55 ವರ್ಷಗಳ ನಂತರ ಗೂಗಲ್ ನೆರವಿನಿಂದ ಮಲೇಷ್ಯಾದಲ್ಲಿ ಅಪ್ಪನ ಸಮಾಧಿ ಪತ್ತೆ ಹಚ್ಚಿದ ತಮಿಳುನಾಡಿನ ವ್ಯಕ್ತಿ

1967 ರಲ್ಲಿ ಅನಾರೋಗ್ಯದಿಂದ ನಿಧನರಾದಾಗ ನನ್ನ ತಂದೆಗೆ 37 ವರ್ಷ. ನನ್ನ ತಾಯಿ ರಾಧಾಭಾಯಿ ಅಪ್ಪನನ್ನು ಸಮಾಧಿ ಮಾಡಿ ನನ್ನನ್ನು ಭಾರತಕ್ಕೆ ಕರೆತಂದರು. 35 ವರ್ಷಗಳ ಹಿಂದೆ ಅವರೂ ನಿಧನರಾದರು. ನಾನು ಯಾವಾಗಲೂ ತಮ್ಮ ತಂದೆಯನ್ನು ಎಲ್ಲಿ ಸಮಾಧಿ ಮಾಡಿದ್ದಾರೆ ಎಂಬುದರ ಬಗ್ಗೆ ಹುಡುಕುತ್ತಿದ್ದೆ...

55 ವರ್ಷಗಳ ನಂತರ ಗೂಗಲ್ ನೆರವಿನಿಂದ ಮಲೇಷ್ಯಾದಲ್ಲಿ ಅಪ್ಪನ ಸಮಾಧಿ ಪತ್ತೆ ಹಚ್ಚಿದ ತಮಿಳುನಾಡಿನ ವ್ಯಕ್ತಿ
ಅಪ್ಪನ ಸಮಾಧಿ ಬಳಿ ತಿರುಮಾರನ್
Image Credit source: TNIE
TV9kannada Web Team

| Edited By: Rashmi Kallakatta

Nov 24, 2022 | 1:04 PM

ತೆಂಕಾಶಿ (ತಮಿಳುನಾಡು): ಐವತ್ತಾರು ವರ್ಷದ ತಿರುಮಾರನ್‌ಗೆ ಅಪ್ಪನ ನೆನಪೇ ಇಲ್ಲ. ಅವರ ತಂದೆ ಕೆ ರಾಮಸುಂದರಂ ಅಲಿಯಾಸ್ ಪೂಂಗುಂಟ್ರಾನ್ ಮಲೇಷ್ಯಾದ (Malaysia) ಶಾಲೆಯಲ್ಲಿ ಕಲಿಸುತ್ತಿದ್ದರು. ತಿರುಮಾರನ್ ಜನಿಸಿದ ಆರು ತಿಂಗಳ ನಂತರ ಅಪ್ಪ ಮಲೇಷ್ಯಾದಲ್ಲೇ ನಿಧನರಾದರು ಎಂದಷ್ಟೇ ಅಪ್ಪನ ಬಗ್ಗೆ ಗೊತ್ತಿದ್ದ ಸಂಗತಿ. ಪಿ ತಿರುಮಾರನ್, ಈಗ ತಿರುನಲ್ವೇಲಿ (Tirunelveli)ಜಿಲ್ಲೆಯ ವೆಂಕಡಂಪಟ್ಟಿ ಗ್ರಾಮದ ಕಾರ್ಯಕರ್ತ. ಇವರು ತಮ್ಮ ಅಪ್ಪನ ಬಗ್ಗೆ ಮಾಹಿತಿ ಹುಡುಕಲು ಮೊರೆ ಹೋಗಿದ್ದು ಗೂಗಲ್ ಸರ್ಚ್ ಇಂಜಿನ್​​ನ್ನು. ಗೂಗಲ್​​ನಲ್ಲಿ ಅವರು ತನ್ನ ಅಪ್ಪನ ಸಮಾಧಿ ಹುಡುಕಿದಾಗ ಅದೂ ಸಿಕ್ಕಿತು. ಅವರ ಅಪ್ಪನ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿದ್ದು, ಅಪ್ಪ ಕಲಿಸಿದ ವಿದ್ಯಾರ್ಥಿಗಳಿಂದಾಗಿತ್ತು. 1967 ರಲ್ಲಿ ಅನಾರೋಗ್ಯದಿಂದ ನಿಧನರಾದಾಗ ನನ್ನ ತಂದೆಗೆ 37 ವರ್ಷ. ನನ್ನ ತಾಯಿ ರಾಧಾಭಾಯಿ ಅಪ್ಪನನ್ನು ಸಮಾಧಿ ಮಾಡಿ ನನ್ನನ್ನು ಭಾರತಕ್ಕೆ ಕರೆತಂದರು. 35 ವರ್ಷಗಳ ಹಿಂದೆ ಅವರೂ ನಿಧನರಾದರು. ನಾನು ಯಾವಾಗಲೂ ತಮ್ಮ ತಂದೆಯನ್ನು ಎಲ್ಲಿ ಸಮಾಧಿ ಮಾಡಿದ್ದಾರೆ ಎಂಬುದರ ಬಗ್ಗೆ ಹುಡುಕುತ್ತಿದ್ದೆ ಎಂದು ತಿರುಮಾರನ್ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ನಮ್ಮಪ್ಪ ಮಲೇಷ್ಯಾದ ಕೆರ್ಲಿಂಗ್‌ನಲ್ಲಿರುವ ಕೆರ್ಲಿಂಗ್ ತೊಟ್ಟ ಥೇಸಿಯಾ ವಕೈ ತಮಿಳು ಪಲ್ಲಿ ಎಂಬ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ನನಗೆ ತಿಳಿದಿತ್ತು. ಶಾಲೆಯ ಕಟ್ಟಡ ಶಿಥಿಲಗೊಂಡಿದೆ. ಶಾಲೆಯನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಗೂಗಲ್ ಮೂಲಕ ನಾನು ಕಂಡುಕೊಂಡೆ. ನಾನು ಮುಖ್ಯೋಪಾಧ್ಯಾಯ ಕುಮಾರ್ ಚಿದಂಬರಂ ಅವರ ಇಮೇಲ್ ವಿಳಾಸವನ್ನು ಪತ್ತೆ ಹಚ್ಚಿ, ನಾನು ನನ್ನ ತಂದೆಯ ಸಮಾಧಿಯನ್ನು ಹುಡುಕಲು ಬಯಸುತ್ತೇನೆ ಎಂದು ಅವರಿಗೆ ಹೇಳಿದೆ.

ಚಿದಂಬರಂ ನಂತರ ರಾಮಸುಂದರಂ ಅವರ ಹಳೆಯ ವಿದ್ಯಾರ್ಥಿಗಳಾದ ಮೋಹನ ರಾವ್ ಮತ್ತು ನಾಗಪ್ಪನ್ ಅವರೊಂದಿಗೆ ಸಂಪರ್ಕ ಸಾಧಿಸಿದರು, ಅವರಿಬ್ಬರೂ ಎಂಭತ್ತರ ಹರೆಯದವರಾಗಿದ್ದಾರೆ. ನಂತರ ಇಬ್ಬರೂ ತಮ್ಮ ಶಿಕ್ಷಕರ ಸಮಾಧಿಯನ್ನು ಕೆರ್ಲಿಂಗ್‌ನಲ್ಲಿ ಪತ್ತೆ ಮಾಡಿ ತಿರುಮಾರನ್‌ಗೆ ಮಾಹಿತಿ ನೀಡಿದರು.

“ನಾನು ನವೆಂಬರ್ 8 ರಂದು ಮಲೇಷ್ಯಾಕ್ಕೆ ಹೋಗಿ ಪೊದೆಗಳಲ್ಲಿ ನನ್ನ ತಂದೆಯ ಸಮಾಧಿಯನ್ನು ನೋಡಿದೆ. ಅದು ಸವೆದಿದ್ದರೂ, ಸಮಾಧಿಯಲ್ಲಿ ನನ್ನ ತಂದೆಯ ಚಿತ್ರವಿದೆ, ಜೊತೆಗೆ ಅವರ ಹೆಸರು ಮತ್ತು ಜನನ ಮತ್ತು ಮರಣ ದಿನಾಂಕಗಳು ಇತ್ತು. ನವೆಂಬರ್ 16 ರಂದು ಭಾರತಕ್ಕೆ ಮರಳುವ ಮೊದಲು ನಾನು ಸಮಾಧಿ ಮುಂದೆ ಹಲವಾರು ಬಾರಿ ಪ್ರಾರ್ಥನೆ ಸಲ್ಲಿಸಿದೆ ಎಂದು ತಿರುಮಾರನ್ ಹೇಳಿದ್ದಾರೆ.

ನನ್ನ ತಂದೆ ಅವರನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರ ವಿದ್ಯಾರ್ಥಿ ನಾಗಪ್ಪನ್ ಹೇಳಿದರು. ತರಗತಿಯಲ್ಲಿ ಗಮನ ಹರಿಸದ ಕಾರಣಕ್ಕೆ ನನ್ನ ತಂದೆ ಹೊಡೆದಾಗ ಪ್ರಜ್ಞೆ ತಪ್ಪಿ ಬಿದ್ದೆ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಕಮಲಂ ಹೇಳಿದ್ದಾರೆ. ಆದರೆ ನನ್ನ ತಂದೆ ಅವಳನ್ನು ತನ್ನ ತೊಡೆಯ ಮೇಲೆ ಮಲಗಿಸಿ ಚೇತರಿಸಿಕೊಳ್ಳಲು ಸಹಾಯ ಮಾಡಿದರು ಎಂದು ಅವರು ಹೇಳಿದ್ದಾರೆ. ನನ್ನ ತಂದೆ ಪೆರುಮಾಳ್‌ಗೆ ಕಾಲೇಜಿಗೆ ಹೋಗಲು ಸಹಾಯ ಮಾಡಲು ಬೈಸಿಕಲ್  ಉಡುಗೊರೆಯಾಗಿ ನೀಡಿದರು. ಪೆರುಮಾಳ್ ನನ್ನನ್ನು ಮಲೇಷ್ಯಾದಲ್ಲಿ ಎರಡು ಬಾರಿ ಭೇಟಿಯಾದರು ಎಂದು ತಿರುಮಾರನ್ ಅಪ್ಪನ ಬಗ್ಗೆ ಅವರ ವಿದ್ಯಾರ್ಥಿಗಳು ಹೇಳಿದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಸ್ವತಃ ಅನಾಥರಾಗಿರುವ ತಿರುಮಾರನ್ ಅನಾಥಾಶ್ರಮವನ್ನು ನಡೆಸುತ್ತಿದ್ದಾರೆ. ನಾನು ಸುಮಾರು 60 ಅನಾಥರಿಗೆ ಮದುವೆಗಳನ್ನು ನಡೆಸಲು ಸಹಾಯ ಮಾಡಿದ್ದೇನೆ. 100 ಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಪಡೆದುಕೊಂಡಿದ್ದೇನೆ. ಜೊತೆಗೆ, ನಾನು 3,009 ರಕ್ತದಾನ ಶಿಬಿರಗಳನ್ನು ನಡೆಸಿದ್ದೇನೆ. ತಂದೆ-ತಾಯಿಯನ್ನು ಕಳೆದುಕೊಂಡ ನನಗೆ ಅನಾಥನಾಗುವುದು ಎಷ್ಟು ಕಷ್ಟ ಎಂಬುದು ಗೊತ್ತಿದೆ ಅಂತಾರೆ ಅವರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada