ಬಾಬಾ ರಾಮ್​ದೇವ್​ ವಿರುದ್ಧ ಕಾನೂನು ಕ್ರಮಕ್ಕೆ ಐಎಂಎ ಆಗ್ರಹ; ‘ಅವರು ವಾಟ್ಸ್​ಆ್ಯಪ್ ಮೆಸೇಜ್ ಓದುತ್ತಿದ್ದರು’ ಎಂದ ಪತಂಜಲಿ ಟ್ರಸ್ಟ್​

ಅಲೋಪಥಿಕ್​ ಎಂಬುದು ಒಂದು ಮೂರ್ಖತನದ ವಿಜ್ಞಾನ ಎಂದು ಬಾಬಾ ರಾಮ್​ದೇವ್​ ಅವರು ಹೇಳಿತ್ತಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿತ್ತು.

ಬಾಬಾ ರಾಮ್​ದೇವ್​ ವಿರುದ್ಧ ಕಾನೂನು ಕ್ರಮಕ್ಕೆ ಐಎಂಎ ಆಗ್ರಹ; ‘ಅವರು ವಾಟ್ಸ್​ಆ್ಯಪ್ ಮೆಸೇಜ್ ಓದುತ್ತಿದ್ದರು’ ಎಂದ ಪತಂಜಲಿ ಟ್ರಸ್ಟ್​
ಯೋಗ ಗುರು ಬಾಬಾ ರಾಮ್​ದೇವ್​
Follow us
Lakshmi Hegde
|

Updated on: May 22, 2021 | 9:24 PM

ದೆಹಲಿ: ಯೋಗಗುರು ಬಾಬಾ ರಾಮದೇವ್​ ಅವರು ಆಧುನಿಕ ವಿಜ್ಞಾನ, ಅಲೋಪಥಿ ಔಷಧದ ದ್ವೇಷಿಯಲ್ಲ. ಹಾಗೇ ಅದನ್ನು ಅಭ್ಯಾಸ ಮಾಡುವವರ ಬಗ್ಗೆಯೂ ಯಾವುದೇ ಕೆಟ್ಟ ಭಾವನೆ ಹೊಂದಿಲ್ಲ ಎಂದು ಪತಂಜಲಿ ಯೋಗ ಟ್ರಸ್ಟ್​ ಇಂದು ತಿಳಿಸಿದೆ. ಬಾಬಾ ರಾಮದೇವ್​ ಅವರು ಅಲೋಪಥಿ ಔಷಧಗಳ ಬಗ್ಗೆ ಅಶಿಕ್ಷಿತ ಹೇಳಿಕೆಗಳನ್ನು ನೀಡುತ್ತ, ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಆಧುನಿಕ ವೈಜ್ಞಾನಿಕ ಔಷಧಿಗಳಿಗೆ ಅಪಕೀರ್ತಿ ತರುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ರೀತ್ಯಾ ಪ್ರಕರಣ ದಾಖಲು ಮಾಡಬೇಕು ಎಂದು ಇಂದು ಭಾರತೀಯ ವೈದ್ಯಕೀಯ ಸಂಘ ಕೇಂದ್ರ ಆರೋಗ್ಯ ಇಲಾಖೆಯನ್ನು ಒತ್ತಾಯಿಸಿತ್ತು.

ಅಲೋಪಥಿಕ್​ ಎಂಬುದು ಒಂದು ಮೂರ್ಖತನದ ವಿಜ್ಞಾನ ಎಂದು ಬಾಬಾ ರಾಮ್​ದೇವ್​ ಅವರು ಹೇಳಿತ್ತಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಯೋಗಗುರುವಿನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಭಾರತೀಯ ವೈದ್ಯಕೀಯ ಸಂಘ, ಬಾಬಾ ರಾಮ್​ದೇವ್​ ವಿರುದ್ಧ ಅಲೋಪಥಿ ಎಪಿಡೆಮಿಕ್​ ಕಾಯ್ದೆಯಡಿ ಪ್ರಕರಣ ದಾಖಲು ಮಾಡಬೇಕು. ಅವರು ಹೀಗೆ ಅಶಿಕ್ಷಿತರಂತೆ ನೀಡುವ ಹೇಳಿಕೆಗಳು ದೇಶದ ಬಡವರು, ಸಾಕ್ಷರ ಜನರಿಗೆ ಅಪಾಯ ತಂದೊಡ್ಡಬಹುದು ಎಂದು ವೈದ್ಯಕೀಯ ಸಂಘ ಹೇಳಿತ್ತು.

ಇದೀಗ ಪತಂಜಲಿ ಯೋಗ ಟ್ರಸ್ಟ್​ ಐಎಂಎಯ ಈ ಆರೋಪಗಳನ್ನು ಅಲ್ಲಗಳೆದಿದೆ. ಸಾಂಕ್ರಾಮಿಕ ರೋಗದ ಸವಾಲು ಎದುರಾಗಿರುವ ಈ ಸಂದರ್ಭದಲ್ಲಿ ಹಗಲು-ರಾತ್ರಿ ಶ್ರಮಿಸುತ್ತಿರುವ ಅಲೋಪಥಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಬಗ್ಗೆ ಯೋಗ ಗುರು ಬಾಬಾ ರಾಮ್​ದೇವ್​ ಅವರಿಗೆ ಅಪಾರ ಗೌರವ ಇದೆ. ಅವರು ವಾಟ್ಸ್​ಆ್ಯಪ್​ನಲ್ಲಿ ಬಂದಿದ್ದ ಸಂದೇಶವೊಂದನ್ನು ಓದುತ್ತಿದ್ದರು. ಇದೆಲ್ಲ ಅವರ ಸ್ವಂತ ಹೇಳಿಕೆಗಳಲ್ಲ ಎಂದು ಹೇಳಿದೆ.

ವಿಡಿಯೋದಲ್ಲಿ ಏನಿತ್ತು? ಅಲೋಪಥಿ ವೈದ್ಯಕೀಯ ಮೂರ್ಖತನದ್ದು ಎಂದು ಹೇಳಿದ್ದ ಬಾಬಾ ರಾಮ್​ದೇವ್​, ಈ ಅಲೋಪಥಿಕ್​ ಔಷಧಿ ತೆಗೆದುಕೊಂಡೇ ಲಕ್ಷಾಂತರ ಜನರು ಮೃತಪಟ್ಟಿದ್ದಾರೆ ಎಂದೂ ಹೇಳಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಭಾರತೀಯ ವೈದ್ಯಕೀಯ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಬೆಡ್​ಗಳ ವ್ಯವಸ್ಥೆ ಏಕೆ ಕಡಿಮೆ ಇದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಗರಂ

Yoga guru Ramdev has no ill will against modern science statement released By Patanjali trust

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ