ಕೊವಿಡ್​ 19 ಚಿಕಿತ್ಸೆಗೆ ರೆಮ್​ಡಿಸಿವಿರ್​ ಪರಿಣಾಮಕಾರಿಯಲ್ಲ; ಚಿಕಿತ್ಸಾ ಔಷಧಿಗಳ ಪಟ್ಟಿಯಿಂದ ತೆಗೆದುಹಾಕಿದ ಡಬ್ಲ್ಯೂಎಚ್​ಒ

ಇತ್ತೀಚೆಗಂತೂ ರೆಮ್​ಡಿಸಿವರ್​ ಇಂಜೆಕ್ಷನ್​​ ಹೆಸರನ್ನು ಪ್ರತಿಯೊಬ್ಬರೂ ಕೇಳಿಯೇ ಇರುತ್ತಾರೆ. ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಪ್ರಮುಖ ಔಷಧ ಎಂದೇ ಬಿಂಬಿತವಾಗಿತ್ತು. ಮನೆಯಲ್ಲೇ ಐಸೋಲೇಟ್​ ಆಗಿ ಕೊರೊನಾಕ್ಕೆ ಚಿಕಿತ್ಸೆ ಪಡೆಯುವವರೂ ಸಹ ಇದನ್ನು ಖರೀದಿಸಲು ಪ್ರಾರಂಭಿಸಿದ್ದರು. ಕೊರೊನಾ ಉಲ್ಬಣದ ಬೆನ್ನಲ್ಲೇ ರೆಮ್​ಡಿಸಿವಿರ್​ ಅಭಾವವೂ ಕಂಡುಬಂದಿತ್ತು. ಆದರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆ (WHO) ಕೊವಿಡ್​ 19 ಚಿಕಿತ್ಸೆ ಔಷಧ ಪಟ್ಟಿಯಿಂದ ಈ ರೆಮ್​ಡಿಸಿವಿರ್ ಇಂಜೆಕ್ಷನ್​ನ್ನು ತೆಗೆದುಹಾಕಿದೆ. ಒಂದು ಕಾಲದಲ್ಲಿ ಕೊರೊನಾ ವಿರುದ್ಧ ಹೋರಾಟದಲ್ಲಿ ಜೀವರಕ್ಷಕದಂತೆ ಬಿಂಬಿತವಾಗಿದ್ದ ರೆಮ್​ಡಿಸಿವಿರ್​​ನ್ನು ಇದೀಗ […]

ಕೊವಿಡ್​ 19 ಚಿಕಿತ್ಸೆಗೆ ರೆಮ್​ಡಿಸಿವಿರ್​ ಪರಿಣಾಮಕಾರಿಯಲ್ಲ; ಚಿಕಿತ್ಸಾ ಔಷಧಿಗಳ ಪಟ್ಟಿಯಿಂದ ತೆಗೆದುಹಾಕಿದ ಡಬ್ಲ್ಯೂಎಚ್​ಒ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on: May 20, 2021 | 6:47 PM

ಇತ್ತೀಚೆಗಂತೂ ರೆಮ್​ಡಿಸಿವರ್​ ಇಂಜೆಕ್ಷನ್​​ ಹೆಸರನ್ನು ಪ್ರತಿಯೊಬ್ಬರೂ ಕೇಳಿಯೇ ಇರುತ್ತಾರೆ. ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಪ್ರಮುಖ ಔಷಧ ಎಂದೇ ಬಿಂಬಿತವಾಗಿತ್ತು. ಮನೆಯಲ್ಲೇ ಐಸೋಲೇಟ್​ ಆಗಿ ಕೊರೊನಾಕ್ಕೆ ಚಿಕಿತ್ಸೆ ಪಡೆಯುವವರೂ ಸಹ ಇದನ್ನು ಖರೀದಿಸಲು ಪ್ರಾರಂಭಿಸಿದ್ದರು. ಕೊರೊನಾ ಉಲ್ಬಣದ ಬೆನ್ನಲ್ಲೇ ರೆಮ್​ಡಿಸಿವಿರ್​ ಅಭಾವವೂ ಕಂಡುಬಂದಿತ್ತು. ಆದರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆ (WHO) ಕೊವಿಡ್​ 19 ಚಿಕಿತ್ಸೆ ಔಷಧ ಪಟ್ಟಿಯಿಂದ ಈ ರೆಮ್​ಡಿಸಿವಿರ್ ಇಂಜೆಕ್ಷನ್​ನ್ನು ತೆಗೆದುಹಾಕಿದೆ.

ಒಂದು ಕಾಲದಲ್ಲಿ ಕೊರೊನಾ ವಿರುದ್ಧ ಹೋರಾಟದಲ್ಲಿ ಜೀವರಕ್ಷಕದಂತೆ ಬಿಂಬಿತವಾಗಿದ್ದ ರೆಮ್​ಡಿಸಿವಿರ್​​ನ್ನು ಇದೀಗ ಕೊವಿಡ್​ 19 ಚಿಕಿತ್ಸಾ ಪಟ್ಟಿಯಿಂದ ತೆಗೆದಿರುವ ವಿಶ್ವ ಆರೋಗ್ಯ ಸಂಸ್ಥೆ, ಕೊರೊನಾ ಚಿಕಿತ್ಸೆಗೆ ರೆಮ್​ಡಿಸಿವಿರ್​ ಪರಿಣಾಮಕಾರಿಯಲ್ಲ ಎಂದೂ ಹೇಳಿದೆ. ನಿನ್ನೆ ಅಂದರೆ ಮಂಗಳವಾರ ದೆಹಲಿಯ ಗಂಗಾರಾಮ್ ಆಸ್ಪತ್ರೆಯ ಮುಖ್ಯಸ್ಥ ಡಾ. ಡಿಎಸ್​ ರಾಣಾ ಈ ಬಗ್ಗೆ ಸುಳಿವು ನೀಡಿದ್ದರು. ಶೀಘ್ರದಲ್ಲೇ ರೆಮ್​ಡಿಸಿವಿರ್​​ನ್ನು ಕೊವಿಡ್​ 19 ಚಿಕಿತ್ಸೆ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಕೊವಿಡ್​ ಸೋಂಕಿತರಿಗೆ ಇದು ಪರಿಣಾಮಕಾರಿ ಎಂಬುದಕ್ಕೆ ಇನ್ನೂ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಹೇಳಿದ್ದರು.

ಕೊರೊನಾ ವಿರುದ್ಧ ಪ್ರಾಯೋಗಿಕವಾಗಿ ಬಳಸಲಾಗಿದ್ದ ಎಲ್ಲ ಔಷಧಿಗಳನ್ನೂ..ಪ್ಲಾಸ್ಮಾ ಥೆರಪಿಯನ್ನೂ ಸೇರಿ ಎಲ್ಲವನ್ನೂ ಚಿಕಿತ್ಸೆಯಿಂದ ಕೈಬಿಡಲಾಗಿದೆ. ಹಾಗೇ ಈ ರೆಮ್​ಡಿಸಿವಿರ್​ನ್ನು ಕೂಡ ಶೀಘ್ರದಲ್ಲೇ ಚಿಕಿತ್ಸಾ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಸದ್ಯದ ಮಟ್ಟಿಗೆ ಕೇವಲ ಮೂರು ರೀತಿಯ ಔಷಧಿಗಳು ಮಾತ್ರ ಕೊವಿಡ್​ 19 ಚಿಕಿತ್ಸೆಗಾಗಿ ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ನಾವು ಇನ್ನೂ ಗಮನಿಸುತ್ತಿದ್ದೇವೆ..ಅಧ್ಯಯನ ನಡೆಯುತ್ತಿದೆ ಎಂದೂ ಡಾ. ಡಿ.ಎಸ್.ರಾಣಾ ಹೇಳಿದ್ದರು.

ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಅನುಷ್ಕಾ ಶರ್ಮಾ ನಟಿಸಿರುವ ಯಾವ ಸಿನಿಮಾ ಫೆವರೆಟ್ ಗೊತ್ತಾ?

ನಾಲ್ಕು ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ಆಕ್ಸಿಜನ್​ ಘಟಕವನ್ನು ನಾಲ್ಕೇ ದಿನಗಳಲ್ಲಿ ದುರಸ್ತಿ ಮಾಡಿದ ಇಂಡಿಯನ್ ಆರ್ಮಿ..

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ