ನವದೆಹಲಿ: ಮಹಿಳೆಯರು ಕೂಡ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ಡಿಎ) ಪರೀಕ್ಷೆ ಬರೆಯಲು ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ (Supreme Court) ಮಹತ್ವದ ಆದೇಶ ನೀಡಿದೆ. ಭಾರತದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ (National Defence Academy) ಸೇರಲು ಮಹಿಳೆಯರಿಗೆ ಕೂಡ ಅವಕಾಶ ಕಲ್ಪಿಸಬೇಕು. ಕೇಂದ್ರ ಸರ್ಕಾರ ತನ್ನ ಪೂರ್ವಗ್ರಹ ಮನಸ್ಥಿತಿಯಿಂದ ಹೊರಗೆ ಬರಬೇಕು ಎಂದು ನ್ಯಾಯಾಲಯ ಘೋಷಿಸಿದೆ. ಇದೇ ಸೆಪ್ಟೆಂಬರ್ 5ರಂದು ಎನ್ಡಿಎ (NDA) ಪರೀಕ್ಷೆ ನಡೆಯಲಿದೆ. ಈ ವರ್ಷದಿಂದಲೇ ಈ ಆದೇಶ ಜಾರಿಯಾಗಲಿದೆ.
ಇದುವರೆಗೂ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಲು ಯುವತಿಯರಿಗೆ ಅವಕಾಶ ನೀಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಮಾನತೆಯ ದೃಷ್ಟಿಯಿಂದ ಈ ಆದೇಶ ಬಹಳ ಮಹತ್ವದ್ದಾಗಿದೆ. ಸೆಪ್ಟೆಂಬರ್ 5ರಂದು ನಡೆಯುವ ಪರೀಕ್ಷೆಯ ನಂತರ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಅಂತಿಮ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆಯ ಬಳಿಕ ನಿರ್ಧಾರವಾಗಲಿದೆ.
ಇದೇ ವೇಳೆ ರಕ್ಷಣಾ ಅಕಾಡೆಮಿಯಲ್ಲಿ ಮಹಿಳೆಯರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದಿರುವ ಭಾರತೀಯ ಸೇನೆಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಇದು ಸೇನೆಯ ಲಿಂಗ ತಾರತಮ್ಯವನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ. ತಮಗೂ ರಕ್ಷಣಾ ಅಕಾಡೆಮಿಯ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮಹಿಳೆಯರು ಸರ್ಕಾರವನ್ನು ಒತ್ತಾಯಿಸಿದ್ದರು. ಈ ಬಗ್ಗೆ ಕೇಂದ್ರ ಸರ್ಕಾರ ಯಾವ ನಿರ್ಧಾರವನ್ನೂ ತೆಗೆದುಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ಯುವತಿಯರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಇಂದು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಮಹಿಳೆಯರಿಗೂ ರಕ್ಷಣಾ ಅಕಾಡೆಮಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮಧ್ಯಂತರ ಆದೇಶ ನೀಡಿದೆ.
Supreme Court allows women to take NDA exam scheduled for Sept 5
Read @ANI Story | https://t.co/Nd7Lsa2sZ4#NDA pic.twitter.com/X71EQYNukO
— ANI Digital (@ani_digital) August 18, 2021
ಮಹಾರಾಷ್ಟ್ರದ ಪುಣೆ ಬಳಿ ಇರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ದೇಶದಲ್ಲಿ ಮಿಲಿಟರಿ ಅಧಿಕಾರಿಗಳಿಗೆ ತರಬೇತಿ ನೀಡುವ ಪ್ರಮುಖ ಸಂಸ್ಥೆಯಾಗಿದೆ. ಭಾರತೀಯ ಸೇನೆ. ನೌಕಾಪಡೆ, ವಾಯುಪಡೆಗೆ ಸೇರಲು ಬಯಸುವವರಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಇಲ್ಲಿ 3 ವರ್ಷಗಳ ಕಾಲ ತರಬೇತಿ ನೀಡಲಾಗುತ್ತದೆ. ಆದರೆ, ಇದುವರೆಗೂ ಇಲ್ಲಿ ತರಬೇತಿ ಪಡೆಯಲು ಮಹಿಳೆಯರು ಪರೀಕ್ಷೆ ಬರೆಯಲು ಅನುಮತಿ ಇರಲಿಲ್ಲ. ಈ ಪ್ರಕರಣದ ಕುರಿತು ಸೆ. 8ರಂದು ಅಂತಿಮ ವಿಚಾರಣೆ ನಡೆಯಲಿದೆ.
ಇತ್ತೀಚೆಗಷ್ಟೆ ಖಾಯಂ ಸೇವಾ ಆಯೋಗದಲ್ಲಿ ಮಹಿಳೆಯರನ್ನು ಸೇರಿಸುವ ಬಗ್ಗೆ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಅದರ ಬೆನ್ನಲ್ಲೇ ರಕ್ಷಣಾ ಅಕಾಡೆಮಿಯಲ್ಲಿ ಮಹಿಳೆಯರು ಪರೀಕ್ಷೆ ಬರೆಯಬಹುದು ಎಂಬ ಆದೇಶ ನೀಡುವ ಮೂಲಕ ಮತ್ತೊಂದು ಮಹತ್ವದ ಆದೇಶ ಪ್ರಕಟಿಸಿದೆ. ಸೆಪ್ಟೆಂಬರ 5ರಂದು ನಡೆಯುವ ಈ ವರ್ಷದ ಪರೀಕ್ಷೆಯಿಂದಲೇ ಈ ಆದೇಶ ಜಾರಿಗೆ ಬರಲಿದೆ.
Bravo! A landmark decision taken by the Supreme Court to allow women to appear for NDA exam scheduled for September 5th.
I thank the apex court for this historic decision. This will definitely help our girls to get equal rights in the military.
Congratulations to all!
— Sanjiv Bajaj (@bajajsanjiv) August 18, 2021
ಈ ಪ್ರಕರಣದ ವಿಚಾರಣೆ ವೇಳೆ ಭಾರತೀಯ ಸೇನೆಯು ಮಹಿಳೆಯರನ್ನು ಎನ್ಡಿಎ ಪರೀಕ್ಷೆ ಬರೆಯಲು ಅನುಮತಿ ನೀಡದಿರುವುದು ನೀತಿ ನಿರ್ಧಾರ ಎಂದು ಹೇಳಿತ್ತು. ಇದಕ್ಕೆಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿರುವ ಸುಪ್ರೀಂ ಕೋರ್ಟ್ ಇದು ಲಿಂಗ ತಾರತಮ್ಯದ ನಿರ್ಧಾರ. ಸಮಾನತೆಯ ದೃಷ್ಟಿಯಿಂದ ಮಹಿಳೆಯರಿಗೂ ರಕ್ಷಣಾ ಅಕಾಡೆಮಿ ಸೇರಲು ಅವಕಾಶ ನೀಡಬೇಕು. ಮೊದಲು ನಿಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಿ ಎಂದು ಅಸಮಾಧಾನ ಹೊರಹಾಕಿದೆ.
ಇದನ್ನೂ ಓದಿ: ದೀರ್ಘಾವಧಿಯಲ್ಲಿ ಆನ್‌ಲೈನ್ ತರಗತಿಗಳು ಸುಗಮವಾಗಲ್ಲ : ಶಾಲೆ ಮತ್ತೆ ತೆರೆಯಬೇಕೆಂದು ಸುಪ್ರೀಂಕೋರ್ಟ್ ಮೊರೆ ಹೋದ ವಿದ್ಯಾರ್ಥಿ
(Women Can Take NDA Exam Supreme Court Landmark Order and slams army for Gender discrimination)
Published On - 2:50 pm, Wed, 18 August 21