ಹೌದು, ನಾವು ಗಾಂಧಿ-ನೆಹರೂ ಕುಟುಂಬದ ಗುಲಾಮರೇ; ವಿಧಾನಸಭೆಯಲ್ಲಿ ಹೆಮ್ಮೆಯಿಂದ ಹೇಳಿಕೊಂಡ ಕಾಂಗ್ರೆಸ್ ಶಾಸಕ
ಈ ದೇಶವನ್ನು ಕಟ್ಟಿದ್ದು ನೆಹರೂ-ಗಾಂಧಿ ಕುಟುಂಬ. ಹಾಗಾಗಿ ನಾವು ಅವರ ಗುಲಾಮರಾಗಿದ್ದೇವೆ ಮತ್ತು ಹಾಗೆಯೇ ಮುಂದುವರಿಯುತ್ತೇವೆ ಎಂದು ಸಂಯಮ್ ಲೋಧಾ ಹೇಳುತ್ತಿದ್ದಂತೆ ಬಿಜೆಪಿ ತೀವ್ರವಾಗಿ ಟೀಕಿಸಿದೆ.
‘ಹೌದು.. ನಾವು ನೆಹರು-ಗಾಂಧಿ ಕುಟುಂಬದ ಗುಲಾಮರೇ’ ಹೀಗೆಂದು ಹೆಮ್ಮೆಯಿಂದ ಹೇಳಿಕೊಂಡಿದ್ದು ರಾಜಸ್ಥಾನದ ಸಿರೋಹಿ ಶಾಸಕ ಸಂಯಮ್ ಲೋಧಾ(Sirohi MLA Sanyam Lodha) ರಾಜಸ್ಥಾನ ವಿಧಾನಸಭೆಯಲ್ಲಿ (Rajasthan Assembly) ಬಜೆಟ್ ಅಧಿವೇಶನವದ ವೇಳೆ ಮಾತನಾಡಿದ ಅವರು ಈ ಮಾತುಗಳನ್ನು ಆಡಿದ್ದಾರೆ. ಅಷ್ಟೇ ಅಲ್ಲ, ಕೊನೇ ಉಸಿರು ಇರುವ ತನಕವೂ ನಾವು ನೆಹರು-ಗಾಂಧಿ ಕುಟುಂಬದ ಗುಲಾಮರಾಗಿಯೇ ಉಳಿಯುತ್ತೇವೆ ಎಂದಿದ್ದಾರೆ. ಅಂದಹಾಗೇ, ಈ ಲೋಧಾ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಲಹೆಗಾರರೂ ಆಗಿದ್ದಾರೆ. ಹರಿದೇವ್ ಜೋಶ್ ವಿಶ್ವವಿದ್ಯಾನಿಲಯ ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ತಿದ್ದುಪಡಿ ಮಸೂದೆ ಸಂಬಂಧ ಮಾತನಾಡುವಾಗ ಹೀಗೆ ಹೇಳಿದ್ದಾರೆ.
ಈ ದೇಶವನ್ನು ಕಟ್ಟಿದ್ದು ನೆಹರೂ-ಗಾಂಧಿ ಕುಟುಂಬ. ಹಾಗಾಗಿ ನಾವು ಅವರ ಗುಲಾಮರಾಗಿದ್ದೇವೆ ಮತ್ತು ಹಾಗೆಯೇ ಮುಂದುವರಿಯುತ್ತೇವೆ ಎಂದು ಸಂಯಮ್ ಲೋಧಾ ಹೇಳುತ್ತಿದ್ದಂತೆ ಬಿಜೆಪಿ ತೀವ್ರವಾಗಿ ಟೀಕಿಸಿದೆ. ರಾಜಸ್ಥಾನ ವಿಧಾನಸಭೆ ಪ್ರತಿಪಕ್ಷ ಉಪನಾಯಕ ರಾಜೇಂದ್ರ ರಾಥೋಡ್, ನಿಮ್ಮ ಗುಲಾಮಗಿರಿಗೆ ಅಭಿನಂದನೆಗಳು. ಈ ಗುಲಾಮರು ಸಮಾಜಕ್ಕೆ ಏನು ಸಂದೇಶ ಕೊಡಲು ಸಾಧ್ಯ. ಯಾರಿಗೇ ಗುಲಾಮನಾದವನು ಅವನ ಸ್ವಂತ ಇಚ್ಛೆಯಿಂದ, ಮನಸಿನಿಂದ, ಬುದ್ಧಿಯಿಂದ ಏನೂ ಮಾತನಾಡುವುದಿಲ್ಲ. ಅವರೇ ಒಪ್ಪಿಕೊಂಡಿದ್ದಾರೆ ತಾವು ಗಾಂಧಿ-ನೆಹರೂ ಕುಟುಂಬದ ಗುಲಾಮರೆಂದು ಎಂದು ವಾಗ್ದಾಳಿ ನಡೆಸಿದ್ದಾರೆ. ಬಳಿಕ ವಿಧಾನಸಭೆಯಲ್ಲಿ ಇದೇ ವಿಚಾರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ವಾಗ್ವಾದ ಜೋರಾಗಿತ್ತು. ಇಡೀ ಸದನ ಅವ್ಯವಸ್ಥೆಗೊಂಡಿತ್ತು. ಬಳಿಕ ವಿಧಾನಸಭೆ ಸ್ಪೀಕರ್ ಮಧ್ಯಪ್ರವೇಶ ಮಾಡಿ, ಎರಡೂ ಪಕ್ಷಗಳ ನಾಯಕರನ್ನು ಸಮಾಧಾನ ಮಾಡಿದರು.
“Yes we are slaves of Nehru-Gandhi family and we will remain their slaves till our last breath” : Rajasthan Congress MLA Sanyam Lodha pic.twitter.com/SrnTgduHdN
— Ashish (@aashishNRP) March 22, 2022
ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ನಟರಿಗೆ ಸಿಕ್ಕಿದೆ ಕೋಟಿ ರೂ. ಸಂಬಳ; ಅತಿ ಹೆಚ್ಚು ಸಂಭಾವನೆ ಪಡೆದಿದ್ದು ಯಾರು?
Published On - 9:35 am, Wed, 23 March 22