Karnataka Assembly Election 2023: ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು: ಆದ್ರೆ ಈ ಗ್ರಾಮಕ್ಕಿಲ್ಲ ಮತಗಟ್ಟೆ, ವೋಟ್​ ಹಾಕಲು 3 ಕಿ.ಮೀ ಹೋಗ್ಬೇಕು

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮಾಲೂರು ಗ್ರಾಮದ ಜನರು ತಮ್ಮ ಹಕ್ಕನ್ನು ಚಲಾಯಿಸಲು 3 ಕಿ.ಲೋ ಮೀ ನಡೆದುಕೊಂಡು ಹೋಗಿ ಕೆಂಚಮ್ಮಲ್ಲನಹಳ್ಳಿಯಲ್ಲಿ ಮತ ಚಲಾವಣೆ ಮಾಡುತ್ತಿದ್ದಾರೆ.  

Karnataka Assembly Election 2023: ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು: ಆದ್ರೆ ಈ ಗ್ರಾಮಕ್ಕಿಲ್ಲ ಮತಗಟ್ಟೆ, ವೋಟ್​ ಹಾಕಲು 3 ಕಿ.ಮೀ ಹೋಗ್ಬೇಕು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 04, 2023 | 7:50 PM

ಕರ್ನಾಟಕದಲ್ಲಿ 2023ರ ಚುನಾವಣೆ (Karnataka Assembly Election 2023) ಹತ್ತಿರ ಬರುತ್ತಿದೆ. ಎಲ್ಲ ಪಕ್ಷಗಳು ಈಗಾಗಲೇ ಚುನಾವಣೆ ಘೋಷಣೆಗೆ ಬಕಪಕ್ಷಿಗಳಂತೆ ಕಾಯುತ್ತಿದೆ. ರಾಜಕೀಯ ಪಕ್ಷಗಳು ಹೊಸ ಹೊಸ ತಂತ್ರಗಳನ್ನು ಸಿದ್ಧಗೊಳಿಸುತ್ತಿದೆ, ಜನರ ಬಳಿ ಯಾವ ಯೋಜನೆ, ಅವರ ಅಶೋತ್ತರಗಳು ಏನು? ಎಲ್ಲಿ? ಹೇಗೆ? ಪ್ರಚಾರ ಮಾಡಬೇಕು ಎಂದು ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಇಷ್ಟೇ ಎಲ್ಲ ಪ್ಲಾನ್ ಮಾಡಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳಿಗೆ ಹಾಗೂ ಆಡಳಿತರೂಢ ಸರ್ಕಾರಕ್ಕೆ ಜನರಿಗೆ ಮುಖ್ಯವಾಗಿ ಏನು? ಬೇಕು ಎಂಬುದನ್ನು ಕಂಡುಕೊಳ್ಳುತ್ತಿಲ್ಲ. ಈ ಕಾರಣಕ್ಕಾಗಿಯೇ ರಾಜ್ಯದಲ್ಲಿ ಯಾವುದೇ ಪಕ್ಷಗಳು ಸ್ಥಿರವಾಗಿ ನಿಲ್ಲುತ್ತಿಲ್ಲ, ಹೌದು ಇಲ್ಲೊಂದು ಊರಿನಲ್ಲಿ ಮತ ಹಾಕಲು ಮತಗಟ್ಟೆ ಇಲ್ಲ. ಈ ಹಳ್ಳಿಯ ಜನ ಮತ ಹಾಕಲು ಪರದಾಡುತ್ತಿದ್ದಾರೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮಾಲೂರು ಗ್ರಾಮದ ಜನರು ತಮ್ಮ ಹಕ್ಕನ್ನು ಚಲಾಯಿಸಲು 3 ಕಿ.ಲೋ ಮೀ ನಡೆದುಕೊಂಡು ಹೋಗಿ ಕೆಂಚಮ್ಮಲ್ಲನಹಳ್ಳಿಯಲ್ಲಿ ಮತ ಚಲಾವಣೆ ಮಾಡುತ್ತಿದ್ದಾರೆ.   ಈ ಗ್ರಾಮದಲ್ಲಿ ಒಟ್ಟು 300ಕ್ಕೂ ಹೆಚ್ಚು ಮತಗಳಿದ್ದು ಇಲ್ಲಿಗೆ ಒಂದು ಮತಗಟ್ಟೆ ಇಲ್ಲ, ಈ ಕಾರಣದಿಂದ ಇಲ್ಲಿಯ ಜನರು ಮತದಾನ ಕೂಡ ಮಾಡುತ್ತಿಲ್ಲ. ಒಂದು ರೀತಿಯಲ್ಲಿ ಇಲ್ಲಿಯ ಜನರ ಮತದಾನ ಮಾಡುವ ಹಕ್ಕನ್ನು ಸರ್ಕಾರವೇ ಕಸಿದುಕೊಂಡಿದೆ ಎಂದು ಹೇಳಬಹುದು. ಮತಗಟ್ಟೆ ಇಲ್ಲವೆಂದರೆ ಹೋಗಲಿ ಕೆಂಚಮ್ಮಲ್ಲನಹಳ್ಳಿ ಹೋಗಿ ಮತದಾನ ಮಾಡಲು ಯಾವುದೇ ವಾಹನದ ವ್ಯವಸ್ಥೆಯು ಇಲ್ಲ. ಈ ಕಾರಣಕ್ಕಾಗಿ ಇಲ್ಲಿಯ ಜನರಿಗೆ ಓಟ್ ಹಾಕಲು ತುಂಬಾ ಕಷ್ಟಪಡುತ್ತಿದ್ದಾರೆ.

ಇದನ್ನು ಓದಿ:ತಮ್ಮ ಸಾಧನೆ ತಿಳಿಸಲು ಮನೆ ಮನೆಗೆ ಸಂಪರ್ಕ ಅಭಿಯಾನಕ್ಕೆ ಮುಂದಾದ ಬಿಜೆಪಿ

ಅಧಿಕಾರಿಗಳ ಉಢಾಪೆ ಉತ್ತರ

ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಆಗುತ್ತಿದೆ. ಸ್ವಂತ ವಾಹನ ಇರುವ ಜನರು ಮಾತ್ರ ತಮ್ಮ ಹಕ್ಕನ್ನು  ಚಲಾಯಿಸುವಂತಾಗಿದೆ. ವಯಸ್ಕರು ಹಾಗೂ ಮಹಿಳೆಯರು ಮತ ಚಲಾಯಿಸಲಾದೇ ತಮ್ಮ ಮತದಾನ ಹಕ್ಕನ್ನು ಒಂದು ರೀತಿಯಲ್ಲಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳಿಗೆ ಗಮನಕ್ಕೆ ತಂದರು ಯಾವುದೇ ಪ್ರಯೋಜವಾಗಿಲ್ಲ, ಇಲ್ಲಿ ಅಧಿಕಾರಿಗಳು ಉಢಾಪೆಯ ಉತ್ತರವನ್ನು ನೀಡುತ್ತಾರೆ. ಈ ಬಗ್ಗೆ ಸರ್ಕಾರ ಸರಿಯಾದ ಕ್ರಮ ತೆಗೆದುಕೊಂಡಿಲ್ಲ ಎಂದರೆ ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಇಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ನಮ್ಮ ಊರಿಗೆ ಒಂದು ಮತಗಟ್ಟೆಯನ್ನು ನೀಡಬೇಕು. ಜೊತೆಗೆ ಚುನಾವಣೆ ಸಮಯದಲ್ಲಿ ಬಂದು ಭರವಸೆ ನೀಡುವುದು ಬೇಡ ಎಂದು ಜನರು ಎಚ್ಚರಿಕೆ ನೀಡಿದ್ದಾರೆ.

ಜನ ಪ್ರತಿನಿಧಿಗಳು ಇಲ್ಲಿ ಬಂದು ಮತ ಹಾಕಿ ಎಂದು ಬೇಡಿಕೊಳ್ಳುತ್ತಾರೆ, ಮತ ಚಲಾಯಿಸಿದ ನಂತರ ಅವರ ಪತ್ತೆ ಇರುವುದಿಲ್ಲ. ಇಲ್ಲಿ ಜನರ ಗೋಳು ಕೇಳೋರು ಇಲ್ಲದಂತಾಗಿದೆ. ನಮ್ಮ ಮತ ಚಲಾವಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಾವರ್ಜನಿಕರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.  ಮಾಲೂರು ಒಂದು ಚಿಕ್ಕ ಹಳ್ಳಿ 450 ಮತಗಳಿಲ್ಲ ಹಾಗಾಗಿ ಇಲ್ಲಿ ಮತಗಟ್ಟೆ ವ್ಯವಸ್ಥೆ ಇಲ್ಲ ಎಂದು ಬೇಜಾಬ್ದಾರಿ ಹೇಳಿಕೆಯನ್ನು ಇಲ್ಲಿನ ಅಧಿಕಾರಿಗಳು ನೀಡುತ್ತಾರೆ, ಆದರೆ ಇಲ್ಲಿ ವಾಹನ ವ್ಯವಸ್ಥೆ ಕೂಡ ಇಲ್ಲದಿರುವ ಕಾರಣ ಇರುವ 300 ಮತ ಕೂಡ ಸರಿಯಾಗಿ ಚಲಾವಣೆಯಾಗುತ್ತಿಲ್ಲ.

ನಮ್ಮ ಹಕ್ಕನ್ನು ಚಲಾಯಿಸಲು ಅವಕಾಶ ನೀಡಿ

ಕೂಡ್ಲಿಗಿ ತಾಲೂಕಿನ ತಹಸೀಲ್ದಾರ ಟಿ ಜಗದೀಶ್ ಹಾಗೂ ಜಿಲ್ಲಾಧಿಕಾರಿ ಬಿ. ವೆಂಕಟೇಶ್ ಈ ಕೂಡಲೇ ಇದರ ಕಡೆ ಗಮನ ನೀಡಿ, ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುಬೇಕು. ಪ್ರತಿಯೊಬ್ಬ ವ್ಯಕ್ತಿಯು  ಮತ ಚಲಾಯಿಸುವಂತೆ ಮಾಡುವುದು ಚುನಾವಣಾ ಆಯೋಗದ ಕರ್ತವ್ಯ ಹಾಗೂ 18 ವರ್ಷ ಮೇಲ್ಪಟ್ಟ ಎಲ್ಲ ಭಾರತೀಯನ ಹಕ್ಕು. ಆ ಹಕ್ಕನ್ನು ಸಹ ಕೂಡ ಚಲಾವಣೆ ಮಾಡಲು ಜನರು ಪರದಾಡುವ ಪರಿಸ್ಥಿತಿ. ಇನ್ನೇನು 2023ಕ್ಕೆ ವಿಧಾನ ಸಭೆ ಚುನಾವಣೆ ಬರುತ್ತಿದೆ. ಅಷ್ಟರೊಳಗೆ ಮಾಲೂರು ಗ್ರಾಮಸ್ಥರು ನಮ್ಮ ಊರಿನಲ್ಲೇ ಮತ ಚಲಾಯಿಸಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಈ ವರ್ಷವೂ ಜನರು ಮತ ಚಲಾಯಿಸಲು ಪರದಾಡ ಬೇಕಾಗುತ್ತದೆ. ಚುನಾವಣಾ ಅಧಿಕಾರಿಗಳು ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ತಮ್ಮ ಹಕ್ಕನ್ನು ಚಲಾಯಿಸಲು ಜನರಿಗೆ ಮತಗಟ್ಟೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದಾರೆ.

ನಮ್ಮ ಊರಿನಲ್ಲಿ ಒಟ್ಟು 300 ಮತಗಳಲ್ಲಿದ್ದು, ಇದುವರೆಗೂ ನಮಗೆ ಮತಗಟ್ಟೆ ಕೇಂದ್ರ ನೀಡಿಲ್ಲ ಮತ ಚಲಾಯಿಸಲು ಸುಮಾರು 3ಕಿಲೋಮೀಟರ್ ನಡೆದುಕೊಂಡು ಹೋಗಬೇಕು. ಸ್ವಂತ ವಾಹನ ಇದ್ದವರು ಮಾತ್ರ ಮತ ಚಲಾಯಿಸಿತಿದ್ದಾರೆ. ಮತ ಕೇಂದ್ರ ನೀಡದ್ದಿದರು, ಸಾರಿಗೆ ವ್ಯವಸ್ಥೆಯನ್ನಾದರು ಮಾಡಿಕೊಟ್ಟರೆ ಮತ ಚಲಾಯಿಸಲು ಸಹಕಾರಿಯಾಗುತ್ತದೆ. ಚುನವಣಾಧಿಕಾರಿಗಳು ಈ ಬಗ್ಗೆ ಗಮನ ನೀಡಿದರೆ, ಮುಂದಿನ ವಿಧಾನ ಸಭೆ ಚುನಾವಣೆಗೆ ನಮ್ಮ ಊರಿನ ಜನ ಮತ ಚಲಾಯಿಸುವಂತೆ ಅಗುತ್ತದೆ.  – ಊರಿನ ಸಾರ್ವಜನಿಕ ಜಯಣ್ಣ

ಮತಗಟ್ಟೆ ಸ್ಥಾಪನೆಗೆ ಕನಿಷ್ಟ 1500 ಮತಗಳಿರಬೇಕು. ಮಾಲೂರು ಗ್ರಾಮದಲ್ಲಿ 350 ಮತಗಳಿವೆ. 3 ಕಿಮೀ ದೂರ ಮತಗಟ್ಟೆ ಇದೆ. ಆಯೋಗ ಅನುಮತಿ ನೀಡಿದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮತಗಟ್ಟೆ ಸ್ಥಾಪಿಸಲು ಸಿದ್ದ.  -ಟಿ. ಜಗದೀಶ್ ತಹಸೀಲ್ದಾರ ಕೂಡ್ಲಿಗಿ

 ಐಶ್ವರ್ಯಾ ಕೋಣನ, ವಿಜಯಪುರ 

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:38 pm, Wed, 4 January 23

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ