ಅಪಾಯದ ಗುರುತು ಮೀರಿ ಉಕ್ಕಿ ಹರಿದ ಯಮುನಾ ನದಿ, ದೆಹಲಿಯಲ್ಲಿ ‘ಪ್ರವಾಹ’ ಎಚ್ಚರಿಕೆ

Yamuna River: ಸಂಬಂಧಪಟ್ಟ ಎಲ್ಲ ಇಲಾಖೆಗಳನ್ನು ಎಚ್ಚರಿಸಲಾಗಿದೆ. ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆಯು 13 ದೋಣಿಗಳನ್ನು ವಿವಿಧ ಪ್ರದೇಶಗಳಲ್ಲಿ ನಿಯೋಜಿಸಿದ್ದು, ಇತರ 21 ದೋಣಿಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಿದೆ ಎಂದು ನೀರಾವರಿ ಮತ್ತು ಪ್ರವಾಹ ನಿಯಂತ್ರಣ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.

ಅಪಾಯದ ಗುರುತು ಮೀರಿ ಉಕ್ಕಿ ಹರಿದ ಯಮುನಾ ನದಿ, ದೆಹಲಿಯಲ್ಲಿ 'ಪ್ರವಾಹ' ಎಚ್ಚರಿಕೆ
ಯಮುನಾ ನದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 30, 2021 | 2:49 PM

ನವದೆಹಲಿ: ದೆಹಲಿ ಆಡಳಿತವು ಶುಕ್ರವಾರ ಪ್ರವಾಹ ಎಚ್ಚರಿಕೆಯನ್ನು ನೀಡಿದ್ದು ಮತ್ತು ಯಮುನಾ ಪ್ರವಾಹ ಬಯಲಿನಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು ಚುರುಕುಗೊಳಿಸಿದೆ. ಯಮುನಾ ನದಿ 205.33 ಮೀಟರ್ ಅಪಾಯದ ಗುರುತು ಮೀರಿದ ಕಾರಣ ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಹಳೆಯ ರೈಲ್ವೆ ಸೇತುವೆಯಲ್ಲಿ 205.34 ಮೀಟರ್ ಎತ್ತರದಲ್ಲಿ ನೀರಿನ ಮಟ್ಟ ದಾಖಲಾಗಿದೆ. ಇದು ಬೆಳಿಗ್ಗೆ 8:30 ಕ್ಕೆ 205.22 ಮೀಟರ್, ಬೆಳಿಗ್ಗೆ 6 ಗಂಟೆಗೆ 205.10 ಮೀಟರ್ ಮತ್ತು ಬೆಳಿಗ್ಗೆ 7 ಗಂಟೆಗೆ 205.17 ಎಂದು ಅಧಿಕಾರಿಯೊಬ್ಬರು ಹೇಳಿದರು. ಇದು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಸಂಬಂಧಪಟ್ಟ ಎಲ್ಲ ಇಲಾಖೆಗಳನ್ನು ಎಚ್ಚರಿಸಲಾಗಿದೆ. ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆಯು 13 ದೋಣಿಗಳನ್ನು ವಿವಿಧ ಪ್ರದೇಶಗಳಲ್ಲಿ ನಿಯೋಜಿಸಿದ್ದು, ಇತರ 21 ದೋಣಿಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಿದೆ ಎಂದು ನೀರಾವರಿ ಮತ್ತು ಪ್ರವಾಹ ನಿಯಂತ್ರಣ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.

ಹರ್ಯಾಣ ಹತ್ನಿಕುಂಡ್ ಬ್ಯಾರೇಜ್‌ನಿಂದ ನದಿಗೆ ಹೆಚ್ಚಿನ ನೀರನ್ನು ಹೊರಹಾಕುವುದರೊಂದಿಗೆ, ದೆಹಲಿ ಪೊಲೀಸರು ಮತ್ತು ಪೂರ್ವ ದೆಹಲಿ ಜಿಲ್ಲಾಡಳಿತವು ರಾಜಧಾನಿಯ ಯಮುನಾ ಪ್ರವಾಹ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಿದೆ.

ಈ ಜನರನ್ನು ಯಮುನಾ ಪುಷ್ಟಾ ಪ್ರದೇಶದ ದೆಹಲಿ ಸರ್ಕಾರದ ಆಶ್ರಯ ಮನೆಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಯಮುನಾ 204.50 ಮೀಟರ್‌ನ “ಎಚ್ಚರಿಕೆ ಗುರುತು” ದಾಟಿದಾಗ ಪ್ರವಾಹ ಎಚ್ಚರಿಕೆಯನ್ನು ಘೋಷಿಸಲಾಗುತ್ತದೆ. ಪರಿಸ್ಥಿತಿಯನ್ನು ದಿನ ರಾತ್ರಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿ ಮತ್ತು ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿ ಮಳೆಯಿಂದಾಗಿ ನದಿ ನೀರಿನ ಮಟ್ಟ ಏರಿಕೆ ಆಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು, ವಾಯುವ್ಯ ಭಾರತದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಇದು ಮತ್ತಷ್ಟು ಹೆಚ್ಚಾಗಬಹುದು.

ದೆಹಲಿ-ಎನ್‌ಸಿಆರ್‌ನಲ್ಲಿ ಮೂರನೇ ದಿನವಾದ ಶುಕ್ರವಾರವೂ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ “ಆರೆಂಜ್ ಅಲರ್ಟ್” ನೀಡಿದೆ.

ದೆಹಲಿ ಪ್ರವಾಹ ನಿಯಂತ್ರಣ ಕೊಠಡಿಯ ಪ್ರಕಾರ, ಹತ್ನಿಕುಂಡ್ ಬ್ಯಾರೇಜ್‌ನಲ್ಲಿ ಮಂಗಳವಾರ ಮಧ್ಯಾಹ್ನ 1.60 ಲಕ್ಷ ಕ್ಯೂಸೆಕ್‌ ಹೊರ ಹರಿವು ಪ್ರಮಾಣವು ಗರಿಷ್ಠ ಮಟ್ಟ ತಲುಪಿದ್ದು, ಈ ವರ್ಷ ಇದುವರೆಗಿನ ಗರಿಷ್ಠ ಮಟ್ಟವಾಗಿದೆ.

ಬ್ಯಾರೇಜ್‌ನಿಂದ ಹೊರಹಾಕುವ ನೀರು ಸಾಮಾನ್ಯವಾಗಿ ದೆಹಲಿ ತಲುಪಲು ಎರಡು-ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ.

ಹರ್ಯಾಣದ ಯುಮಾನನಗರದ ಬ್ಯಾರೇಜ್‌ನಿಂದ 19,056 ಕ್ಯೂಸೆಕ್‌ಗಳಂತೆ ಬೆಳಿಗ್ಗೆ 8 ಗಂಟೆಗೆ ನೀರನ್ನು ಬಿಡುಗಡೆ ಮಾಡುತ್ತಿದೆ. ಗುರುವಾರ ರಾತ್ರಿ 8 ಗಂಟೆಗೆ ಹರಿವಿನ ಪ್ರಮಾಣ 25,839 ಕ್ಯುಸೆಕ್ ಆಗಿದೆ. ಒಂದು ಕ್ಯೂಸೆಕ್ ಅಂದರೆ ಪ್ರತಿ ಸೆಕೆಂಡಿಗೆ 28.32 ಲೀಟರ್‌.

2019 ರಲ್ಲಿ, ಆಗಸ್ಟ್ 18-19ರಂದು ಹರಿವಿನ ಪ್ರಮಾಣ 8.28 ಲಕ್ಷ ಕ್ಯೂಸೆಕ್‌ಗೆ ಏರಿತು.ಯಮುನಾದ ನೀರಿನ ಮಟ್ಟವು 206.60 ಮೀಟರ್ ಅಂಚುನ್ನು ಮುಟ್ಟಿದ್ದು, 205.33 ಮೀಟರ್ ಅಪಾಯದ ಗುರುತು ದಾಟಿದೆ. ತುಂಬಿ ಹರಿಯುವ ನದಿ ಅನೇಕ ತಗ್ಗು ಪ್ರದೇಶಗಳನ್ನು ಮುಳುಗಿಸಿದ ನಂತರ ದೆಹಲಿ ಸರ್ಕಾರವು ಸ್ಥಳಾಂತರಿಸುವ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸಬೇಕಾಯಿತು.

1978 ರಲ್ಲಿ, ನದಿಯು 207.49 ಮೀಟರ್‌ಗಳ ಸಾರ್ವಕಾಲಿಕ ದಾಖಲೆಯ ನೀರಿನ ಮಟ್ಟಕ್ಕೆ ಏರಿತ್ತು. 2013 ರಲ್ಲಿ ಅದು 207.32 ಮೀಟರ್‌ಗಳಿಗೆ ಏರಿತ್ತು.

ಇದನ್ನೂ ಓದಿ: Karnataka Breaking News LIVE: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರಯಾಣ, ಯಾರಿಗೆ ಸಿಗಲಿದೆ ಮಂತ್ರಿಗಿರಿ?

(Yamuna River Breaches danger mark of 205.33 meters  flood alert Issued by Delhi administration))

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ