ನೋ ಪಾರ್ಕಿಂಗ್​​ನಲ್ಲಿ ನಿಲ್ಲಿಸಿದ ವಾಹನದ ಫೋಟೋ ಕಳಿಸಿದರೆ 500 ರೂ. ಸಿಗುತ್ತೆ!; ಏನಿದು ಹೊಸ ವಿಷಯ?

ತಪ್ಪಾಗಿ ನಿಲುಗಡೆ ಮಾಡಿದ ವಾಹನದ ಛಾಯಾಚಿತ್ರವನ್ನು ಕಳುಹಿಸುವ ವ್ಯಕ್ತಿಗೆ 500 ರೂ.ಗಳನ್ನು ನೀಡಿ, ಆ ವಾಹನದ ಮಾಲೀಕನಿಗೆ 1,000 ರೂ. ದಂಡ ವಿಧಿಸುವ ಕಾನೂನನ್ನು ತರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ನೋ ಪಾರ್ಕಿಂಗ್​​ನಲ್ಲಿ ನಿಲ್ಲಿಸಿದ ವಾಹನದ ಫೋಟೋ ಕಳಿಸಿದರೆ 500 ರೂ. ಸಿಗುತ್ತೆ!; ಏನಿದು ಹೊಸ ವಿಷಯ?
ನಿತಿನ್ ಗಡ್ಕರಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jun 17, 2022 | 10:30 AM

ನವದೆಹಲಿ: ಇನ್ನುಮುಂದೆ ಅಕ್ರಮವಾಗಿ ನಿಲುಗಡೆ ಮಾಡಲಾದ ವಾಹನಗಳ ಫೋಟೋವನ್ನು ಮೊಬೈಲ್​ನಲ್ಲಿ ಕ್ಲಿಕ್ ಮಾಡಿ ಕಳುಹಿಸಿದರೆ ನಿಮಗೆ 500 ರೂ. ಸಿಗಲಿದೆ. ಹೀಗೆಂದು ಖುದ್ದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Minister Nitin Gadkari) ಅವರೇ ಹೇಳಿದ್ದಾರೆ. ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿದವರಿಗೆ 1,000 ರೂ. ದಂಡ ವಿಧಿಸಲಾಗುತ್ತದೆ. ಹಾಗೇ, ಅದರ ಫೋಟೋ ಕಳುಹಿಸಿದವರಿಗೆ 500 ರೂ. ನೀಡಲಾಗುತ್ತದೆ. ಶೀಘ್ರದಲ್ಲೇ ಈ ನಿಯಮ ಜಾರಿಗೆ ಬರಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ರಸ್ತೆಗಳಲ್ಲಿ ಸರಿಯಾಗಿ ನಿಲುಗಡೆ ಮಾಡದ ವಾಹನಗಳನ್ನು ತಡೆಯಲು ಕಾನೂನನ್ನು ತರುವುದಾಗಿ ಅವರು ಹೇಳಿದ್ದಾರೆ. ತಪ್ಪಾಗಿ ನಿಲುಗಡೆ ಮಾಡಿದ ವಾಹನದ ಛಾಯಾಚಿತ್ರವನ್ನು ಕಳುಹಿಸುವ ವ್ಯಕ್ತಿಗೆ 500 ರೂ.ಗಳನ್ನು ನೀಡಿ, ಆ ವಾಹನದ ಮಾಲೀಕನಿಗೆ 1,000 ರೂ. ದಂಡ ವಿಧಿಸುವ ಕಾನೂನನ್ನು ತರಲು ನಿರ್ಧರಿಸಲಾಗಿದೆ. ಇದರ ನಂತರ ಪಾರ್ಕಿಂಗ್ ಸಮಸ್ಯೆಯನ್ನು ಪರಿಹರಿಸಲಾಗುವುದು” ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ: ಆರ್​ಎಸ್​ಎಸ್ ಆಸ್ಪತ್ರೆಯಲ್ಲಿ ಹಿಂದೂಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತೀರಾ ಎಂದು ರತನ್ ಟಾಟಾ ಪ್ರಶ್ನಿಸಿದ್ದರು: ಸಚಿವ ನಿತಿನ್ ಗಡ್ಕರಿ

ಜನರು ತಮ್ಮ ವಾಹನಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸದೆ, ಅವರ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸುತ್ತಿದ್ದಾರೆ ಎಂದು ಸಚಿವರು ವಿಷಾದಿಸಿದ್ದಾರೆ. ಸಚಿವರ ಈ 500 ರೂ. ಬಹುಮಾನದ ಹೇಳಿಕೆ ನಿಜವಾಗಿಯೂ ಶಾಸಕಾಂಗ ಚೌಕಟ್ಟಿನಲ್ಲಿದೆಯೇ ಅಥವಾ ಅವರೇ ಸುಮ್ಮನೆ ನೀಡಿದ ಹೇಳಿಕೆಯೇ ಎಂಬುದು ಸ್ಪಷ್ಟವಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:27 am, Fri, 17 June 22