ದೇಶದಲ್ಲಿ ಹಿಂಸಾಚಾರದ ವಾತಾವರಣ ಇರುವುದರಿಂದ ಶಾಂತಿ, ಸಹೋದರತ್ವ ಬೇಕು; ಪ್ರಧಾನಿಯವರ ಮುಂದೆಯೇ ಗೆಹ್ಲೋಟ್ ಮಾತು

ದೇಶದಲ್ಲಿ ಹಿಂಸಾಚಾರದ ವಾತಾವರಣ ಇರುವುದರಿಂದ ಶಾಂತಿ, ಸಹೋದರತ್ವ ಬೇಕು; ಪ್ರಧಾನಿಯವರ ಮುಂದೆಯೇ ಗೆಹ್ಲೋಟ್ ಮಾತು
'ಆಜಾದಿ ಕೆ ಅಮೃತ್ ಮಹೋತ್ಸವ ಸೆ ಸ್ವರ್ಣಿಮ್ ಭಾರತ್ ಕೆ ಓರ್ ಕಾರ್ಯಕ್ರಮದಲ್ಲಿ ಮೋದಿ ಮತ್ತು ಗೆಹ್ಲೋಟ್

ನಾವು ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವವನ್ನು ಸೃಷ್ಟಿಸಲು ಮತ್ತು ಬಲಪಡಿಸಲು ಬಯಸುತ್ತೇವೆ, ಇದು ಇಂದು ಅತ್ಯಂತ ಅವಶ್ಯಕವಾಗಿದೆ ಏಕೆಂದರೆ ದೇಶದಲ್ಲಿ ಉದ್ವಿಗ್ನತೆ ಮತ್ತು ಹಿಂಸಾಚಾರದ ವಾತಾವರಣವಿದೆ ಎಂದು ಕಂಡುಬಂದಿದೆ ಎಂದ ಗೆಹ್ಲೋಟ್.

TV9kannada Web Team

| Edited By: Rashmi Kallakatta

Jan 20, 2022 | 8:46 PM


ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi)  ಅವರು ಉಪಸ್ಥಿತರಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರು, ದೇಶದಲ್ಲಿ ಹಿಂಸಾಚಾರದ ವಾತಾವರಣವಿರುವುದರಿಂದ ಶಾಂತಿ ಮತ್ತು ಸಹೋದರತ್ವ ಇಂದಿನ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ‘ಆಜಾದಿ ಕೆ ಅಮೃತ್ ಮಹೋತ್ಸವ ಸೆ ಸ್ವರ್ಣಿಮ್ ಭಾರತ್ ಕೆ ಓರ್’ ರಾಷ್ಟ್ರೀಯ ಉದ್ಘಾಟನಾ ಸಮಾರಂಭದಲ್ಲಿ ಗೆಹ್ಲೋಟ್ ಈ ಮಾತುಗಳನ್ನಾಡಿದ್ದಾರೆ. ಗುರುವಾರ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಬ್ರಹ್ಮಕುಮಾರಿಯರ ಏಳು ಉಪಕ್ರಮಗಳಿಗೆ ಚಾಲನೆ ನೀಡಿದರು. ತಮ್ಮ ಭಾಷಣದಲ್ಲಿ, ಪ್ರಧಾನಿ ಮೋದಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಭಾರತದ ಇಮೇಜ್ ಅನ್ನು ಕಳಂಕಗೊಳಿಸುವ ಪ್ರವೃತ್ತಿಗೆ ವಿಷಾದಿಸಿದರು. “ಇದು ಕೇವಲ ರಾಜಕೀಯ ಎಂದು ಹೇಳುವ ಮೂಲಕ ನಾವು ಇದನ್ನು ತಳ್ಳಿಹಾಕುವಂತಿಲ್ಲ. ಇದು ರಾಜಕೀಯವಲ್ಲ, ಇದು ನಮ್ಮ ದೇಶದ ಪ್ರಶ್ನೆ. ಇಂದು ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವಾಗ, ಜಗತ್ತು ಭಾರತವನ್ನು ಸರಿಯಾಗಿ ತಿಳಿದುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಧಾನಿ ಮೋದಿಯನ್ನು ಉದ್ದೇಶಿಸಿ ಮಾತನಾಡಿದ ಗೆಹ್ಲೋಟ್, “ನಿಮ್ಮ ಸಂದೇಶವು 4,000 ಕೇಂದ್ರಗಳ ಮೂಲಕ ದೇಶದ ಮೂಲೆ ಮೂಲೆಗಳನ್ನು ತಲುಪುತ್ತದೆ” ಎಂದು ಹೇಳಿದರು. ನಾವು ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವವನ್ನು ಸೃಷ್ಟಿಸಲು ಮತ್ತು ಬಲಪಡಿಸಲು ಬಯಸುತ್ತೇವೆ, ಇದು ಇಂದು ಅತ್ಯಂತ ಅವಶ್ಯಕವಾಗಿದೆ ಏಕೆಂದರೆ ದೇಶದಲ್ಲಿ ಉದ್ವಿಗ್ನತೆ ಮತ್ತು ಹಿಂಸಾಚಾರದ ವಾತಾವರಣವಿದೆ ಎಂದು ಕಂಡುಬಂದಿದೆ. ನೀವು ಮತ್ತು ನಾವೆಲ್ಲರೂ ಅದನ್ನು ತೊಡೆದುಹಾಕಲು ಬಯಸುತ್ತೇವೆ ಎಂದು ಗೆಹ್ಲೋಟ್ ಹೇಳಿದ್ದಾರೆ.

“ಸತ್ಯ ಮತ್ತು ಅಹಿಂಸೆಯ ಹಾದಿಯನ್ನು ಹಿಡಿಯುವ ಮೂಲಕ ಮಾತ್ರ ನಾವು ಸಮಾಜ ಮತ್ತು ರಾಷ್ಟ್ರವನ್ನು ಮುನ್ನಡೆಸಬಹುದು ಎಂದು ನಾನು ನಂಬುತ್ತೇನೆ. ಎಲ್ಲಿ ಶಾಂತಿ ಇರುತ್ತದೋ ಅಲ್ಲಿ ಅಭಿವೃದ್ಧಿ ಇರುತ್ತದೆ ಎಂದು ಗೆಹ್ಲೋಟ್ ಹೇಳಿದರು.

‘ಆಜಾದಿ ಕೇ ಅಮೃತ್ ಮಹೋತ್ಸವ ಸೆ ಸ್ವರ್ಣಿಂ ಭಾರತ್ ಕೆ ಓರ್’ ಕಾರ್ಯಕ್ರಮದ ಸಮಾರಂಭದಲ್ಲಿ  ಮುಖ್ಯ ಭಾಷಣ ಮಾಡಿದ ಮೋದಿ, ಈ ಅಮೃತ ಕಾಲ ಮಲಗಿರುವಾಗ ಕನಸು ಕಾಣುವುದಕ್ಕಲ್ಲ, ಎಚ್ಚರದಿಂದ ಸಂಕಲ್ಪಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿದೆ . ಮುಂಬರುವ 25 ವರ್ಷಗಳು ಕಠಿಣ ಪರಿಶ್ರಮ, ತ್ಯಾಗ ಮತ್ತು ತಪಸ್ಸಿನ ಕಾಲವಾಗಿದೆ. ಈ 25 ವರ್ಷಗಳು ನೂರಾರು ವರ್ಷಗಳ ಗುಲಾಮಗಿರಿಯಲ್ಲಿ ನಮ್ಮ ಸಮಾಜ ಕಳೆದುಕೊಂಡಿದ್ದನ್ನು ಮರಳಿ ಪಡೆಯಲಿರುವ ಅವಧಿಯಾಗಿದೆ ಎಂದು  ಹೇಳಿದ್ದಾರೆ. ‘ಆಜಾದಿ ಕೇ ಅಮೃತ್ ಮಹೋತ್ಸವ ಸೇ ಸ್ವರ್ಣಿಂ ಭಾರತ್ ಕೆ ಓರ್’ ಕಾರ್ಯಕ್ರಮವನ್ನು ವರ್ಚುವಲ್ ಆಗಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಜಾಗತಿಕ ಇಮೇಜ್ ಅನ್ನು ಹಾಳುಮಾಡುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಎಚ್ಚರಿಸಿದ್ದಾರೆ. ಇದನ್ನು ಕೇವಲ ರಾಜಕೀಯ ಎಂದು ಹೇಳುವ ಮೂಲಕ ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದು ನಮ್ಮ ದೇಶದ ಪ್ರತಿಷ್ಠೆಯ ಪ್ರಶ್ನೆಯಾಗಿದೆ ಎಂದು  ಹೇಳಿದರು. ಭಾರತ ವಿರೋಧಿ ಪ್ರಚಾರವನ್ನು ಎದುರಿಸುವಲ್ಲಿ ಬ್ರಹ್ಮಕುಮಾರಿಗಳು ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ಯಾವ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ಪ್ರಧಾನಿ ಮೋದಿ ವಿವರಿಸಿದರು. “ವಿವಿಧ ದೇಶಗಳಲ್ಲಿನ ಜನರಿಗೆ ಸರಿಯಾದ ಮಾಹಿತಿಯನ್ನು ರವಾನಿಸಲಾಗುತ್ತಿದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು.ಭಾರತದ ವಿರುದ್ಧ ಹರಡುತ್ತಿರುವ ವದಂತಿಗಳ ವಿರುದ್ಧ ಹೋರಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮೋದಿ ಹೇಳಿದರು.

ಇಂದು ಕೋಟಿಗಟ್ಟಲೆ ಭಾರತೀಯರು ಸ್ವರ್ಣಿಂ ಭಾರತಕ್ಕೆ ಅಡಿಗಲ್ಲು ಹಾಕುತ್ತಿದ್ದಾರೆ. ರಾಷ್ಟ್ರದ ಪ್ರಗತಿಯಲ್ಲಿ ನಮ್ಮ ಪ್ರಗತಿ ಅಡಗಿದೆ. ರಾಷ್ಟ್ರವು ನಮ್ಮಿಂದ ಅಸ್ತಿತ್ವದಲ್ಲಿದೆ ಮತ್ತು ನಾವು ರಾಷ್ಟ್ರದಿಂದ ಅಸ್ತಿತ್ವದಲ್ಲಿದ್ದೇವೆ. ಈ ಅರಿವು ನವ ಭಾರತದ ನಿರ್ಮಾಣದಲ್ಲಿ ಭಾರತೀಯರ ದೊಡ್ಡ ಶಕ್ತಿಯಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ:  ಭಾರತದ ಜಾಗತಿಕ ಪ್ರತಿಷ್ಠೆಗೆ ಕಳಂಕ ತರುವ ಪ್ರಯತ್ನಗಳು ನಡೆಯುತ್ತಿವೆ: ಪ್ರಧಾನಿ ನರೇಂದ್ರ ಮೋದಿ

Follow us on

Related Stories

Most Read Stories

Click on your DTH Provider to Add TV9 Kannada