ಕೇರಳದಲ್ಲಿ 11 ನೇ ತರಗತಿಯ ಪರೀಕ್ಷೆಗೆ ತಡೆ, ಕೊವಿಡ್ ಪರಿಸ್ಥಿತಿ ಆತಂಕಕಾರಿಯಾಗಿದೆ ಎಂದ ಸುಪ್ರೀಂಕೋರ್ಟ್

| Updated By: ರಶ್ಮಿ ಕಲ್ಲಕಟ್ಟ

Updated on: Sep 03, 2021 | 7:03 PM

ಕೇರಳದಲ್ಲಿ ಆತಂಕಕಾರಿ ಸನ್ನಿವೇಶವಿದೆ. ಇದು ದೇಶದ ಶೇ. 70 ಕ್ಕಿಂತಲೂ ಹೆಚ್ಚಿನ ಪ್ರಕರಣಗಳನ್ನು ಹೊಂದಿದೆ. ಅಂದರೆ ಸುಮಾರು 35,000 ದೈನಂದಿನ ಪ್ರಕರಣಗಳು. ಎಳೆ ವಯಸ್ಸಿನ ಮಕ್ಕಳು ಈ ಅಪಾಯಕ್ಕೆ ಒಳಗಾಗಬಾರ

ಕೇರಳದಲ್ಲಿ 11 ನೇ ತರಗತಿಯ ಪರೀಕ್ಷೆಗೆ ತಡೆ, ಕೊವಿಡ್ ಪರಿಸ್ಥಿತಿ ಆತಂಕಕಾರಿಯಾಗಿದೆ ಎಂದ ಸುಪ್ರೀಂಕೋರ್ಟ್
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕೇರಳದಲ್ಲಿ ಕೊವಿಡ್ -19 “ಆತಂಕಕಾರಿ” ಪರಿಸ್ಥಿತಿಯಿಂದ ಆತಂಕಗೊಂಡ ಸುಪ್ರೀಂ ಕೋರ್ಟ್ ಶುಕ್ರವಾರ 11 ನೇ ತರಗತಿಯ ಪರೀಕ್ಷೆಗಳನ್ನು ನಡೆಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿದೆ. ಪರೀಕ್ಷೆಗಳನ್ನು ಒಂದು ವಾರದವರೆಗೆ ಸ್ಥಗಿತಗೊಳಿಸಲು ಆದೇಶಿದ ನ್ಯಾಯಾಲಯವು ಆದೇಶಿಸಿತು “ಎಳೆ ವಯಸ್ಸಿನ ಮಕ್ಕಳು ಅಪಾಯಕ್ಕೆ ದೂಡಬಾರದು ಎಂದಿದೆ.

“ಕೇರಳದಲ್ಲಿ ಆತಂಕಕಾರಿ ಸನ್ನಿವೇಶವಿದೆ. ಇದು ದೇಶದ ಶೇ. 70 ಕ್ಕಿಂತಲೂ ಹೆಚ್ಚಿನ ಪ್ರಕರಣಗಳನ್ನು ಹೊಂದಿದೆ. ಅಂದರೆ ಸುಮಾರು 35,000 ದೈನಂದಿನ ಪ್ರಕರಣಗಳು. ಎಳೆ ವಯಸ್ಸಿನ ಮಕ್ಕಳು ಈ ಅಪಾಯಕ್ಕೆ ಒಳಗಾಗಬಾರದು ಎಂದು ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್, ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಮತ್ತು ನ್ಯಾಯಮೂರ್ತಿ ಸಿಟಿ ರವಿಕುಮಾರ್ ಅವರ ಪೀಠ ಹೇಳಿದೆ.

ನ್ಯಾಯಾಧೀಶ ರಾಯ್ ಅವರು ” ಕೇರಳ ಅತ್ಯುತ್ತಮ ವೈದ್ಯಕೀಯ ಮೂಲಸೌಕರ್ಯಗಳನ್ನು ಹೊಂದಿದ್ದಾರೆ. ಆದರೆ ಕೊವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ” ಎಂದು ಸಮಸ್ಯೆಯ ಗಂಭೀರತೆಯನ್ನು ಒತ್ತಿ ಹೇಳಿದರು.
“ನಾನು ಕೇರಳದ ಮುಖ್ಯ ನ್ಯಾಯಮೂರ್ತಿಯಾಗಿದ್ದೆ. ಕೇರಳವು ದೇಶದ ಅತ್ಯುತ್ತಮ ವೈದ್ಯಕೀಯ ಮೂಲಸೌಕರ್ಯವನ್ನು ಹೊಂದಿದೆ ಎಂದು ನಾನು ಹೇಳಬಲ್ಲೆ. ಅದರ ಹೊರತಾಗಿಯೂ, ಕೇರಳವು ಕೊವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿದರು.

ಪರೀಕ್ಷೆಗಳನ್ನು ಮುಂದುವರಿಸಲು ನಿರ್ಧರಿಸಿದಾಗ ಕೇರಳ ಸರ್ಕಾರವು ದಿನನಿತ್ಯದ ಸಂಖ್ಯೆಯಲ್ಲಿ ಭಾರೀ ಹೆಚ್ಚಳವನ್ನು ಪರಿಗಣಿಸಿತ್ತೇ ಎಂದು ನ್ಯಾಯಾಲಯವು ಅಚ್ಚರಿ ವ್ಯಕ್ತಪಡಿಸಿತು.  ಆಫ್‌ಲೈನ್ 11 ನೇ ತರಗತಿಯ ಪರೀಕ್ಷೆಗಳು ಸೆಪ್ಟೆಂಬರ್ 6 ರಿಂದ ಆರಂಭವಾಗಬೇಕಿತ್ತು.

ಆಫ್‌ಲೈನ್ ಪರೀಕ್ಷೆಗಳನ್ನು ನಡೆಸುವ ರಾಜ್ಯ ಸರ್ಕಾರದ ಪ್ರಸ್ತಾವನೆಯಲ್ಲಿ ಹಸ್ತಕ್ಷೇಪ ಮಾಡಬಾರದೆಂಬ ಕೇರಳ ಹೈಕೋರ್ಟ್‌ನ ನಿರ್ಧಾರವನ್ನು ಪ್ರಶ್ನಿಸಿದ ಅರ್ಜಿಗೆ ನ್ಯಾಯಾಲಯವು ಈ ರೀತಿ ಪ್ರತಿಕ್ರಿಯಿಸಿತು.
ಕಳೆದ ಕೆಲವು ದಿನಗಳಿಂದ ಕೇರಳವು ದಿನಕ್ಕೆ 30,000 ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ವರದಿ ಮಾಡುತ್ತಿದೆ.

ಈ ವಾರದ ಆರಂಭದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಈ ಹೆಚ್ಚುತ್ತಿರುವ ಸಂಖ್ಯೆಗಳನ್ನು ತಡೆಯುವ ಪ್ರಯತ್ನಗಳನ್ನು ಹೆಚ್ಚಿಸಬೇಕೆಂದು ರಾಜ್ಯಕ್ಕೆ ಎಚ್ಚರಿಕೆ ನೀಡಿತು ಮತ್ತು “ಸ್ಮಾರ್ಟ್ ಮತ್ತು ಕಾರ್ಯತಂತ್ರದ ಲಾಕ್‌ಡೌನ್”ಗೆ ಕರೆ ನೀಡಿತು.

ಕೇರಳವು ವೈರಸ್ ನಿಯಂತ್ರಿಸುವ ಸಲಹೆಯನ್ನು ಅನುಸರಿಸಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ ಮತ್ತು ಇದು ಈಗ ನೆರೆಯ ರಾಜ್ಯಗಳಿಗೆ ಹರಡಬಹುದು ಎಂದು ಎಚ್ಚರಿಸಿದೆ. ಲಸಿಕೆಯ ಸ್ಥಿತಿಯ ಹೊರತಾಗಿಯೂ, ಕೇರಳದಿಂದ ಬರುವ ಪ್ರಯಾಣಿಕರು ಋಣಾತ್ಮಕ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಹೊಂದಿರಬೇಕು ಎಂದು ಕರ್ನಾಟಕ ಹೇಳಿದೆ.

ಕಳೆದ ವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮ್ಮ ಸರ್ಕಾರ ಮತ್ತು ಅವರು ಕೊವಿಡ್ ಸಾಂಕ್ರಾಮಿಕ ರೋಗವನ್ನು “ತಪ್ಪಾಗಿ ನಿರ್ವಹಿಸಿದ್ದಾರೆ” ಎಂದು ವಿರೋಧ ಪಕ್ಷದ ಹೇಳಿಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಅವರು ರಾಜ್ಯದ ಕಡಿಮೆ (ರಾಷ್ಟ್ರೀಯ ಸರಾಸರಿಗಿಂತ) ಪ್ರಕರಣದ ಮರಣ ಪ್ರಮಾಣ ಮತ್ತು ಆಮ್ಲಜನಕ ಅಥವಾ ಆಸ್ಪತ್ರೆಯ ಹಾಸಿಗೆಗಳುಕೊರತೆಯಿದ ರಾಜ್ಯದಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದಿದ್ದಾರೆ.

ಕೇರಳವು ಕಳೆದ 24 ಗಂಟೆಗಳಲ್ಲಿ 29,322 ಹೊಸ ಕೊವಿಡ್ -19 ಪ್ರಕರಣಗಳು , 22,938 ಚೇತರಿಕೆ ಮತ್ತು 131 ಸಾವುಗಳನ್ನು ವರದಿ ಮಾಡಿದೆ. ಸಾವಿನ ಸಂಖ್ಯೆ 21,280 ಕ್ಕೆ ಏರಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯವರ ನಿವಾಸದ ಅಂಗಳದಲ್ಲಿ ಬೆಳೆಯಲಿದೆ ಕೇರಳದ ಬಾಲಕಿ ಉಡುಗೊರೆಯಾಗಿ ನೀಡಿದ ಪೇರಳೆ ಗಿಡ

(Worried by an alarming COVID-19 situation in Kerala Supreme Court on Friday stayed Class 11 Exams)