ಮುಗ್ಗರಿಸಿದ ರಷ್ಯಾದ ಚಂದ್ರಾನ್ವೇಷಣಾ ಮಹತ್ವಾಕಾಂಕ್ಷೆ: ವೈಫಲ್ಯ ಕಂಡ ಲೂನಾ-25 ಯೋಜನೆ

ಬಹುತೇಕ ಐದು ದಶಕಗಳ ಅವಧಿಯಲ್ಲಿ ರಷ್ಯಾ ಕೈಗೊಂಡ ಮೊದಲ ಚಂದ್ರ ಅನ್ವೇಷಣಾ ಯೋಜನೆಯಾದ ಲೂನಾ-25 ವೈಫಲ್ಯದಲ್ಲಿ ಅಂತ್ಯ ಕಂಡಿದೆ. ಬಾಹ್ಯಾಕಾಶ ನೌಕೆ ಲ್ಯಾಂಡಿಂಗ್ ಪೂರ್ವ ಕಕ್ಷೆಯ ತಯಾರಿಯ ಹಂತದಲ್ಲಿ ನಿಯಂತ್ರಣ ಕಳೆದುಕೊಂಡು, ಚಂದ್ರನ ಮೇಲ್ಮೈಗೆ ಅಪ್ಪಳಿಸಿ ವೈಫಲ್ಯ ಕಂಡಿದೆ. ಈ ವಿಫಲತೆ ಸೋವಿಯತ್ ಒಕ್ಕೂಟದ ಕಾಲದಲ್ಲಿ ಪಾರಮ್ಯ ಮೆರೆದಿದ್ದ ರಷ್ಯಾದ ಬಾಹ್ಯಾಕಾಶ ಕಾರ್ಯಕ್ರಮಗಳು ಹಿನ್ನಡೆಯಾಗುತ್ತಿರುವುದಕ್ಕೆ ಪುರಾವೆ ಒದಗಿಸಿದೆ.

ಮುಗ್ಗರಿಸಿದ ರಷ್ಯಾದ ಚಂದ್ರಾನ್ವೇಷಣಾ ಮಹತ್ವಾಕಾಂಕ್ಷೆ: ವೈಫಲ್ಯ ಕಂಡ ಲೂನಾ-25 ಯೋಜನೆ
ಲೂನಾ 25 ಬಾಹ್ಯಾಕಾಶ ನೌಕೆ
Follow us
Digi Tech Desk
| Updated By: ನಯನಾ ರಾಜೀವ್

Updated on:Aug 21, 2023 | 9:59 AM

ಬಹುತೇಕ ಐದು ದಶಕಗಳ ಅವಧಿಯಲ್ಲಿ ರಷ್ಯಾ ಕೈಗೊಂಡ ಮೊದಲ ಚಂದ್ರ ಅನ್ವೇಷಣಾ ಯೋಜನೆಯಾದ ಲೂನಾ-25 ವೈಫಲ್ಯದಲ್ಲಿ ಅಂತ್ಯ ಕಂಡಿದೆ. ಬಾಹ್ಯಾಕಾಶ ನೌಕೆ ಲ್ಯಾಂಡಿಂಗ್ ಪೂರ್ವ ಕಕ್ಷೆಯ ತಯಾರಿಯ ಹಂತದಲ್ಲಿ ನಿಯಂತ್ರಣ ಕಳೆದುಕೊಂಡು, ಚಂದ್ರನ ಮೇಲ್ಮೈಗೆ ಅಪ್ಪಳಿಸಿ ವೈಫಲ್ಯ ಕಂಡಿದೆ. ಈ ವಿಫಲತೆ ಸೋವಿಯತ್ ಒಕ್ಕೂಟದ ಕಾಲದಲ್ಲಿ ಪಾರಮ್ಯ ಮೆರೆದಿದ್ದ ರಷ್ಯಾದ ಬಾಹ್ಯಾಕಾಶ ಕಾರ್ಯಕ್ರಮಗಳು ಹಿನ್ನಡೆಯಾಗುತ್ತಿರುವುದಕ್ಕೆ ಪುರಾವೆ ಒದಗಿಸಿದೆ.

ರಷ್ಯಾದ ಸರ್ಕಾರಿ ಬಾಹ್ಯಾಕಾಶ ಸಂಸ್ಥೆ ರಾಸ್‌ಕಾಸ್ಮೋಸ್ ಶನಿವಾರ 11:57 ಜಿಎಂಟಿ ಸಮಯದಲ್ಲಿ ಬಾಹ್ಯಾಕಾಶ ನೌಕೆಯೊಡನೆ ಸಂವಹನ ಕಳೆದುಕೊಂಡಿರುವುದಾಗಿ ವರದಿ ಮಾಡಿತು. ಇದು ಬಾಹ್ಯಾಕಾಶ ನೌಕೆಯ ಲ್ಯಾಂಡಿಂಗ್ ಪೂರ್ವ ಕಕ್ಷೀಯ ಚಲನೆಯ ಹಂತದಲ್ಲಿ ಎದುರಾದ ಸಮಸ್ಯೆಯ ಪರಿಣಾಮವಾಗಿತ್ತು. ಈ ಮೂಲಕ ಸೋಮವಾರ ನಡೆಯಬೇಕಿದ್ದ ಸಾಫ್ಟ್ ಲ್ಯಾಂಡಿಂಗ್ ಈಗ ಪತನಗೊಂಡು ಕೊನೆಯಾಗಿದೆ.

ಇದರ ಬಗ್ಗೆ ಮಾಹಿತಿ ನೀಡಿದ ರಾಸ್‌ಕಾಸ್ಮೋಸ್, ಒಂದು ಅನಿರೀಕ್ಷಿತ ಕಕ್ಷೀಯ ಪಥದ ಕಾರಣದಿಂದಾಗಿ ಬಾಹ್ಯಾಕಾಶ ನೌಕೆ ಚಂದ್ರನ ಮೇಲ್ಮೈಗೆ ಅಪ್ಪಳಿಸಿತು ಎಂದಿದೆ.

ಯಾವ ಕಾರಣಕ್ಕೆ ಈ ಅವಘಡ ಸಂಭವಿಸಿತು ಎಂದು ಕರಾರುವಾಕ್ಕಾಗಿ ತಿಳಿಯಲು ಒಂದು ಅಂತರ್ ವಿಭಾಗ ಸಮಿತಿಯನ್ನು ರಚಿಸಲಾಗಿದೆ. ಲೂನಾ-25 ಯೋಜನೆ ರಷ್ಯಾದ್ಯಂತ ಜನರಲ್ಲಿ ಈ ಬಾರಿ ರಷ್ಯಾ ಮತ್ತೊಂದು ಬಾರಿಗೆ ಜಾಗತಿಕ ಚಂದ್ರ ಅನ್ವೇಷಣಾ ಸ್ಪರ್ಧೆಗೆ ಮರಳಲಿದೆ, ಪ್ರಬಲ ರಾಷ್ಟ್ರಗಳ ಸಾಲಿಗೆ ಸೇರಲಿದೆ ಎಂಬ ಕುತೂಹಲ, ಸಂಭ್ರಮ ಮೂಡಿಸಿತ್ತು.

ಈ ಘಟನೆ ಶೀತಲ ಸಮರದ ವೈರತ್ವದ ಬಳಿಕ, ಬಾಹ್ಯಾಕಾಶ ವಲಯದಲ್ಲಿ ಕುಸಿಯುತ್ತಿರುವ ಪ್ರಭಾವವನ್ನು ಸೂಚಿಸಿದೆ. ಶೀತಲ ಸಮರದ ಅವಧಿಯಲ್ಲಿ ಮಾಸ್ಕೋ 1957ರಲ್ಲಿ ಮೊದಲ ಭೂ ಪರಿಭ್ರಮಣ ಉಪಗ್ರಹ ಸ್ಪುಟ್ನಿಕ್-1 ಉಡಾವಣೆ, 1961ರಲ್ಲಿ ಯೂರಿ ಗಗಾರಿನ್ ಎಂಬ ರಷ್ಯನ್ ಕಾಸ್ಮೋನಾಟ್ ರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ಮೊದಲ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ಸಾಧನೆ ಮಾಡಿತು.

ಈಗ 2 ಟ್ರಿಲಿಯನ್ ಡಾಲರ್ ಆರ್ಥಿಕತೆಯಾದ ರಷ್ಯಾ ದಶಕಗಳಲ್ಲೇ ದೊಡ್ಡದಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ರಷ್ಯಾ ಪಾಶ್ಚಾತ್ಯ ನಿರ್ಬಂಧಗಳನ್ನು ಎದುರಿಸುತ್ತಿದ್ದು, ಎರಡನೇ ಮಹಾಯುದ್ಧದ ಬಳಿಕ ಅತಿದೊಡ್ಡ ಭೂ ಯುದ್ಧದಲ್ಲಿ ತೊಡಗಿಕೊಂಡಿದೆ.

ರಷ್ಯಾ 1976ರ ಲೂನಾ-24 ಯೋಜನೆಯ ಬಳಿಕ ಯಾವುದೇ ಚಂದ್ರ ಅನ್ವೇಷಣಾ ಯೋಜನೆಯನ್ನು ಕೈಗೊಂಡಿರಲಿಲ್ಲ. ಲೂನಾ-24ರ ಅವಧಿಯಲ್ಲಿ ಲಿಯೋನಿಡ್ ಬ್ರೆಜ್ನೆವ್ ರಷ್ಯಾ ಅಧ್ಯಕ್ಷರಾಗಿ ಆಡಳಿತ ನಡೆಸುತ್ತಿದ್ದರು.

ಮತ್ತಷ್ಟು ಓದಿ:  ಚಂದ್ರನ ಮೇಲ್ಮೈಗೆ ಡಿಕ್ಕಿ; ರಷ್ಯಾದ ಬಾಹ್ಯಾಕಾಶ ನೌಕೆ ಲೂನಾ 25 ಕಕ್ಷೆ ಸೇರುವಲ್ಲಿ ವಿಫಲ

ವಿಫಲವಾದ ಚಂದ್ರ ಅನ್ವೇಷಣೆ

ರಷ್ಯಾ ಈ ವಾರದಲ್ಲಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಡೆಸಲಿರುವ ಭಾರತದ ಚಂದ್ರಯಾನ-3 ಯೋಜನೆಯೊಡನೆ ಸ್ಪರ್ಧೆ ನಡೆಸುತ್ತಿತ್ತು. ಅದರೊಡನೆ, ರಷ್ಯಾ ಚಂದ್ರ ಅನ್ವೇಷಣೆಯ ಕುರಿತು ಮಹತ್ವಾಕಾಂಕ್ಷೆ ಹೊಂದಿರುವ ಅಮೆರಿಕಾ ಮತ್ತು ಚೀನಾಗಳ ಜೊತೆಯೂ ಸ್ಪರ್ಧೆಗಿಳಿದಿತ್ತು.

ಲೂನಾ-25 ಯೋಜನೆ ಪತನಗೊಂಡ ಸುದ್ದಿ ಪ್ರಕಟಗೊಂಡ ಸಮಯದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಎಕ್ಸ್ (ಈ ಮೊದಲು ಟ್ವಿಟರ್) ಹ್ಯಾಂಡಲ್‌ನಲ್ಲಿ ಚಂದ್ರಯಾನ-3 ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿಯಲು ಸಿದ್ಧತೆ ನಡೆಸುತ್ತಿದೆ ಎಂದು ತಿಳಿಸಿತ್ತು.

ರಷ್ಯನ್ ವಿಜ್ಞಾನಿಗಳು ಲೂನಾ-25 ಯೋಜನೆ ಬಾಹ್ಯಾಕಾಶ ಸೂಪರ್ ಪವರ್‌ಗಳೊಡನೆ ಸ್ಪರ್ಧಿಸುವ ಸಾಮರ್ಥ್ಯವನ್ನು ರಷ್ಯಾಗೆ ನೀಡಲಿವೆ ಎಂದು ವಿಶ್ವಾಸ ಹೊಂದಿದ್ದರು. ಸೋವಿಯತ್ ಒಕ್ಕೂಟದ ಪತನಾನಂತರ ರಷ್ಯಾ ಅನುಭವಿಸಿದ ಹಿನ್ನಡೆಗಳು ಮತ್ತು ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಈ ಯೋಜನೆ ಮಹತ್ವ ಪಡೆದುಕೊಂಡಿತ್ತು.

ರಷ್ಯಾದ ಬಾಹ್ಯಾಕಾಶ ಕಾರ್ಯಕ್ರಮಗಳ ಕುರಿತು ಸಮರ್ಪಕ ಮಾಹಿತಿಗಳನ್ನು ಒದಗಿಸುವ www.RussianSpaceWeb.com ಎಂಬ ಜಾಲತಾಣದ ಬರಹಗಾರ, ಸಂಪಾದಕರಾದ ಅನಾಟಲಿ ಜಾಕ್ ಅವರು ಲೂನಾ-25ರ ಫ್ಲೈಟ್ ಕಂಟ್ರೋಲ್ ವ್ಯವಸ್ಥೆ ಹಲವು ಸರಿ ಹೊಂದಿಸುವಿಕೆಗಳನ್ನು ಎದುರಿಸಬೇಕಾಗಿ ಬಂದಿತ್ತು ಎಂದಿದ್ದರು. ರಷ್ಯಾ ಸಾಂಪ್ರದಾಯಿಕವಾಗಿ ಸರಳ ಕಕ್ಷೀಯ ಮಾದರಿಯಲ್ಲಿ ಚಂದ್ರನ ಮೇಲೆ ಇಳಿಯುವ ಪ್ರಯತ್ನದ ಬದಲು ಹೆಚ್ಚು ಸಂಕೀರ್ಣ ಪ್ರಯತ್ನ ನಡೆಸಿತು ಎಂದಿದ್ದಾರೆ. ಇಂತಹ ಪ್ರಯತ್ನಗಳನ್ನು ಸೋವಿಯತ್ ಒಕ್ಕೂಟ, ಅಮೆರಿಕಾ, ಚೀನಾ ಹಾಗೂ ಅಮೆರಿಕಾಗಳು ಪ್ರಯತ್ನಿಸಿದ್ದವು.

ರಷ್ಯನ್ ಸಂಶೋಧಕರು ಸತತವಾಗಿ ರಷ್ಯಾದ ಬಾಹ್ಯಾಕಾಶ ಯೋಜನೆಗಳು ಅಸಮರ್ಪಕ ನಾಯಕತ್ವ, ಪ್ರಾಯೋಗಿಕವಲ್ಲದ ಬಾಹ್ಯಾಕಾಶ ಯೋಜನೆಗಳು, ಭ್ರಷ್ಟಾಚಾರ, ಮತ್ತು ರಷ್ಯಾದ ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿನ ಕುಸಿತಗಳ ಕುರಿತು ಕಳವಳ ವ್ಯಕ್ತಪಡಿಸುತ್ತಾ ಬಂದಿದ್ದರು.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ, 2011ರಲ್ಲಿ ಮಂಗಳ ಗ್ರಹವನ್ನು ತಲುಪುವಲ್ಲಿ ಫೋಬೋಸ್ ಗ್ರಂಟ್ ಯೋಜನೆ ವೈಫಲ್ಯ ಅನುಭವಿಸಿದ್ದು ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ರಷ್ಯಾದ ವೈಫಲ್ಯಕ್ಕೆ ಬೆಳಕು ಚೆಲ್ಲಿತ್ತು. ಆ ಯೋಜನೆ ಭೂಮಿಯ ಕಕ್ಷೆಯನ್ನು ದಾಟಿ ಹೋಗಲು ವಿಫಲವಾಗಿ, ಅಂತಿಮವಾಗಿ ಭೂಮಿಯ ವಾತಾವರಣಕ್ಕೆ ಮರಳಿ, 2012ರಲ್ಲಿ ಪೆಸಿಫಿಕ್ ಸಾಗರದಲ್ಲಿ ಪತನಗೊಂಡಿತು.

ಲೂನಾ-25 ಯೋಜನೆಯ ವೈಫಲ್ಯದ ಕಾರಣದಿಂದ ರಷ್ಯಾ ಚಂದ್ರನ ದಕ್ಷಿಣ ಧ್ರುವದಿಂದ ಮಂಜುಗಡ್ಡೆಯ ರೂಪದಲ್ಲಿರುವ ನೀರನ್ನು ಸಂಗ್ರಹಿಸಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆಯುವ ಅವಕಾಶವನ್ನು ಕಳೆದುಕೊಂಡಿದೆ. ವಿಜ್ಞಾನಿಗಳು ಅಲ್ಲಿ ಅಪಾರ ಪ್ರಮಾಣದಲ್ಲಿ ನೀರಿದೆ ಎಂದು ನಂಬಿದ್ದಾರೆ.

ಈಗ ರಷ್ಯಾದ ಮಹತ್ತರ ಚಂದ್ರ ಅನ್ವೇಷಣಾ ಯೋಜನೆ ಲೂನಾ-25 ವೈಫಲ್ಯ ಅನುಭವಿಸಿದ್ದರ ಪರಿಣಾಮವಾಗಿ, ರಷ್ಯಾದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳು ಏನಾಗಬಹುದು ಎಂದು ಹೇಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಗಿರೀಶ್ ಲಿಂಗಣ್ಣ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Girish Linganna

ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಅಂತಾರಾಷ್ಟ್ರೀಯ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:56 am, Mon, 21 August 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ