Indian Railways: ಈ ಬಾಕ್ಸ್‌ಗಳು ರೈಲ್ವೆ ಟ್ರ್ಯಾಕ್‌ ಪಕ್ಕದಲ್ಲಿ ಏಕೆ ಇರುತ್ತವೆ ನಿಮಗೆ ತಿಳಿದಿದೆಯೇ? ಇವುಗಳಿಂದ ರೈಲ್ವೆಗೆ ಏನು ಉಪಯೋಗ?

Railway Track Axle Counter: ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಕೆಲವು ಅಲ್ಯೂಮಿನಿಯಂ ಬಾಕ್ಸ್‌ ನೋಡಿರುತ್ತೀರಿ. ಅವು ಯಾವುವು, ಯಾವುದಕ್ಕಾಗಿ ಬಳಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಅನೇಕ ಜನರು ಇದನ್ನು ವಿದ್ಯುತ್ ಪೆಟ್ಟಿಗೆಗಳು ಎಂದು ಭಾವಿಸುತ್ತಾರೆ. ಇದು ವಿದ್ಯುತ್ ಸರಬರಾಜಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಆದರೆ ಅವು ವಿದ್ಯುತ್ ಪೆಟ್ಟಿಗೆಗಳಲ್ಲ ಎಂದು ತಿಳಿಯಬೇಕಾದರೆ ನೀವು ಈ ಲೇಖನ ಓದಲೇಬೇಕು.

Indian Railways: ಈ ಬಾಕ್ಸ್‌ಗಳು ರೈಲ್ವೆ ಟ್ರ್ಯಾಕ್‌ ಪಕ್ಕದಲ್ಲಿ ಏಕೆ ಇರುತ್ತವೆ ನಿಮಗೆ ತಿಳಿದಿದೆಯೇ? ಇವುಗಳಿಂದ ರೈಲ್ವೆಗೆ ಏನು ಉಪಯೋಗ?
ಈ ಬಾಕ್ಸ್‌ಗಳು ರೈಲ್ವೆ ಟ್ರ್ಯಾಕ್‌ ಪಕ್ಕದಲ್ಲಿ ಏಕೆ ಇರುತ್ತವೆ ನಿಮಗೆ ಗೊತ್ತಾ
Follow us
ಸಾಧು ಶ್ರೀನಾಥ್​
|

Updated on: Nov 19, 2023 | 6:06 AM

ಭಾರತೀಯ ರೈಲ್ವೆ ಹಲವು ಆಸಕ್ತಿಕರ ಸಂಗತಿಗಳಿಗೆ ತವರು. ಭಾರತೀಯ ರೈಲ್ವೆ ( Indian Railways) ಪ್ರತಿದಿನ ದೇಶದ ಕೋಟಿಗಟ್ಟಲೆ ಜನರನ್ನು ಅವರವರ ಗಮ್ಯ ಸ್ಥಳಗಳಿಗೆ ತಲುಪಿಸುತ್ತಿದೆ. ನಾವು ವಿಶ್ವದ ನಾಲ್ಕನೇ ಅತಿದೊಡ್ಡ ರೈಲ್ವೆ ಜಾಲವನ್ನು ಹೊಂದಿದ್ದೇವೆ. ಭಾರತೀಯ ರೈಲ್ವೆಯು ದೇಶದ ಹೆಚ್ಚಿನ ಜನರಿಗೆ ಉದ್ಯೋಗಗಳನ್ನು ಒದಗಿಸುವ ಕಂಪನಿಯಾಗಿದೆ. ಮತ್ತು ಕೋಟ್ಯಂತರ ಜನರನ್ನು ಸುರಕ್ಷಿತವಾಗಿ ಕೊಂಡೊಯ್ಯುವ ಭಾರತೀಯ ರೈಲ್ವೆಯು ಸುರಕ್ಷತೆಯ ವಿಷಯದಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ರೈಲು ಸುರಕ್ಷತೆಯ ಜೊತೆಗೆ, ಮೇಲ್ವಿಚಾರಣೆಗಾಗಿ ರೈಲಿನ ಒಳಗೆ ಮತ್ತು ಹೊರಗೆ ಅನೇಕ ರೀತಿಯ ಸಾಧನಗಳನ್ನು ಬಳಸಲಾಗುತ್ತದೆ. ರೈಲ್ವೆ ಹಳಿಗಳ ಪಕ್ಕದಲ್ಲಿ ಕಂಡುಬರುವ ಅಲ್ಯೂಮಿನಿಯಂ ಬಾಕ್ಸ್‌ಗಳು (Axle Counter Box) ಅಂತಹ ಸಾಧನಗಳ ಪೈಕಿ ಒಂದಾಗಿದೆ. ಸಾಮಾನ್ಯವಾಗಿ ನೀವು ರೈಲುಗಳಲ್ಲಿ ಪ್ರಯಾಣಿಸುವಾಗ, ಟ್ರ್ಯಾಕ್ ಪಕ್ಕದಲ್ಲಿ ನೀವು ಕೆಲವು ಅಲ್ಯೂಮಿನಿಯಂ ಬಾಕ್ಸ್‌ಗಳನ್ನು (Railway Track Axle Counter) ನೋಡಿರುತ್ತೀರಿ. ಅವು ಯಾವುವು ಮತ್ತು ಅವುಗಳನ್ನು ಯಾವುದಕ್ಕಾಗಿ ಬಳಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಅನೇಕ ಜನರು ಇದನ್ನು ವಿದ್ಯುತ್ ಪೆಟ್ಟಿಗೆಗಳು ಎಂದು ಭಾವಿಸುತ್ತಾರೆ. ಇದು ವಿದ್ಯುತ್ ಸರಬರಾಜಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಆದರೆ ಅವು ವಿದ್ಯುತ್ ಪೆಟ್ಟಿಗೆಗಳಲ್ಲ ಎಂದು ತಿಳಿಯಬೇಕಾದರೆ ನೀವು ಈ ಲೇಖನ ಓದಲೇಬೇಕು.

ರೈಲ್ವೆ ಹಳಿಗಳ ಪಕ್ಕದಲ್ಲಿ ಅಲ್ಲಲ್ಲಿ ಕಂಡುಬರುವ ಈ ಅಲ್ಯೂಮಿನಿಯಂ ಬಾಕ್ಸ್ ಅನ್ನು ಆಕ್ಸಲ್ ಕೌಂಟರ್ ಬಾಕ್ಸ್ ಎಂದು ಕರೆಯಲಾಗುತ್ತದೆ. ಇದನ್ನು ರೈಲ್ವೆ ಕಣ್ಣು ಎಂದೂ ಕರೆಯುತ್ತಾರೆ. ಈ ಅಲ್ಯೂಮಿನಿಯಂ ಬಾಕ್ಸ್ ರೈಲಿನ ಕೋಚ್‌ಗಳ ಸಂಖ್ಯೆಯನ್ನು ಎಣಿಸುತ್ತದೆ. ಹಾಗೆಯೇ ರೈಲು ಯಾವ ದಿಕ್ಕಿನಲ್ಲಿ ಚಲಿಸುತ್ತದೆ? ಅದು ಎಷ್ಟು ವೇಗವಾಗಿ ಚಲಿಸುತ್ತಿದೆ? ಮುಂತಾದ ವಿವರಗಳನ್ನು ಮೌಲ್ಯಮಾಪನ ಮಾಡುತ್ತದೆ. ಅಪಘಾತಗಳನ್ನು ತಡೆಗಟ್ಟಲು ಈ ಆಕ್ಸಲ್ ಕೌಂಟರ್ ಬಾಕ್ಸ್‌ಗಳನ್ನು ಬಳಸಲಾಗುತ್ತದೆ. ಈ ಪೆಟ್ಟಿಗೆಗಳು ಪ್ರತಿ ಮೂರರಿಂದ ಐದು ಕಿ.ಮೀ. ಅಂತರದಲ್ಲಿ ಸ್ಥಾಪನೆಗೊಂಡಿರುತ್ತವೆ. ಈ ಪೆಟ್ಟಿಗೆಗಳು ರೈಲ್ವೆ ಹಳಿಗಳಿಗೆ ಸಂಪರ್ಕ ಹೊಂದಿವೆ.

ಮತ್ತಷ್ಟು ಓದಿ: ರೈಲ್ವೆ ಎಂಜಿನ್​ನಲ್ಲಿ ಕಾಣಿಸಿಕೊಂಡ ಬೆಂಕಿ, ಗೇಟ್​ಮ್ಯಾನ್ ಯಶ್​ಪಾಲ್​ ಸಮಯ ಪ್ರಜ್ಞೆಯಿಂದ ನಾರಾರು ಜೀವಗಳು ಅಪಾಯದಿಂದ ಪಾರು

ರೈಲು ಈ ಪೆಟ್ಟಿಗೆಯನ್ನು ದಾಟಿದಾಗಲೆಲ್ಲಾ, ಹಳಿಗಳ ಪಕ್ಕದಲ್ಲಿ ಇರಿಸಲಾದ ಪೆಟ್ಟಿಗೆಗಳು ರೈಲಿನ ಆಕ್ಸಲ್‌ಗಳನ್ನು (ಎರಡು ಚಕ್ರಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ರಾಡ್) ಎಣಿಕೆ ಮಾಡುತ್ತದೆ. ಅಪಘಾತ ಸಂಭವಿಸಿ ರೈಲಿನ ಹಿಂದಿನ ಕೋಚ್‌ಗಳು ಇಂಜಿನ್‌ನಿಂದ ಹೊರಬಿದ್ದರೆ… ಈ ಅಲ್ಯೂಮಿನಿಯಂ ಬಾಕ್ಸ್‌ಗಳು ತಕ್ಷಣ ಆ ಮಾಹಿತಿಯನ್ನು ಬಾಕ್ಸ್‌ಗಳಿಗೆ ತಲುಪಿಸುತ್ತವೆ. ಇದು ತಕ್ಷಣವೇ ಕೆಂಪು ದೀಪವನ್ನು ಆನ್ ಮಾಡುತ್ತದೆ. ಇದರಿಂದ ಲೊಕೊ ಪೈಲಟ್ ರೈಲು ತಕ್ಷಣವೇ ನಿಲ್ಲುತ್ತದೆ. ಅಲ್ಲದೆ, ಈ ಬಾಕ್ಸ್‌ಗಳು ಬೋಗಿಗಳು ಹಳಿತಪ್ಪಿದ ಬಗ್ಗೆ ಹತ್ತಿರದ ರೈಲು ನಿಲ್ದಾಣಕ್ಕೆ ತಿಳಿಸುತ್ತವೆ. ಒಂದು ವೇಳೆ ಕೆಲವು ಬೋಗಿಗಳು ರೈಲಿನಿಂದ ಬೇರ್ಪಟ್ಟರೆ, ಈ ಆಕ್ಸಲ್ ಕೌಂಟರ್ ಬಾಕ್ಸ್ ಸಹಾಯದಿಂದ ಆಯಾ ಬೋಗಿಗಳು ಯಾವ ಪ್ರದೇಶದಲ್ಲಿವೆ ಎಂಬುದನ್ನು ಕಂಡುಹಿಡಿಯಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ