Pegasus row ಪೆಗಾಸಸ್ ಬೇಹುಗಾರಿಕೆ ಆರೋಪ ನಿರಾಕರಿಸಿದ ಕೇಂದ್ರ ಸರ್ಕಾರ, ತನಿಖೆಗೆ ತಜ್ಞರ ಸಮಿತಿ ನೇಮಿಸಲು ನಿರ್ಧಾರ

Pegasus row ಪೆಗಾಸಸ್ ಬೇಹುಗಾರಿಕೆ ಆರೋಪ ನಿರಾಕರಿಸಿದ ಕೇಂದ್ರ ಸರ್ಕಾರ, ತನಿಖೆಗೆ ತಜ್ಞರ ಸಮಿತಿ ನೇಮಿಸಲು ನಿರ್ಧಾರ
ಸುಪ್ರೀಂಕೋರ್ಟ್

Supreme Court: ಪೆಗಾಸಸ್ ಸ್ಪೈವೇರ್ ಬಳಕೆಯ ಮೂಲಕ ಕಣ್ಗಾವಲಿನ ಆರೋಪದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

TV9kannada Web Team

| Edited By: Rashmi Kallakatta

Aug 16, 2021 | 2:29 PM

ದೆಹಲಿ: ಪ್ರತಿಪಕ್ಷದ ನಾಯಕರು, ಪತ್ರಕರ್ತರು ಮತ್ತು ಇತರರನ್ನು ಗುರಿಯಾಗಿಸಲು ಇಸ್ರೇಲಿ ಕಂಪನಿ. ಪೆಗಾಸಸ್ ಸ್ಪೈವೇರ್ ಅನ್ನು ಬಳಸಲಾಗಿದೆ ಎಂಬ ಇತ್ತೀಚಿನ ವರದಿಗಳಿಗೆ ಸಂಬಂಧಿಸಿದ ಎಲ್ಲಾ ಆರೋಪಗಳನ್ನು ಕೇಂದ್ರವು ನಿರಾಕರಿಸಿದೆ. ಅದೇ ವೇಳೆ ಈ ಆರೋಪಗಳ ಬಗ್ಗೆ ತಜ್ಞರ ಸಮಿತಿ ತನಿಖೆ ನಡೆಸಲಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. “ಪಟ್ಟಭದ್ರ ಹಿತಾಸಕ್ತಿಗಳಿಂದ ಹರಡಿರುವ ಯಾವುದೇ ತಪ್ಪು ನಿರೂಪಣೆಯನ್ನು ಹೋಗಲಾಡಿಸಲು ಮತ್ತು ಪ್ರಸ್ತಾಪಿಸಿದ ಸಮಸ್ಯೆಗಳನ್ನು ಪರಿಶೀಲಿಸುವುದ್ಕಕಾಗಿ ನಾವು ತಜ್ಞರ ಸಮಿತಿಯನ್ನು ರಚಿಸುತ್ತೇವೆ. ಅದು ಸಮಸ್ಯೆಯ ಎಲ್ಲಾ ಅಂಶಗಳನ್ನು ಪರಿಶೀಲಿಸಲಿದೆ ಎಂದು ಕೇಂದ್ರ ಹೇಳಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸಲ್ಲಿಸಿದ ಎರಡು ಪುಟಗಳ ಅಫಿಡವಿಟ್ ಪ್ರಕಾರ ಕೇಂದ್ರ ಸರ್ಕಾರವು ಎಲ್ಲ ಆರೋಪಗಳನ್ನು ನಿರಾಕರಿಸುತ್ತದೆ. ಇದು ಊಹೆಗಳು, ಇತರ ಆಧಾರರಹಿತ ಮಾಧ್ಯಮ ವರದಿಗಳು, ಅಪೂರ್ಣ ಅಥವಾ ದೃಢೀಕರಿಸದ ವಿಷಯಗಳ ಮೇಲೆ ಆಧಾರಿತವಾಗಿದೆ ಎಂದು ಹೇಳಿದೆ.

ಪೆಗಾಸಸ್ ಸ್ಪೈವೇರ್ ಬಳಕೆಯ ಮೂಲಕ ಕಣ್ಗಾವಲಿನ ಆರೋಪದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಹಿಂದೆ, ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಈ ಪ್ರಕರಣವನ್ನು ಆಲಿಸುವಾಗ, ಆರೋಪಗಳನ್ನು “ಗಂಭೀರ” ಎಂದು ವಿವರಿಸಿದ್ದರು. ಆದರೆ ಫೋನ್ ಹ್ಯಾಕ್ ಮಾಡಲಾಗಿದೆ ಎಂಬುದಕ್ಕೆ ಪುರಾವೆಗಳಿದ್ದಲ್ಲಿ ಇಲ್ಲಿಯವರೆಗೆ ಏಕೆ ಎಫ್ಐಆರ್ ದಾಖಲಿಸಿಲ್ಲ ಎಂದು ಕೇಳಿದ್ದರು.

“ಪ್ರಾಥಮಿಕ ಸಾಕ್ಷ್ಯಗಳಿವೆ ಮತ್ತು ವರದಿಗಳಲ್ಲಿ ವಿಶ್ವಾಸಾರ್ಹತೆ ಇದೆ ಎಂದು ನಿಮಗೆಲ್ಲರಿಗೂ ತಿಳಿದಿದೆ, ಅದರ ಆಧಾರದ ಮೇಲೆ ನಾವು ವಿಚಾರಣೆಗೆ ಆದೇಶಿಸಬಹುದು ಇತ್ಯಾದಿ ಯಾವುದೇ ಪ್ರಯತ್ನ ಮಾಡಲಾಗಿದೆಯೇ ಎಂದು ನನಗೆ ಗೊತ್ತಿಲ್ಲ. ರಿಟ್ ಅರ್ಜಿಗಳನ್ನು ಸಲ್ಲಿಸಿದ ವ್ಯಕ್ತಿಗಳು ಸಂಪನ್ಮೂಲಗಳನ್ನು ಹೊಂದಿರುವ ಜ್ಞಾನವುಳ್ಳ ವ್ಯಕ್ತಿಗಳಾಗಿರುತ್ತಾರೆ. ಅವರು ಹೆಚ್ಚಿನ ಮಾಹಿತಿಯನ್ನು ತರಲು ಹೆಚ್ಚಿನ ಪ್ರಯತ್ನವನ್ನು ಮಾಡಿರಬೇಕು.. ಮನವಿ ಸಲ್ಲಿಸಿದ ಅರ್ಜಿದಾರರಲ್ಲಿ ಕೆಲವರು ಪರಿಣಾಮ ಬೀರುವುದಿಲ್ಲ ಮತ್ತು ಕೆಲವರು ತಮ್ಮ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ಕ್ರಿಮಿನಲ್ ದೂರು ದಾಖಲಿಸಲು ಪ್ರಯತ್ನಿಸಿಲ್ಲ, ”ಎಂದು ಸಿಜೆಐ ಹೇಳಿದರು.

ಅಂದಹಾಗೆ ಏನಿದು ಸ್ಪೈವೇರ್? ಅವುಗಳನ್ನು ಯಾರು ಬಳಸುತ್ತಾರೆ? ಸ್ಪೈವೇರ್ ಎನ್ನುವುದು ದುರುದ್ದೇಶಪೂರಿತ ಸಾಫ್ಟ್‌ವೇರ್ ಅಥವಾ ಮಾಲ್ ವೇರ್ (ಕು-ತಂತ್ರಾಂಶ. ಅದು ಬೇರೊಬ್ಬರ ಕಂಪ್ಯೂಟರ್, ಫೋನ್ ಅಥವಾ ಇತರ ಡಿವೈಸ್ ನಿಂದ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತದೆ. ಸ್ಪೈವೇರ್ ಕಳಪೆ ರಕ್ಷಣೆಯ ಸಾಧನಗಳನ್ನು ಹ್ಯಾಕ್ ಮಾಡುತ್ತದೆ. ಆದರೆ ಅದರಲ್ಲಿ ಕೆಲವು ಅತ್ಯಾಧುನಿಕವಾಗಿದ್ದು ಸಾಫ್ಟ್‌ವೇರ್ ನ್ಯೂನತೆಗಳನ್ನು ಅವಲಂಬಿಸಿ, ಸುಧಾರಿತ ಭದ್ರತಾ ಕ್ರಮಗಳನ್ನು ಹೊಂದಿರುವ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳತ್ತ ಯಾರಾದರೂ ಇಣುಕು ಹಾಕಲು ಅನುವು ಮಾಡಿಕೊಡುತ್ತದೆ. ಅತ್ಯಂತ ಅತ್ಯಾಧುನಿಕ ಸ್ಪೈವೇರ್ ಅನ್ನು ಸಾಮಾನ್ಯವಾಗಿ ಕಾನೂನು ಜಾರಿ ಅಥವಾ ಗುಪ್ತಚರ ಸಂಸ್ಥೆಗಳು ನಿಯೋಜಿಸುತ್ತವೆ. ಸಂಯುಕ್ತ ಅಮೆರಿಕ ಸೇರಿದಂತೆ ರಾಷ್ಟ್ರಗಳಿಗೆ ಆ ಸಾಧನಗಳನ್ನು ಒದಗಿಸಲು ಖಾಸಗಿ ಮಾರುಕಟ್ಟೆ ಇದೆ. ಭಯೋತ್ಪಾದಕ ಗುಂಪುಗಳು ಮತ್ತು ಅತ್ಯಾಧುನಿಕ ಕ್ರಿಮಿನಲ್ ಗ್ಯಾಂಗ್‌ಗಳು ಸಹ ಸ್ಪೈವೇರ್ ಪ್ರವೇಶವನ್ನು ಹೊಂದಿವೆ ಎಂದು ಬಹಳ ಹಿಂದಿನಿಂದಲೂ ಶಂಕಿಸಲಾಗಿದೆ. ಮತ್ತೊಂದು ಇಸ್ರೇಲಿ ಕಂಪನಿಯಾದ ಕ್ಯಾಂಡಿರು ಕಂಪನಿಯ ಸ್ಪೈವೇರ್ ಅನ್ನು ಕಾರ್ಯಕರ್ತರು, ರಾಜಕಾರಣಿಗಳು ಮತ್ತು ಇತರ ಕಂಪ್ಯೂಟರ್ ಮತ್ತು ಫೋನ್‌ಗಳಿಗೆ ಫೋನಿ ವೆಬ್‌ಸೈಟ್‌ಗಳ ಮೂಲಕ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಅಥವಾ ಆರೋಗ್ಯ ಗುಂಪುಗಳ ಪುಟಗಳಾಗಿ ಮಾಸ್ಕ್ವೆರೇಟಿಂಗ್ (ನಕಲಿ ಪುಟ) ಮಾಡಲು ಬಳಸಲಾಗುತ್ತದೆ ಎಂದು ಮೈಕ್ರೋಸಾಫ್ಟ್ ಮತ್ತು ಟೊರೊಂಟೊ ವಿಶ್ವವಿದ್ಯಾಲಯದ ಸಿಟಿಜನ್ ಲ್ಯಾಬ್‌ನ ಸೈಬರ್‌ ಸೆಕ್ಯುರಿಟಿ ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ:  ಮಾಧ್ಯಮ ವರದಿಗಳು ಸರಿಯಾಗಿದ್ದರೆ ಆರೋಪಗಳು ಗಂಭೀರ: ಪೆಗಾಸಸ್ ಕುರಿತು ಸುಪ್ರೀಂಕೋರ್ಟ್ ಹೇಳಿದ 10 ಸಂಗತಿಗಳು

ಇದನ್ನೂ ಓದಿ:  ಇಸ್ರೇಲ್‌ನ ಎನ್​ಎಸ್​ಒ ಗ್ರೂಪ್ ಕಂಪನಿ ಜತೆ ವ್ಯವಹಾರ ನಡೆಸಿಲ್ಲ: ರಾಜ್ಯಸಭೆಯಲ್ಲಿ ಕೇಂದ್ರದ ರಕ್ಷಣಾ ಇಲಾಖೆಯಿಂದ ಉತ್ತರ

(Centre Deny all allegations about Israeli Pegasus spyware experts will be investigating all such claims)

Follow us on

Most Read Stories

Click on your DTH Provider to Add TV9 Kannada