ಪಿಂಚಣಿಯಿಲ್ಲದೆ ನಿವೃತ್ತಿಯಾದರೆ ಅಗ್ನಿವೀರರನ್ನು ಯಾರು ಮದುವೆಯಾಗುತ್ತಾರೆ? ಇದು ಯುವಕರ ಹಿತದೃಷ್ಟಿಯಿಂದ ತಂದಿದಲ್ಲ -ಮೋದಿ ವಿರುದ್ಧ ಮೇಘಾಲಯ ಗವರ್ನರ್ ವಾಗ್ದಾಳಿ
ಅಗ್ನಿಪಥ್ ಯೋಜನೆಯನ್ನು ಹಿಂಪಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಮೇಘಾಲಯ ಗವರ್ನರ್ ಒತ್ತಾಯಿಸಿದ್ದಾರೆ. ಪಿಂಚಣಿಯಿಲ್ಲದೆ ನಿವೃತ್ತಿಯಾದರೆ ಅಗ್ನಿವೀರರನ್ನು ಯಾರು ಮದುವೆಯಾಗುತ್ತಾರೆ. ಅಗ್ನಿಪಥ್ ಯೋಜನೆ ಎಂದಿಗೂ ದೇಶದ ಯುವಕರ ಹಿತದೃಷ್ಟಿಯಿಂದ ತಂದಿದಲ್ಲ.

ಮೇಘಾಲಯ: ಜೂನ್ 14 ರಂದು ರಕ್ಷಣಾ ಸಚಿವಾಲಯವು ಸೇನೆಯಲ್ಲಿ ಗುತ್ತಿಗೆ ನೇಮಕಾತಿಗಾಗಿ ‘ಅಗ್ನಿಪಥ್’ ಯೋಜನೆಯನ್ನು(Agnipath Scheme) ಪ್ರಾರಂಭಿಸಿತ್ತು. ಈ ಯೋಜನೆಯಡಿ ಭಾರತೀಯ ಸೇನೆ, ವಾಯುಪಡೆ ಹಾಗೂ ನೌಕಾಪಡೆಗಳಿಗೆ ನಾಲ್ಕು ವರ್ಷಗಳ ಗುತ್ತಿಗೆಯಡಿ ಯುವ ಸೈನಿಕರನ್ನು ನೇಮಿಸಿಕೊಳ್ಳಲಾಗುತ್ತೆ. ಆದ್ರೆ ಈ ಯೋಜನೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಬಿಹಾರ ಸೇರಿದಂತೆ ದೇಶದ 14 ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಅನೇಕ ಕಡೆಗಳಿಂದ ವಿರೋಧ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಇದರ ಮಧ್ಯೆ ಮೇಘಾಲಯದ ಗವರ್ನರ್ ಸತ್ಯಪಾಲ್ ಮಲಿಕ್(Meghalaya Governor Satya Pal Malik) ಅವರು ಕೇಂದ್ರದ ಹೊಸ ಸೇನಾ ನೇಮಕಾತಿ ಯೋಜನೆ ‘ಅಗ್ನಿಪಥ್’ ಬಗ್ಗೆ ಮೋದಿ ಸರ್ಕಾರ(Narendra Modi) ಹೆಚ್ಚಿನ ಅಸ್ವಸ್ಥತೆಯನ್ನು ಸೇರಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಾಗೂ ಅಗ್ನಿಪಥ್ ಯೋಜನೆಯನ್ನು ಹಿಂಪಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ. ಪಿಂಚಣಿಯಿಲ್ಲದೆ ನಿವೃತ್ತಿಯಾದರೆ ಅಗ್ನಿವೀರರನ್ನು ಯಾರು ಮದುವೆಯಾಗುತ್ತಾರೆ. ಅಗ್ನಿಪಥ್ ಯೋಜನೆ ಎಂದಿಗೂ ದೇಶದ ಯುವಕರ ಹಿತದೃಷ್ಟಿಯಿಂದ ತಂದಿದಲ್ಲ. ವ್ಯತಿರಿಕ್ತವಾಗಿ ಈ ಯೋಜನೆಯಿಂದ ಸರ್ಕಾರ ಮತ್ತು ಹಳ್ಳಿಯ ನಡುವಿನ ಅಂತರ ಹೆಚ್ಚಲಿದೆ. ಇದೇ ಮೊದಲ ಬಾರಿಗೆ ರಾಜ್ಯವೊಂದರ ರಾಜ್ಯಪಾಲರು ಅಗ್ನಿಪಥ್ ಯೋಜನೆಯ ವಿರುದ್ಧ ಹರಿಹಾಯ್ದಿದ್ದಾರೆ. ಆದರೆ, ಬಿಜೆಪಿ ಸರ್ಕಾರ ತಂದಿರುವ ಯೋಜನೆ ವಿರುದ್ಧ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಕೂಡ ಹರಿಹಾಯ್ದಿವೆ. ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾ ದಳ ಕೂಡ ‘ಅಗ್ನಿಪಥ್’ ಯೋಜನೆ ವಿರುದ್ಧ ಧ್ವನಿ ಎತ್ತಿದೆ. ಇದನ್ನೂ ಓದಿ: ಆದೇಶ ಪಾಲಿಸದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಿ, ಬಿಬಿಎಂಪಿಗೆ ಎಚ್ಚರಿಕೆ ನೀಡಿದ ಹೈಕೋರ್ಟ್
ಜೂನ್ 14 ರಂದು, ರಕ್ಷಣಾ ಸಚಿವಾಲಯವು ಸೇನೆಯಲ್ಲಿ ಗುತ್ತಿಗೆ ನೇಮಕಾತಿಗಾಗಿ ‘ಅಗ್ನಿಪಥ್’ ಯೋಜನೆಯನ್ನು ಪ್ರಾರಂಭಿಸಿತ್ತು. ತದನಂತರ ದೇಶಾದ್ಯಂತ ಅಶಾಂತಿಯ ಬೆಂಕಿ ಹೊತ್ತಿಕೊಂಡಿದೆ. ಬಿಹಾರ ಸೇರಿದಂತೆ ದೇಶದ 14 ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದು ಹಲವಾರು ರೈಲುಗಳು ಮತ್ತು ಕಾರುಗಳನ್ನು ಸುಟ್ಟುಹಾಕಲಾಗಿದೆ. ಪೊಲೀಸ್ ಗೋಲಿಬಾರ್ ನಲ್ಲಿ ಒಬ್ಬ ಪ್ರತಿಭಟನಾಕಾರ ಪ್ರಾಣ ಕಳೆದುಕೊಂಡಿದ್ದಾನೆ.
Published On - 4:01 pm, Tue, 28 June 22