AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hydrogen Car: ಹೈಡ್ರೋಜನ್​ ಶಕ್ತಿಯಿಂದ ಚಲಿಸುವ ಕಾರಿನಲ್ಲಿ ಬಂದಿಳಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?

ಕೇಂದ್ರ ಸಚಿವ ನಿತಿನ್ ಗಡ್ಕರಿ ಹೈಡ್ರೋಜನ್​ನಿಂದ ಚಲಿಸುವಂಥ ಕಾರಿನಲ್ಲಿ ಸಂಸತ್​ಗೆ ಬಂದು ಕುತೂಹಲ ಮೂಡಿಸಿದ್ದಾರೆ. ಆ ಹೈಡ್ರೋಜನ್ ಫ್ಯುಯೆಲ್ ಬಗ್ಗೆ ವಿವರಗಳು ಇಲ್ಲಿವೆ.

Hydrogen Car: ಹೈಡ್ರೋಜನ್​ ಶಕ್ತಿಯಿಂದ ಚಲಿಸುವ ಕಾರಿನಲ್ಲಿ ಬಂದಿಳಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?
ಕೇಂದ್ರ ಸಚಿವ ನಿತಿನ್ ಗಡ್ಕರಿ
TV9 Web
| Edited By: |

Updated on: Mar 30, 2022 | 9:07 PM

Share

ಅಚ್ಚ ಬಿಳುಪಿನ ಬಟ್ಟೆ ತೊಟ್ಟಿದ್ದಂಥ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಮಾರ್ಚ್ 30ನೇ ತಾರೀಕಿನ ಬುಧವಾರ ಸಂಸತ್​ಗೆ ಬರುತ್ತಿದ್ದಂತೆ ಮಾಧ್ಯಮದವರ ಗಮನ ಸೆಳೆದರು. ಅದಕ್ಕೆ ಕಾರಣ ಆದದ್ದು ಹಸಿರು ಜಲಜನಕದ (Green Hydrogen) ಶಕ್ತಿಯಿಂದ ಚಲಿಸುವ ಕಾರು. ತಮ್ಮ ದಿರಿಸಿಗೆ ಹೊಂದುವಂಥ ಬಣ್ಣದ್ದೇ ಟೊಯೊಟಾ ಕಂಪೆನಿನಿಗೆ ಸೇರಿದ ಕಾರು ಅದಾಗಿತ್ತು. ನಂಬರ್​ ಪ್ಲೇಟ್​ ಹಸಿರಿನದಾಗಿತ್ತು. ಆತ್ಮನಿರ್ಭರ್ (ಸ್ವಾವಲಂಬಿ) ಆಗಲು ನಾವು ಗ್ರೀನ್ ಹೈಡ್ರೋಜನ್ ಪರಿಚಯಿಸಿದ್ದೇವೆ. ಇದು ನೀರಿನಿಂದ ನಡೆಯುತ್ತದೆ. ಈ ಕಾರು ಪ್ರಾಯೋಗಿಕ ಯೋಜನೆ. ಈಗ ದೇಶದಲ್ಲಿ ಹಸಿರು ಜಲಜನಕದ ಉತ್ಪಾದನೆ ಶುರು ಆಗಲಿದೆ. ಆಮದು ಕಡಿತ ಆಗಲಿದ್ದು, ಹೊಸ ಉದ್ಯೋಗದ ಸೃಷ್ಟಿ ಆಗಲಿದೆ ಎಂದು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ಸರ್ಕಾರದಿಂದ 3000 ಕೋಟಿ ರೂಪಾಯಿ ಮಿಷನ್ ಕೈಗೆತ್ತಿಕೊಳ್ಳಲಾಗಿದೆ ಮತ್ತು ನಾವು ಹೈಡ್ರೋಜನ್ ರಫ್ತು ಮಾಡುವ ದೇಶ ಆಗಲಿದ್ದೇವೆ. ಎಲ್ಲೆಲ್ಲ ಕಲ್ಲಿದ್ದಲು ಬಳಸಲಾಗುವುದೋ ಅಲ್ಲೆಲ್ಲ ಹಸಿರು ಜಲಜನಕ ಬಳಸಲಾಗುವುದು ಎಂದಿದ್ದಾರೆ ಗಡ್ಕರಿ.

ಜಾಗತಿಕ ಟ್ರೆಂಡ್ ಅನುಸರಿಸಿ, ಫಾಸಿಲ್ ಫ್ಯುಯೆಲ್​ನಿಂದ ಸುಸ್ಥಿರ ಮಾರ್ಗವನ್ನು ಅಳವಡಿಸಿಕೊಳ್ಳುವ ಕಡೆ ಬದಲಾವಣೆಗೆ ಭಾರತ ಸಾಕ್ಷಿ ಆಗುತ್ತಿದೆ. ಈ ಪ್ರಯತ್ನದಲ್ಲಿ ಎರಡು ಪ್ರಮುಖ ಪರ್ಯಾಯಗಳಿವೆ. ಒಂದು, ಎಲೆಕ್ಟ್ರಿಕ್. ಮತ್ತೊಂದು ಹೈಡ್ರೋಜನ್. ಆದರೆ ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನ ಅದಾಗಲೇ ಜನಪ್ರಿಯವಾಗಿದ್ದರೆ, ಹೈಡ್ರೋಜನ್ ವಿಚಾರದಲ್ಲಿ ಗೊಂದಲ ಇದೆ. ಅದರ ಪರಿಣಾಮವಾಗಿಯೇ ಈ ಲೇಖನದಲ್ಲಿ ಒಂದು ಸ್ಪಷ್ಟತೆ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಸುಸ್ಥಿರ ಗುರಿಯನ್ನು ಮುಟ್ಟುವುದಕ್ಕೆ ಹಾಗೂ ಹಸಿರು ಭವಿಷ್ಯಕ್ಕೆ ಹೈಡ್ರೋಜನ್ ಫ್ಯುಯೆಲ್ ಸೆಲ್ಸ್ ಸಾಮರ್ಥ್ಯ ಏನು ಎಂಬುದನ್ನು ತಿಳಿಯುವುದಕ್ಕೆ ಸಹಕಾರಿ ಇದು.

ಎಲ್ಲಾದರೂ ಮತ್ತು ಎಲ್ಲ ಕಡೆಯೂ ಈ ಭೂಮಿಯಲ್ಲಿ ಎಲ್ಲ ಕಡೆಯೂ ಲಭ್ಯ ಇರುವ ವಸ್ತು ಜಲಜನಕ. ಇದನ್ನು ಎಲ್ಲಿಂದಾದರೂ ಪಡೆಯಬಹುದು ಮತ್ತು ಭವಿಷ್ಯದಲ್ಲಿ ಝೀರೋ-ಕಾರ್ಬನ್​ ಅನ್ನು ವಾಸ್ತವ ಮಾಡುವುದಕ್ಕೆ ಈ ಹೈಡ್ರೋಜನ್​ ಸೂಕ್ತವಾದ ಇಂಧನದ ಮೂಲ.

ಶಕ್ತಿಯುತ ಹಾಗೂ ದಕ್ಷ ಶಕ್ತಿ, ದಕ್ಷತೆ ಇದನ್ನು ಎನರ್ಜಿ ಮೂಲದ ಗ್ರಾವಿಮೆಟ್ರಿಕ್ ಸಾಂದ್ರತೆಯಿಂದ ಅಳಯಲಾಗುತ್ತದೆ. ಉದಾಹರಣೆಗೆ ಗಾವಿಮೆಟ್ರಿಕ್ ಎನರ್ಜಿ ಸಾಂದ್ರತೆ ಡೀಸೆಲ್​ನದು 45ಎಂಜೆ/ಕೇಜಿಗೆ, ಅದೇ ಗಾವಿಮೆಟ್ರಿಕ್ ಎನರ್ಜಿ ಸಾಂದ್ರತೆ ಅನಿಲಕ್ಕೆ 55ಎಂಜೆ/ಕೇಜಿಗೆ. ಇನ್ನು ಹೈಡ್ರೋಜನ್ ಫ್ಯುಯೆಲ್ ಸೆಲ್ಸ್​ನಲ್ಲಿನ ಎನರ್ಜಿ ಸಾಂದ್ರತೆ ಡೀಸೆಲ್​ನ ಮೂರು ಪಟ್ಟು (ಹತ್ತಿರಹತ್ತಿರ 120 ಎಂಜೆ/ಕೇಜಿಗೆ). ಈ ಸಾಮರ್ಥ್ಯದಿಂದಾಗಿ ಜಲಜನಕವು ಪೌಂಡ್ ಫ್ಯುಯೆಲ್​ಗೆ ಹೆಚ್ಚು ಎನರ್ಜಿ ಉತ್ಪಾದಿಸುತ್ತದೆ. ಅತ್ಯುತ್ತಮ ದಕ್ಷತೆ ಇರುತ್ತದೆ.

ಉತ್ತಮ ಉಪ-ಉತ್ಪನ್ನಗಳು ಹೊಗೆಯುಗುಳುವುದನ್ನು ಕಡಿಮೆ ಮಾಡುವುದು ಮತ್ತು ಎನರ್ಜಿ ಉತ್ಪಾದನೆ ಸಮಯದ ಉಪ ಉತ್ಪನ್ನಗಳನ್ನು ಸರಿಯಾಗಿ ನಿರ್ವಹಿಸುವುದು ಇದರ ಬಗ್ಗೆ ಪ್ರತಿ ಉಪಕ್ರಮವೂ ಹಸಿರು ಭವಿಷ್ಯದ ನಿರ್ಮಾಣದ ಕಡೆಗೆ ಇರುತ್ತದೆ. ಆ ವಿಷಯದಲ್ಲೂ ಜಲಜನಕ ಅತ್ಯುತ್ತಮ. ಅದರ ಉಪ ಉತ್ಪನ್ನಗಳು ಶಾಖ ಮತ್ತು ನೀರು. ಸದ್ಯಕ್ಕೆ ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಷ್ಟ್ರೇಷನ್​ನಲ್ಲಿ ಇದನ್ನು ತಂತ್ರಜ್ಞಾನವಾಗಿ ಬಳಸಲಾಗುತ್ತದೆ. ಹೈಡ್ರೋಜನ್ ಅನ್ನು ಎನರ್ಜಿ ಮೂಲವಾಗಿ ಹಾಗೂ ಉಪ ಉತ್ಪನ್ನವಾಗಿ ಬರುವ ನೀರನ್ನು ಗಗನಯಾತ್ರಿಗಳಿಗಾಗಿ ಬಳಸಲಾಗುತ್ತದೆ.

ವಿತರಣೆ ಸದ್ಯಕ್ಕೆ ಇಡೀ ಜಗತ್ತು ತಮ್ಮ ಎನರ್ಜಿ ಬೇಡಿಕೆಯನ್ನು ಪೂರೈಸಿಕೊಳ್ಳಲು ಒಪೆಕ್ ಅಡಿಯಲ್ಲಿ ಬರುವ ದೇಶಗಳ ಮೇಲೆ ಅವಲಂಬಿತವಾಗಿದೆ. ಆದರೆ ಜಲಜನಕ ಪ್ಯುಯೆಲ್ ಸೆಲ್ಸ್ ಪ್ರಮುಖ ಎನರ್ಜಿ ಮೂಲವಾದಲ್ಲಿ ಜಾಗತಿಕ ಸಂಬಂಧ ಸುಧಾರಿಸಿ ಹಾಗೂ ಅವಲಂಬನೆ ಕಡಿಮೆ ಮಾಡುತ್ತದೆ.

ಕೊನೆ ವಿಚಾರ, ಆದರೆ ಮುಖ್ಯ ಸಂಗತಿ. ಉತ್ಪನ್ನಗಳು ದೊಡ್ಡದಿರಲಿ, ಚಿಕ್ಕದಿರಲಿ ಹೈಡ್ರೋಜನ್ ಎನರ್ಜಿ ಅಳವಡಿಸಿಕೊಳ್ಳುವುದು ಸಲೀಸು. ಗೃಹಬಳಕೆ ವಸ್ತುಗಳಿರಲಿ, ಹೀಟಿಂಗ್ ಸಿಸ್ಟಮ್, ಉತ್ಪಾದನೆ ಮಷೀನ್​ಗಳು ಮುಂತಾದವುಗಳಿಗೆ ಬಳಸಬಹುದು.

ಇದನ್ನೂ ಓದಿ: ಗ್ರೀನ್ ಹೈಡ್ರೋಜನ್ ವಾಹನ ಬಳಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಲಹೆ; ಏನಿದು ಗ್ರೀನ್ ಹೈಡ್ರೋಜನ್?

ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?