AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೋದಲ್ಲಿ ಕೆಲಸ ಕೇಳಲು ಹೋದಾಗ ನೀವು ನಿಷ್ಪ್ರಯೋಜಕರು, ಇಲ್ಲಿಂದ ಹೊರಗೆ ಹೋಗಿ ಎಂದಿದ್ದರು: ಕೆ ಶಿವನ್

Former ISRO chairman K Sivan: ಬಿಇ ಪದವಿ ನಂತರ ಉದ್ಯೋಗಕ್ಕೆ ಸೇರುವುದಾಗಿ ತೀರ್ಮಾನಿಸಿದೆ. ಆದರೆ ಕೆಲಸ ಪಡೆಯುವುದು ಸುಲಭ ಆಗಿರಲಿಲ್ಲ, ಹಾಗಾಗಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದೆ. ಸ್ನಾತಕೋತ್ತರ ಪದವಿಯ ನಂತರವೇ ಕೆಲಸಕ್ಕಾಗಿ ಇಸ್ರೋ ಸ್ಯಾಟಲೈಟ್ ಕೇಂದ್ರಕ್ಕೆ ಹೋಗಿದ್ದು. ಅಲ್ಲಿಗೆ ಹೋದಾಗ ನಿಮ್ಮಿಂದೇನೂ ಆಗಲ್ಲ, ನಿಮಗೆ ಇಲ್ಲಿ ಕೆಲಸ ಸಿಗುವುದಿಲ್ಲ. ಇಲ್ಲಿಂದ ಹೊರಡಿ ಎಂದು ಹೇಳಿದ್ದರು. ನೋಡಿ, ವರ್ಷಗಳ ನಂತರ ನಾನು ಅದೇ ಸಂಸ್ಥೆಯ ಅಧ್ಯಕ್ಷನಾದೆ

ಇಸ್ರೋದಲ್ಲಿ ಕೆಲಸ ಕೇಳಲು ಹೋದಾಗ ನೀವು ನಿಷ್ಪ್ರಯೋಜಕರು, ಇಲ್ಲಿಂದ ಹೊರಗೆ ಹೋಗಿ ಎಂದಿದ್ದರು: ಕೆ ಶಿವನ್
ಕೆ.ಶಿವನ್
ರಶ್ಮಿ ಕಲ್ಲಕಟ್ಟ
|

Updated on:Oct 17, 2023 | 1:06 PM

Share

ಪಣಜಿ ಅಕ್ಟೋಬರ್ 17: ಇತ್ತೀಚೆಗೆ ಗೋವಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT) ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಇಸ್ರೋ (ISRO) ಮಾಜಿ ಅಧ್ಯಕ್ಷ ಕೆ ಶಿವನ್(K Sivan), ತಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ಘಟನೆಗಳನ್ನು ಹಂಚಿಕೊಂಡಿದ್ದಾರೆ. ನಾನು ಶಾಲಾ ಶಿಕ್ಷಕನಾಗಲು ಬಯಸಿದ್ದೆ, ವಿಜ್ಞಾನಿಯಾಗಲು ಅಲ್ಲ ಎಂದು ಶಿವನ್ ಹೇಳಿದ್ದಾರೆ ಸ್ನಾತಕೋತ್ತರ ಪದವಿ ನಂತರ ಕೆಲಸಕ್ಕಾಗಿ ಇಸ್ರೋದ ಸ್ಯಾಟಲೈಟ್ ಸೆಂಟರ್​​ಗೆ ಹೋಗಿದ್ದೆ. ಆಗ ಅಲ್ಲಿರುವವರು ನೀವು ‘ನಿಷ್ಪ್ರಯೋಜಕ, ಇಲ್ಲಿಂದ ಹೊರಗೆ ಹೋಗಿ ಎಂದು ಹೇಳಿದ್ದಾರೆ.

ಬಿಇ ಪದವಿ ನಂತರ ಉದ್ಯೋಗಕ್ಕೆ ಸೇರುವುದಾಗಿ ತೀರ್ಮಾನಿಸಿದೆ. ಆದರೆ ಕೆಲಸ ಪಡೆಯುವುದು ಸುಲಭ ಆಗಿರಲಿಲ್ಲ, ಹಾಗಾಗಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದೆ. ಸ್ನಾತಕೋತ್ತರ ಪದವಿಯ ನಂತರವೇ ಕೆಲಸಕ್ಕಾಗಿ ಇಸ್ರೋ ಸ್ಯಾಟಲೈಟ್ ಕೇಂದ್ರಕ್ಕೆ ಹೋಗಿದ್ದು. ಅಲ್ಲಿಗೆ ಹೋದಾಗ ನಿಮ್ಮಿಂದೇನೂ ಆಗಲ್ಲ, ನಿಮಗೆ ಇಲ್ಲಿ ಕೆಲಸ ಸಿಗುವುದಿಲ್ಲ. ಇಲ್ಲಿಂದ ಹೊರಡಿ ಎಂದು ಹೇಳಿದ್ದರು. ನೋಡಿ, ವರ್ಷಗಳ ನಂತರ ನಾನು ಅದೇ ಸಂಸ್ಥೆಯ ಅಧ್ಯಕ್ಷನಾದೆ. ನನಗೆ ಉಪಗ್ರಹ ಕೇಂದ್ರದಲ್ಲಿ ಕೆಲಸ ಸಿಗಲಿಲ್ಲ, ಆದರೆ ರಾಕೆಟ್ ಕೇಂದ್ರದಲ್ಲಿ ಕೆಲಸ ಸಿಕ್ಕಿತು ಎಂದಿದ್ದಾರೆ ಶಿವನ್.

ನನ್ನ ವೃತ್ತಿಜೀವನದಲ್ಲಿ ನಾನು ಬಯಸಿದ್ದನ್ನು ಎಂದಿಗೂ ಪಡೆಯಲಿಲ್ಲ. ಆದರೆ ಅದೃಷ್ಟ ಯಾವಾಗಲೂ ಹೊಸ ಬಾಗಿಲುಗಳನ್ನು ತೆರೆಯುತ್ತದೆ. ನಾನು ಜಿಎಸ್ಎಲ್ ವಿ (ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ನಿರ್ದೇಶಕನಾಗಿ ನೇಮಕಗೊಂಡಾಗ,ಈ ಯೋಜನೆಯನ್ನು ಸಂಪೂರ್ಣ ಯಶಸ್ವಿಗೊಳಿಸಲು ನಿರ್ಧರಿಸಿದೆ. ಅದಕ್ಕಾಗಿ ರಿಸ್ಕ್ ತೆಗೆದುಕೊಂಡೆ, ಇಸ್ರೋ ಅಧಿಕಾರಿಗಳ ಗಮನ ನನ್ನ ಮೇಲೆ ಬಿತ್ತು.

ಜಿಎಸ್‌ಎಲ್‌ವಿ ಯೋಜನೆ ಮತ್ತೆ ಮತ್ತೆ ವಿಫಲವಾಗುತ್ತಿದ್ದು, 4 ಬಾರಿ ವಿಫಲವಾಗಿರುವ ಆ ಯೋಜನೆಯ ನಿರ್ದೇಶಕರನ್ನಾಗಿ ನನ್ನನ್ನು ಮಾಡಿದರು. “ನಾನು ಜಿಎಸ್‌ಎಲ್‌ವಿ ಯೋಜನೆಯ ನಿರ್ದೇಶಕರಾದಾಗ, ನನ್ನ ಎಲ್ಲಾ ಸ್ನೇಹಿತರು ಮತ್ತು ಸಹೋದ್ಯೋಗಿಗಳು ನನ್ನನ್ನು ಅಭಿನಂದಿಸುವ ಬದಲು ಸಹಾನುಭೂತಿ ಹೊಂದಿದ್ದರು. ಈ ಪ್ರಸ್ತಾಪವನ್ನು ಸ್ವೀಕರಿಸಿದ್ದು ಮೂರ್ಖತನ ಎಂದು ಅವರು ಹೇಳಿದರು. ಆದರೆ ನನಗೆ ನನ್ನ ಮೇಲೆ ನಂಬಿಕೆ ಇತ್ತು, ಹಾಗಾಗಿ ಜಿಎಸ್ಎಲ್ ವಿ ಯೋಜನೆಯನ್ನು ಯಶಸ್ವಿಗೊಳಿಸಿದ್ದೇನೆ ಎಂದು ಶಿವನ್ ಹೇಳಿದ್ದಾರೆ.

ಇದನ್ನೂ ಓದಿGaganyaan: ಅಕ್ಟೋಬರ್ 21ಕ್ಕೆ ಗಗನಯಾನ ಮಿಷನ್‌ ಸಿಬ್ಬಂದಿ ಮಾಡ್ಯೂಲ್‌ನ ಮೊದಲ ಹಾರಾಟ ಪರೀಕ್ಷೆ: ಇಸ್ರೋ

ಶಿವನ್ ಅವರ ನೇತೃತ್ವದಲ್ಲಿ ಭಾರತವು ಚಂದ್ರಯಾನ-2 ಮಿಷನ್ ಅನ್ನು ಪ್ರಾರಂಭಿಸಿತು, ಅದು ಯಶಸ್ವಿಯಾಗಲಿಲ್ಲ. ಆ ಘಟನೆಯನ್ನು ನೆನಪಿಸಿಕೊಂಡ ಶಿವನ್, ಚಂದ್ರಯಾನ-2 ವಿಫಲವಾದ ನಂತರ ನಾವು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಮರುದಿನವೇ ಚಂದ್ರಯಾನ-3 ಗಾಗಿ ತಯಾರಿ ಆರಂಭಿಸಿದ್ದೇವೆ ಎಂದು ಹೇಳಿದರು. ಮರುದಿನವೇ ಚಂದ್ರಯಾನ-3 ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅನುಮೋದನೆ ನೀಡಿದ್ದರು ಎಂದು ಇಸ್ರೋ ಮಾಜಿ ಮುಖ್ಯಸ್ಥರು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:04 pm, Tue, 17 October 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ