Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಗತಿಕ ನಾಯಕರಲ್ಲಿ ನೀವೊಬ್ಬ ಚಾಂಪಿಯನ್; ಪ್ರಧಾನಿ ಮೋದಿಯನ್ನು ಹೊಗಳಿದ ಗಯಾನಾ ಅಧ್ಯಕ್ಷ

ಜಾರ್ಜ್‌ಟೌನ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮೊಹಮ್ಮದ್ ಇರ್ಫಾನ್ ಅಲಿ ನರೇಂದ್ರ ಮೋದಿಯವರ ಆಡಳಿತ ಶೈಲಿಯನ್ನು ಶ್ಲಾಘಿಸಿದರು. ಮೋದಿಯವರನ್ನು "ಎಲ್ಲ ನಾಯಕರಲ್ಲಿ ನೀವೊಬ್ಬ ಚಾಂಪಿಯನ್" ಎಂದು ಬಣ್ಣಿಸಿದ್ದಾರೆ.

ಜಾಗತಿಕ ನಾಯಕರಲ್ಲಿ ನೀವೊಬ್ಬ ಚಾಂಪಿಯನ್; ಪ್ರಧಾನಿ ಮೋದಿಯನ್ನು ಹೊಗಳಿದ ಗಯಾನಾ ಅಧ್ಯಕ್ಷ
ಗಯಾನಾ ಅಧ್ಯಕ್ಷ ಇರ್ಫಾನ್ ಅಲಿ ಜೊತೆ ಗಿಡಕ್ಕೆ ನೀರೆರೆದ ಮೋದಿ
Follow us
ಸುಷ್ಮಾ ಚಕ್ರೆ
|

Updated on: Nov 20, 2024 | 10:51 PM

ಗಯಾನಾ: ಗಯಾನಾ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ಮೋದಿಯವರ ಪ್ರಭಾವಶಾಲಿ ನಾಯಕತ್ವ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅವರ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಇರ್ಫಾನ್ ಅಲಿ ಮೋದಿಯವರನ್ನು “ಎಲ್ಲ ನಾಯಕರಲ್ಲಿ ನೀವೊಬ್ಬ ಚಾಂಪಿಯನ್” ಎಂದು ಬಣ್ಣಿಸಿದ್ದಾರೆ.

ಜಾರ್ಜ್‌ಟೌನ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮೊಹಮ್ಮದ್ ಇರ್ಫಾನ್ ಅಲಿ ಭಾರತದಲ್ಲಿ ನರೇಂದ್ರ ಮೋದಿಯವರ ಆಡಳಿತ ಶೈಲಿಯನ್ನು ಶ್ಲಾಘಿಸಿದರು. ಗಯಾನಾ ಮತ್ತು ಇತರ ರಾಷ್ಟ್ರಗಳಲ್ಲಿ ಅವರ ಪ್ರಭಾವವನ್ನು ಪ್ರಸ್ತಾಪಿಸಿರುವ ಅವರು ನೀವು ಇಲ್ಲಿ ಬಂದಿರುವುದು ನಮ್ಮ ದೊಡ್ಡ ಗೌರವ. ನೀವು ನಾಯಕರಲ್ಲಿ ಚಾಂಪಿಯನ್ ಆಗಿದ್ದೀರಿ. ಭಾರತ ದೇಶವನ್ನು ನೀವು ನಂಬಲಾಗದಷ್ಟು ಮುನ್ನಡೆಸಿದ್ದೀರಿ. ನೀವು ಅಭಿವೃದ್ಧಿಶೀಲ ಜಗತ್ತಿಗೆ ಬೆಳಕನ್ನು ತೋರಿಸಿದ್ದೀರಿ. ನಿಮ್ಮನ್ನು ನೋಡಿ ಅನೇಕರು ತಮ್ಮ ದೇಶದಲ್ಲಿ ಅಭಿವೃದ್ಧಿ ಮಾಪನಗಳು ಮತ್ತು ಚೌಕಟ್ಟನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಗಯಾನಾ ಅಧ್ಯಕ್ಷ ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗೆ ಗಯಾನಾದಲ್ಲಿ ಭಾರತೀಯ ವಲಸಿಗರಿಂದ ಅದ್ದೂರಿ ಸ್ವಾಗತ

ಬ್ರೆಜಿಲ್‌ನಲ್ಲಿ ನಡೆದ ಜಿ20 ಶೃಂಗಸಭೆಯ ನಂತರ ಮಂಗಳವಾರ ಗಯಾನಾಗೆ ಆಗಮಿಸಿದ ಪ್ರಧಾನಿ ಮೋದಿ 56 ವರ್ಷಗಳಲ್ಲಿ ಈ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ನಾಯಕರಾಗಿದ್ದಾರೆ. ಅವರನ್ನು ಅಧ್ಯಕ್ಷ ಇರ್ಫಾನ್ ಅಲಿ ಮತ್ತು ಹಲವಾರು ಕ್ಯಾಬಿನೆಟ್ ಮಂತ್ರಿಗಳು ಬರಮಾಡಿಕೊಂಡರು.

ಇದೇವೇಳೆ ಗಯಾನಾಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಭಾರತೀಯ ಸಮುದಾಯದವರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಡಯಾಸ್ಪೊರಾ ಸದಸ್ಯರನ್ನು ಶ್ಲಾಘಿಸಿದ್ದಾರೆ. ಅವರಲ್ಲಿ ಹಲವರು 180 ವರ್ಷಗಳ ಹಿಂದೆಯೇ ಭಾರತ ಬಿಟ್ಟು ವಲಸೆ ಬಂದವರು. ಗಯಾನಾದಲ್ಲಿ ಭಾರತೀಯ ಸಮುದಾಯದವರು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವುದನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ಪಿಎಂ ಮೋದಿ ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ