ಉಳಿತಾಯದ ಹಣವನ್ನೆಲ್ಲ ಪತಿಗಾಗಿ ಖಾಲಿ ಮಾಡಿ, ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮಹಿಳೆ; ಮನಕಲಕುವ ಮನವಿ ಇದು..
ಸಮಾನತೆ, ನ್ಯಾಯದ ಆಧಾರದ ಮೇಲೆ ನಾನು ಪಿಎಂ ಕೇರ್ಸ್ನಿಂದ ಹಣ ಪಡೆಯಲು ಅರ್ಹನಾಗಿದ್ದೇನೆ. ನನ್ನ ಪತಿಯ ಜೀವ ಉಳಿಸಲು ಸರ್ಕಾರದಿಂದ ಕಾನೂನುಬದ್ಧ ಸಹಾಯದ ನಿರೀಕ್ಷೆ ಹೊಂದಿದ್ದೇನೆ ಎಂದು ಮಹಿಳೆ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ತನ್ನ ಉಳಿತಾಯದ ಹಣವನ್ನೆಲ್ಲ ಪತಿಗಾಗಿ ಖಾಲಿ ಮಾಡಿದ ಮಹಿಳೆಯೊಬ್ಬಳು, ತನಗೆ ಪಿಎಂ ಕೇರ್ಸ್ (PM CARES) ಮತ್ತು ತನ್ನ ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣಕಾಸಿನ ನೆರವು ಕೊಡಿಸುವಂತೆ ಸುಪ್ರಿಂಕೋರ್ಟ್(Supreme Court)ಗೆ ಮನವಿ ಮಾಡಿದ್ದಾರೆ. ಇದೊಂದು ಮನಕಲಕುವ ಘಟನೆಯಾಗಿದ್ದು, ಸದ್ಯ ಈ ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಾಳೆಗೆ ಮುಂದೂಡಿದೆ. ನಾನು ಉಳಿತಾಯದ ಹಣವನ್ನೆಲ್ಲ ಪತಿಯ ಚಿಕಿತ್ಸೆಗೆ ವ್ಯಯಿಸಿದೆ. ಅವರು ಕೊವಿಡ್ 19 (Covid 19) ಗೆ ಒಳಗಾಗಿ ಗುಣಮುಖರಾದ ನಂತರ ತುಂಬ ಅನಾರೋಗ್ಯವಾಯಿತು. ನನ್ನಲ್ಲಿದ್ದ ಹಣವೆಲ್ಲ ಖಾಲಿಯಾಗಿದೆ. ಈಗ ನನ್ನ ಪತಿಗೆ ಶ್ವಾಸಕೋಶ ಕಸಿ ಮಾಡಬೇಕಾಗಿದೆ. ಅದಕ್ಕಾಗಿ ನನಗೆ ಪಿಎಂ ಕೇರ್ಸ್ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1 ಕೋಟಿ ರೂಪಾಯಿ ಕೊಡಿಸಿ ಎಂದು ಸುಪ್ರೀಂಗೆ ಸಲ್ಲಿಸಿದ ಅರ್ಜಿಯಲ್ಲಿ ಮಹಿಳೆ ಮನವಿ ಮಾಡಿದ್ದಾರೆ.
ಇಂದಿನ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ತಮಗೊಂದು ಅರ್ಜಿಯ ಪ್ರತಿ ನೀಡುವಂತೆ ಕೋರಿದ್ದಾರೆ. ಈ ಅರ್ಜಿಯನ್ನು ನ್ಯಾಯಮೂರ್ತಿ ಎಲ್.ಎನ್.ರಾವ್ ಮತ್ತು ಅನಿರುದ್ ಬೋಸ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸುತ್ತಿದೆ. ಮನವಿಗೆ ಸಂಬಂಧಪಟ್ಟಂತೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಆದರೆ ಕೇಂದ್ರದಿಂದ ಏನಾದರೂ ಮಾಡಲು ಸಾಧ್ಯವೇ ಎಂಬುದನ್ನು ಪ್ರಶ್ನಿಸಿ, ಆಗಸ್ಟ್ 6ರಂದು ಒಂದು ನೋಟಿಸ್ ನೀಡಿದ್ದಾಗಿ ಅರ್ಜಿದಾರ ಮಹಿಳೆಗೆ ತಿಳಿಸಿದೆ. ಈ ಬಗ್ಗೆ ಸಾಲಿಸಿಟರ್ ಜನರಲ್ಗೂ ತಿಳಿಸಿದ ಎಲ್.ಎನ್.ರಾವ್, ನಿಮಗೆ ಖಂಡಿತ ಅರ್ಜಿಯ ಮನವಿಯನ್ನು ನೀಡುತ್ತೇವೆ ಎಂದಿದ್ದಾರೆ.
ಸಮಾನತೆ, ನ್ಯಾಯದ ಆಧಾರದ ಮೇಲೆ ನಾನು ಪಿಎಂ ಕೇರ್ಸ್ನಿಂದ ಹಣ ಪಡೆಯಲು ಅರ್ಹನಾಗಿದ್ದೇನೆ. ನನ್ನ ಪತಿಯ ಜೀವ ಉಳಿಸಲು ಸರ್ಕಾರದಿಂದ ಕಾನೂನುಬದ್ಧ ಸಹಾಯದ ನಿರೀಕ್ಷೆ ಹೊಂದಿದ್ದೇನೆ ಎಂದು ಮಹಿಳೆ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಕೊವಿಡ್ 19 ಪರಿಸ್ಥಿತಿ ಇದೆ. ನನ್ನ ಪತಿಯೂ ಕೊವಿಡ್ 19 ಸೋಂಕಿನಿಂದಲೇ ಸಂಕಷ್ಟಪಡುತ್ತಿದ್ದಾರೆ. ಅವರಿಗೀಗ ಚಿಕಿತ್ಸೆ, ಶ್ವಾಸಕೋಶ ಕಸಿ, ಔಷಧಗಳಿಗಾಗಿ ಸುಮಾರು 1 ಕೋಟಿ ರೂಪಾಯಿ ನೆರವು ಬೇಕಾಗಿದೆ. ಪತಿಯ ಜೀವ ಉಳಿಸಲು ಸರ್ಕಾರ ಅಗತ್ಯ ಹಣಕಾಸಿನ ನೆರವು ನೀಡದೆ ಇದ್ದರೆ ಅದು ಸಂವಿಧಾನದ 14 ಮತ್ತು 21ನೇ ವಿಧಿಯ ಉಲ್ಲಂಘನೆಯಾಗುತ್ತದೆ. ನಾಗರಿಕರಿಗೆ ಸಮರ್ಪಕ ಆರೋಗ್ಯ ಸೌಲಭ್ಯ ಒದಗಿಸಬೇಕು ಎಂದೇ ಆ ವಿಧಿಗಳು ಸಾರುತ್ತವೆ ಎಂದೂ ಸಹ ಮಹಿಳೆ ಹೇಳಿದ್ದಾರೆ.
ಇದನ್ನೂ ಓದಿ: ಆಗಸ್ಟ್ 2019ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊರಗಿನ ಇಬ್ಬರು ಮಾತ್ರ ಆಸ್ತಿ ಖರೀದಿಸಿದ್ದಾರೆ: ಕೇಂದ್ರ ಗೃಹ ಸಚಿವಾಲಯ
ಜೀವರಕ್ಷಕ ವ್ಯವಸ್ಥೆಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರ ಕ್ರಿಸ್ ಕೈರ್ನ್ಸ್