್ರಾಪ್ತ ವಯಸ್ಸಿನ ಮಗುವನ್ನು ಅದರ ಸಹೋದರ ಸಹೋದರಿಯ ಮುಂದೆಯೇ ಪದೇ ಪದೇ ಕಿರುಕುಳ ನೀಡಿದ ಅರ್ಚಕನ ಪ್ರಾರ್ಥನೆ, ಆತ ಸಮರ್ಪಿಸಿದ್ದನ್ನು ಯಾವ ದೇವರು ಸ್ವೀಕರಿಸುತ್ತಾನೆ ಎಂದು ಕೇರಳ ಹೈಕೋರ್ಟ್ (Kerala High Court) ಕೇಳಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಅರ್ಚಕನಿಗೆ ಜೀವಾವಧಿ ಶಿಕ್ಷೆ ವಿಧಿಸುತ್ತಿರುವಾಗ ಹೈಕೋರ್ಟ್ ಈ ರೀತಿ ಪ್ರಶ್ನೆ ಕೇಳಿದೆ. ನ್ಯಾಯಾಧೀಶರಾದ ಕೆ ವಿನೋದ್ ಚಂದ್ರನ್ ಮತ್ತು ಜಿಯಾದ್ ರೆಹಮಾನ್ ಎಎ ಅವರನ್ನು ಒಳಗೊಂಡ ನ್ಯಾಯಪೀಠ ಮಂಜೇರಿ ನಿವಾಸಿ, ಆರೋಪಿ ಮಧುಗೆ ಗರಿಷ್ಠ ಶಿಕ್ಷೆ ವಿಧಿಸಿದ್ದು, ಒಬ್ಬ ವ್ಯಕ್ತಿ ತನ್ನ ಹೆಂಡತಿ ಮತ್ತು ಮಕ್ಕಳನ್ನು ತೊರೆದಾಗ ಅಲೆದಾಡುವ ರಣಹದ್ದುಗಳು ಪರಿತ್ಯಕ್ತ ಮಹಿಳೆಯನ್ನು ಮಾತ್ರವಲ್ಲ, ಅಸಹಾಯಕ ಮಕ್ಕಳನ್ನೂ ಬೇಟೆಯಾಡಲು ಕಾಯುತ್ತಿವೆ ಎಂದು ಹೇಳಿದೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಸಲ್ಲಿಸಿದ ಮೇಲ್ಮನವಿಯ ಮೇಲೆ ನ್ಯಾಯಾಲಯ ಈ ರೀತಿ ಪ್ರತಿಕ್ರಿಯಿಸಿದೆ.

ಒಬ್ಬ ಮನುಷ್ಯ ತನ್ನ ಹೆಂಡತಿ ಮತ್ತು ಮಕ್ಕಳನ್ನು ತೊರೆದಾಗ, ಅಲೆದಾಡುತ್ತಿರುವ ರಣಹದ್ದುಗಳು ಪರಿತ್ಯಕ್ತ ಮಹಿಳೆ ಮಾತ್ರವಲ್ಲ, ಅಸಹಾಯಕ ಮಕ್ಕಳನ್ನೂ ಬೇಟೆಯಾಡಲು ಕಾಯುತ್ತವೆ. ಈ ಸಂದರ್ಭದಲ್ಲಿ ನಾವು ಒಬ್ಬ ‘ಪೂಜಾರಿ’/ ‘ಕೋಮರಮ್’ (ದೇವಸ್ಥಾನದಲ್ಲಿ ಅರ್ಚಕ) ತೊರೆದ ಮಹಿಳೆ ಮತ್ತು ಮೂವರು ಮಕ್ಕಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಹಿರಿಯ ಹೆಣ್ಣು ಮಗುವಿಗೆ ಪದೇ ಪದೇ ಕಿರುಕುಳ ನೀಡುತ್ತಾನೆ. ಅದೂ ಆಕೆಯ ಒಡಹುಟ್ಟಿದವರ ಸಮ್ಮುಖದಲ್ಲಿ. ಅಂತಹ ಅರ್ಚಕನ ಪ್ರಾರ್ಥನೆ ಮತ್ತು ಆತ ಸಮರ್ಪಿಸಿದ್ದನು ಯಾವ ದೇವರು ಸ್ವೀಕರಿಸುತ್ತಾನೆ ಅಥವಾ ಆತನನ್ನು ಯಾಕೆ ಮಾಧ್ಯಮವಾಗಿಸುತ್ತಾನೆ ಎಂದು ನಾವು ಅಚ್ಚರಿ ಪಡುತ್ತೇವೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.

ಪೋಕ್ಸೊ (POCSO) ನ್ಯಾಯಾಲಯದ ಆದೇಶದ ವಿರುದ್ಧದ ಮೇಲ್ಮನವಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.

“ಆದಾಗ್ಯೂ, ಅತ್ಯಾಚಾರದ ಅಪರಾಧ ಸಾಬೀತಾಗಿದೆ. ಆರೋಪಿಯು ಸೆಕ್ಷನ್ 376 (1) ಅಡಿಯಲ್ಲಿ ಶಿಕ್ಷೆಗೆ ಗುರಿಯಾಗುತ್ತಾನೆ. ಆರೋಪಿ ಸಂತ್ರಸ್ತೆಯೊಂದಿಗೆ ಹೊಂದಿದ್ದ ವಿಶೇಷ ಸಂಬಂಧ ಮತ್ತು ಪೋಷಕರ ಸ್ಥಾನಮಾನವನ್ನು ಪರಿಗಣಿಸಿ, ಮೇಲ್ಮನವಿಗೆ ಗರಿಷ್ಠ ಜೀವಾವಧಿ ಶಿಕ್ಷೆಯನ್ನು ವಿಧಿಸಬೇಕಾಗುತ್ತದೆ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ ಎಂದು ನ್ಯಾಯಾಲಯ ಹೇಳಿದೆ.

ಪ್ರಾಸಿಕ್ಯೂಷನ್ ಪ್ರಕಾರ ತೀವ್ರ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ಹೊಂದಿರುವ ತಾಯಿ ಮತ್ತು ಆಕೆಯ ಮೂವರು ಮಕ್ಕಳು ಅಲೆದಾಡುತ್ತಿರುವಾಗ  ಅವರನ್ನು ಪೊಲೀಸರು ಮಾರ್ಚ್ 1, 2013 ರಂದು ರಕ್ಷಿಸಿದರು. ವಿಚಾರಣೆಯ ನಂತರ ಹಿರಿಯ ಮಗು ತನ್ನ ತಾಯಿ ಜೊತೆಗಿದ್ದ ವ್ಯಕ್ತಿ ಒಂದು ವರ್ಷದಿಂದ ಅವಳಿಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಬಹಿರಂಗಪಡಿಸಿತು.

ದೇವಸ್ಥಾನದಲ್ಲಿ ಪೂಜಾರಿ ಆಗಿರುವ ಆರೋಪಿ ಸಾಮಾನ್ಯವಾಗಿ ಕುಡಿದು ಮನೆಗೆ ಬಂದು ತಾಯಿ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದನು. ಹಿರಿಯ ಮಗಳಿಗೆ ಆಕೆಯ ಒಡಹುಟ್ಟಿದವರ ಮುಂದೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ನ್ಯಾಯಾಲಯ ಗಮನಿಸಿದೆ.

ತಾಯಿಯ ಮಾನಸಿಕ ಸ್ಥಿತಿ, ಸಮಾಜಕ್ಕೆ ಅವಮಾನ. ಗಂಡ ತ್ಯಜಿಸಿದ್ದರಿಂದ ಮೂರು ಮಕ್ಕಳು ಮತ್ತು ಆಹಾರ ಅಥವಾ ಆಶ್ರಯವಿಲ್ಲದೆ ಅನುಭವಿಸುವ ಒತ್ತಡ ಅರ್ಥವಾಗುತ್ತದೆ. ಮಕ್ಕಳು ದೈಹಿಕ, ಮಾನಸಿಕ ಮತ್ತು ಲೈಂಗಿಕ ಹಿಂಸೆಗೆ ಒಳಗಾಗುತ್ತಾರೆ. ಇಂಥಾ ಸಂದರ್ಭಗಳಲ್ಲಿ ಯಾವ ತಾಯಿ ಮಾನಸಿಕ ಸ್ಥಿಮಿತದಲ್ಲಿರಲು ಸಾಧ್ಯ ಎಂದು ಕೋರ್ಟ್ ಪ್ರಶ್ನಿಸಿದೆ.

ಮಗು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದೆ ಎಂದು ವೈದ್ಯಕೀಯ ಪುರಾವೆಗಳು ಸಾಬೀತುಪಡಿಸಿವೆ ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ಸಾಕ್ಷಿಯಾಗಿದ್ದ ಸಂತ್ರಸ್ತೆಯ ಸಹೋದರ ಮಗುವಿನ ಹೇಳಿಕೆಗಳನ್ನು ದೃಢೀಕರಿಸಿರುವುದಾಗಿ ಹೈಕೋರ್ಟ್ ಹೇಳಿದೆ.

ಇದನ್ನೂ ಓದಿ: ಕುಳಿತುಕೊಳ್ಳುವ ಹಕ್ಕುಗಳಿಗಾಗಿ ದನಿಯೆತ್ತಿದ ಕೇರಳ, ತಮಿಳುನಾಡಿನ ಕಾರ್ಮಿಕರು; ಏನಿದು ಕುಳಿತುಕೊಳ್ಳುವ ಹಕ್ಕು?

(Which God would accept the obeisance and offerings of a priest who repeatedly molested a minor child asks Kerala High Court)

ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು