ಪರ ಪುರುಷರ ಜತೆ ಮಾತನಾಡಬೇಡ ಎಂದಿದ್ದಕ್ಕೆ ಪತಿ ಕುಡಿಯುವ ಕಾಫಿಗೆ ವಿಷ ಬೆರೆಸಿದ ಮಹಿಳೆ
ಪರ ಪುರುಷರ ಜತೆ ಮಾತನಾಡಬೇಡ ಎಂದಿದ್ದಕ್ಕೆ ಪತ್ನಿಯೊಬ್ಬಳು ಪತಿ ಕುಡಿಯುವ ಕಾಫಿಯಲ್ಲಿ ವಿಷ ಬೆರೆಸಿರುವ ಘಟನೆ ಆಗ್ರಾದ ಮುಜಾಫರ್ನಗರದಲ್ಲಿ ನಡೆದಿದೆ. ಗುರುವಾರ ಇಬ್ಬರ ಮಧ್ಯೆ ಕಲಹ ನಡೆದಿದೆ. ಆಗ ಪತ್ನಿ ಪತಿಯ ಕಾಫಿಯಲ್ಲಿ ವಿಷ ಬೆರೆಸಿ ಕುಡಿಯಲು ಕೊಟ್ಟಿದ್ದಾಳೆ. ಆತನ ಆರೋಗ್ಯ ತಕ್ಷಣವೇ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮುಜಾಫರ್ನಗರ, ಮಾರ್ಚ್ 28: ಪರ ಪುರುಷರ ಜತೆ ಮಾತನಾಡಬೇಡ ಎಂದಿದ್ದಕ್ಕೆ ಪತ್ನಿಯೊಬ್ಬಳು ಪತಿ ಕುಡಿಯುವ ಕಾಫಿಯಲ್ಲಿ ವಿಷ ಬೆರೆಸಿರುವ ಘಟನೆ ಆಗ್ರಾದ ಮುಜಾಫರ್ನಗರದಲ್ಲಿ ನಡೆದಿದೆ. ಗುರುವಾರ ಇಬ್ಬರ ಮಧ್ಯೆ ಕಲಹ ನಡೆದಿದೆ. ಆಗ ಪತ್ನಿ ಪತಿಯ ಕಾಫಿಯಲ್ಲಿ ವಿಷ ಬೆರೆಸಿ ಕುಡಿಯಲು ಕೊಟ್ಟಿದ್ದಾಳೆ. ಆತನ ಆರೋಗ್ಯ ತಕ್ಷಣವೇ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇವರಿಬ್ಬರು 2 ವರ್ಷಗಳ ಹಿಂದೆ ವಿವಾಹವಾಗಿದ್ದರು. ಖಾಟೌಲಿಯ ನಿವಾಸಿ ಅನುಜ್ ಕುಮಾರ್ ಎಂದು ಗುರುತಿಸಲಾಗಿದೆ. ಇವರು ಖಾಸಗಿ ಆಸ್ಪತ್ರೆಯಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಟೌಲಿ ಪೊಲೀಸ್ ಠಾಣೆಯಲ್ಲಿ ಅನುಜ್ ಅವರ ಕುಟುಂಬದವರು ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಘಟನೆ ಪತ್ನಿ ಪ್ರೀತಿಸಿದವನ ಜತೆ ಮದುವೆ ಮಾಡಿಸಿದ ಪತಿ ಸಾಮಾನ್ಯವಾಗಿ ತನ್ನ ಸಂಗಾತಿಯನ್ನು ಬೇರೊಬ್ಬರ ಜತೆ ಹಂಚಿಕೊಳ್ಳಲು ಅಥವಾ ಬೇರೊಬ್ಬರಿಗೆ ಬಿಟ್ಟು ಕೊಡುವಂಥಾ ಮನೋಭಾವವಿರುವವರು ತುಂಬಾ ವಿರಳ. ಆದರೆ ನಾನು ಮಕ್ಕಳನ್ನು ನೋಡಿಕೊಳ್ಳುತ್ತೇನೆ ನೀನು ಇಷ್ಟಪಟ್ಟವನೊಂದಿಗೆ ಖುಷಿಯಾಗಿರು ಎಂದು ಪತಿಯೊಬ್ಬ ಪತ್ನಿಯನ್ನು ಆಕೆಯ ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮತ್ತಷ್ಟು ಓದಿ: ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ: ಪತ್ನಿಯನ್ನ ತುಂಡರಿಸಿ ಸೂಟ್ ಕೇಸ್ನಲ್ಲಿ ತುಂಬಿಟ್ಟ ಪತಿ
ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಬೇರೊಬ್ಬನ ಜತೆ ಸಂಬಂಧವಿರುವುದನ್ನು ಅರಿತು ಆಕೆಯನ್ನು ಇಷ್ಟಪಟ್ಟವನೊಂದಿಗೆ ಮದುವೆ ಮಾಡಿಸುವ ನಿರ್ಧಾರ ಮಾಡಿದ್ದಾನೆ. ಬಬ್ಲೂ ಎಂಬ ವ್ಯಕ್ತಿ ತನ್ನ ಇಬ್ಬರು ಮಕ್ಕಳನ್ನು ತಾನು ನೋಡಿಕೊಳ್ಳುವುದಾಗಿ ಹೇಳಿದನು. ಹೆಂಡತಿ ಆ ಬೇಡಿಕೆಯನ್ನು ಒಪ್ಪಿಕೊಂಡಳು.
ಮೀರತ್ ಕೊಲೆ ಪ್ರಕರಣ ಮೀರತ್ನಲ್ಲಿ ಸೌರಭ್ ರಜಪೂತ್ ಎಂಬಾತನನ್ನು ಪತ್ನಿ ಮುಸ್ಕಾನ್ ಪ್ರಿಯಕರ ಸಾಹಿಲ್ ಜತೆ ಸೇರಿ ಕೊಲೆ ಮಾಡಿ 15 ತುಂಡುಗಳಾಗಿ ಕತ್ತರಿಸಿ ಡ್ರಮ್ನಲ್ಲಿ ಹಾಕಿ ಸಿಮೆಂಟ್ನೊಂದಿಗೆ ಸೀಲ್ ಮಾಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ