WITT TV9 Global Summit 2024: ರಾಹುಲ್ ಗಾಂಧಿ ಅವರೇ ಹೆದರಿದ್ದಾರೆ, ನಾವು ಯಾರನ್ನೂ ಭಯಪಡಿಸುವ ಕೆಲಸ ಮಾಡಿಲ್ಲ: ರಾಜನಾಥ್ ಸಿಂಗ್
ನಮ್ಮ ಸರ್ಕಾರವು ಯಾರನ್ನೂ ಭಯಪಡಿಸುವ ಕೆಲಸ ಮಾಡಿಲ್ಲ, ರಾಹುಲ್ ಗಾಂಧಿ ಅವರಾಗಿಯೇ ಭಯಪಟ್ಟಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಟಿವಿ9ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆಯಲ್ಲಿ ಅವರು ಮಾತನಾಡಿದರು.
‘‘ರಾಹುಲ್ ಗಾಂಧಿ(Rahul Gandhi) ಅವರೇ ಹೆದರಿದ್ದಾರೆ ನಾವು ಯಾರನ್ನೂ ಭಯ ಪಡಿಸುವ ಕೆಲಸ ಮಾಡಿಲ್ಲ’’ ಎಂದು ರಕ್ಷಣಾ ಸಚಿವ ರಾಜನಾಥ್ಸಿಂಗ್(Rajnath Singh) ಹೇಳಿದ್ದಾರೆ. ಟಿವಿ9 ನೆಟ್ವರ್ಕ್ ಆಯೋಜಿಸಿರುವ ಮೂರು ದಿನಗಳ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’’ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಮ್ಮ ಸರ್ಕಾರವು ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುತ್ತದೆ, ಯಾರನ್ನೂ ಹೆಸರಿಸಿ, ಬೆದರಿಸುವ ಕೆಲಸ ಮಾಡುವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ ಎಂಬ ರಾಹುಲ್ ಗಾಂಧಿ ಅವರ ಆರೋಪವನ್ನು ತಳ್ಳಿಹಾಕಿದರು. ರಾಹುಲ್ ಗಾಂಧಿ ಅವರೇ ಮಾತನಾಡುವುದನ್ನು ನಿಲ್ಲಿಸುತ್ತಾರೆ, ಯಾರೂ ಅವರ ಮೈಕ್ ಅನ್ನು ಸ್ವಿಚ್ ಆಫ್ ಮಾಡುವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ವಿರೋಧ ಪಕ್ಷಗಳಿಗೆ ಸಮಸ್ಯೆಯ ಕೊರತೆ ಇದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದ್ದು, ಇದನ್ನು ವಿಶ್ವವೇ ಒಪ್ಪಿಕೊಂಡಿರುವುದರಿಂದ ವಿರೋಧ ಪಕ್ಷಗಳು ಏನು ಮಾತನಾಡುತ್ತಿವೆ ಎಂಬುದು ಅರ್ಥವಾಗುತ್ತಿಲ್ಲ.
ಮತ್ತಷ್ಟು ಓದಿ: WITT TV9 Global Summit 2024: ಪಾಕಿಸ್ತಾನ ಉಗ್ರರನ್ನು ಎಲ್ಲಿವರೆಗೆ ಸಲಹುತ್ತೋ ಅಲ್ಲಿವರೆಗೆ ಭಾರತ-ಪಾಕ್ ಸಂಬಂಧ ಸರಿಹೋಗದು: ರಾಜನಾಥ್ ಸಿಂಗ್
ರಾಮರಾಜ್ಯದ ಆಗಮನ ಆರಂಭವಾಗಿದೆ ರಾಮಮಂದಿರ ನಿರ್ಮಾಣದಿಂದ ರಾಮರಾಜ್ಯದ ಆಗಮನ ಆರಂಭವಾಗಿದೆ, ರಾಮಲಲ್ಲಾ ಕುಟೀರದಿಂದ ಅರಮನೆಗೆ ಬಂದಿದ್ದಾನೆ. ಹೀಗಾಗಿ ದೇಶ ರಾಮರಾಜ್ಯವಾಗಲು ಹಾದಿ ಸುಗಮವಾಗಿದೆ ಎಂದರು. ನಸಂಘದ ಕಾಲದಿಂದಲೂ ಏಕರೂಪ ನಾಗರಿಕ ಸಂಹಿತೆ ನಮ್ಮ ಪ್ರಣಾಳಿಕೆಯ ಭಾಗವಾಗಿದೆ, ಉತ್ತರಾಖಂಡದಲ್ಲಿ ಬಂದಿದೆ, ದೇಶದಲ್ಲೂ ಅಗತ್ಯವಿದ್ದಾಗ ಬರಲಿದೆ ಎಂದು ರಾಜನಾಥ್ ಸಿಂಗ್ ಹೇಳಿದರು. ನಮ್ಮ ಪಕ್ಷ ಮತ್ತು ನಮ್ಮ ಸರ್ಕಾರ ಜಾತಿ, ಧರ್ಮದ ರಾಜಕಾರಣ ಮಾಡುವುದಿಲ್ಲ ಎಂದರು. ಎಲ್ಲರ ಬೆಂಬಲ ಮತ್ತು ಪ್ರತಿಯೊಬ್ಬರ ಅಭಿವೃದ್ಧಿ ನಮ್ಮ ಗುರಿ ಎಂದು ಹೇಳಿದರು.
ಭಾರತ ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗುತ್ತಿದೆ 2014ರ ನಂತರ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾವಲಂಬನೆಗೆ ಮಾದರಿಯಾಗಿದೆ. 10 ವರ್ಷಗಳ ಹಿಂದೆ ಭಾರತ ಹಲವು ಇಲಾಖೆಗಳಲ್ಲಿ ಆಮದು ಮಾಡಿಕೊಳ್ಳುತ್ತಿದ್ದ ಭಾರತ ಈಗ ರಫ್ತು ಆರಂಭಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ