ಸಾವಯವ ಅಡಿಕೆ ಕೃಷಿ: ಶಿರಸಿ ಮತ್ತು ಮಲೆನಾಡಿನಲ್ಲಿ ಪ್ರವೃತ್ತಿಗಳು

| Updated By: ಅಕ್ಷತಾ ವರ್ಕಾಡಿ

Updated on: Nov 23, 2024 | 4:48 PM

ಶಿರಸಿ ಮತ್ತು ಮಲೆನಾಡಿನ ಅಡಿಕೆ ಬೆಳೆಗಾರರು ಹೆಚ್ಚುತ್ತಿರುವ ರಾಸಾಯನಿಕ ಬಳಕೆಯಿಂದಾಗಿ ಸಾವಯವ ಅಡಿಕೆ ಕೃಷಿಯ ಅಗತ್ಯವನ್ನು ಅರಿಯುತ್ತಿದ್ದಾರೆ. ಗರಿಷ್ಠ ದರ, ಗರಿಷ್ಠ ಬೆಳೆ ಪಡೆಯುವ ಒತ್ತಡದಲ್ಲಿ ರೈತರು ರಾಸಾಯನಿಕಗಳನ್ನು ಅತಿಯಾಗಿ ಬಳಸುತ್ತಿದ್ದಾರೆ. ಇದರಿಂದ ಅಡಿಕೆಯ ಗುಣಮಟ್ಟ ಕುಸಿಯುತ್ತಿದೆ ಮತ್ತು ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಸಾವಯವ ಅಡಿಕೆ ಕೃಷಿ ಭವಿಷ್ಯದಲ್ಲಿ ಅನಿವಾರ್ಯವಾಗಿದೆ.

ಸಾವಯವ ಅಡಿಕೆ ಕೃಷಿ: ಶಿರಸಿ ಮತ್ತು ಮಲೆನಾಡಿನಲ್ಲಿ ಪ್ರವೃತ್ತಿಗಳು
Organic arecanut
Follow us on

ಸಾವಯವ ಅಡಿಕೆ ಎಂಬ ಶಬ್ದ ಕೇಳಿದ ಕೂಡಲೇ ಶಿರಸಿ ಮತ್ತು ಮಲೆನಾಡು ಭಾಗದ ರೈತರಿಗೆ ಆಶ್ಚರ್ಯ ಅನ್ನಿಸುತ್ತದೆ. ಸಾವಯವ ಆರ್ಗನಿಕ್ ಶಬ್ದ ಸಾಫ್ಟ್ವೇರ್ ಇಂಜಿನಿಯರ್ ಗಳಲ್ಲಿ ಬೆಂಗಳೂರು ತಲುಪಿದವರಿಗೆ ಅತ್ಯಂತ ಪ್ರಿಯ ಶಬ್ದ. ಅಡಿಕೆಗೂ ಸಾವಯುವ ಬಂತಾ ಎಂಬ ಪ್ರಶ್ನೆ ಅವರದ್ದಾಗಿರುತ್ತದೆ.

ಹೌದು ಖಂಡಿತವಾಗಿಯೂ ಸಾವಯವ ಅಡಿಕೆ ಮುಂದೊಂದು ದಿನ ಎಲ್ಲ ಬೆಳೆಗಾರರಿಗೂ ಕಣ್ಣು ತೆರೆಸಲಿದೆ. ಸಾಮಾನ್ಯವಾಗಿ ಸಾವಯವ ಅಂದರೆ ಸಾಮಾನ್ಯ ಅರ್ಥದಲ್ಲಿ ರಾಸಾಯನಿಕ ಗಳ ಉಪಯೋಗ ಇಲ್ಲದೆ ಬೆಳೆದಂತಹ ಬೆಳೆ ಎಂದು ಅರ್ಥ. ಇದು ಮುಂದೊಂದು ದಿನ ಅಡಿಕೆಗೂ ಬರಲಿದೆ, ಯಾಕೆಂದರೆ ರಾಸಾಯನಿಕಗಳ ಬಳಕೆ ಗರಿಷ್ಠ ತಲುಪಿದಾಗ ಸಾವಯವ ಅಡಿಕೆ ಹೇಳುವಂತಹ ಒಂದು ವಾದ ಬರುತ್ತದೆ. ಅಡಿಕೆಯ ದರ ಈಗ ಗರಿಷ್ಠ ಇದೆ ಎನ್ನಬಹುದು. ಗರಿಷ್ಠ ದರ ,ಗರಿಷ್ಠ ಬೆಳೆ, ಕನಿಷ್ಠ ವೇಳೆ, ಬಣ್ಣ ಹೇಳುವಂಥ ವಾದಗಳ ಮಧ್ಯ ಅಡಿಕೆ ತನ್ನ ಮಾನವನ್ನ ಹರಾಜು ಮಾಡಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಗರಿಷ್ಠ ದರ:

ಬಹಳಷ್ಟು ಜನರಿಗೆ ಗರಿಷ್ಠ ದರ ಅಂದರೆ ಏನು ಅಂತ ಪ್ರಶ್ನೆ ಬೀರಬಹುದು ಅಡಿಕೆಯ ಯಾವುದೇ ಭಾಗವೂ ಕೂಡ ದರರಹಿತವಾಗಿ ಮಾರಾಟ ಆಗೋದಿಲ್ಲ, ಉತ್ತಮ ದರ್ಜೆಯ ಅಡಿಕೆಯಿಂದ ಹಿಡಿದು ಕೊಳೆಯಡಿಕೆಯವರೆಗೂ ಎಲ್ಲವೂ ಖರೀದಿದಾರರಿದ್ದಾರೆ ಹಾಗೂ ಮಾರಾಟ ಮಾಡುವವರಿಂದಲೂ ಮಾರಾಟವಾಗುತ್ತದೆ.

ಗರಿಷ್ಠ ಬೆಳೆ:

ವರ್ಷದಲ್ಲಿ ಒಂದೇ ಬೆಳೆ ಬರುವ ಅಡಿಕೆ ರೈತನಿಗೆ ಜೀವನಾಡಿಯಾಗಿದೆ ಹಾಗಾಗಿ ಗರಿಷ್ಠ ಬೆಳೆ ಬರಬೇಕೆಂಬ ಹಾಗೂ ಬಂದಂತಹ ಬೆಳೆ ಉಳಿಯಬೇಕೆಂಬ ಪ್ರತಿಯೊಂದು ಪ್ರಯತ್ನವನ್ನು ಮಾಡಲು ಅವನು ಹಿಂಜರಿಯುವುದಿಲ್ಲ.ಈ ಪ್ರಕ್ರಿಯೆಯಲ್ಲಿ ಬೋರ್ಡೂ ಮಿಶ್ರಣವನ್ನು ಅಡಿಕೆಗೆ ಸಿಂಪಡಿಸಲಾಗುತ್ತದೆ . ಕೆಲವು ತೋಟಗಾರಿಕಾ ಮತ್ತು ಕೃಷಿ ತಜ್ಞರ ಪ್ರಕಾರ ಇದು 1% ಆಗುವಂತೆ ಸಿಂಪಡಿಸಬೇಕು. 1% -5% ತಲುಪಬಹುದು ಎಂದು ಕೆಲವರು ಅನುಮಾನಿಸುತ್ತಿದ್ದಾರೆ. ಇನ್ನು ಉತ್ತಮ ದರ್ಜೆಯ ಬೋರ್ಡೂ ಮಿಶ್ರಣವಾದರೆ 45 ದಿನಗಳ ಕಾಲ ಇದರ ಪ್ರಭಾವ ಇರುತ್ತದೆ ಎಂದು ವಾಡಿಕೆಯ ತಿಳುವಳಿಕೆ. ಈ ದರ್ಜೆಯ ಇಳಿಕೆಯಿಂದಾಗಿ ಇದರ ಪ್ರಭಾವದ ದಿನಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳ ಅಭಿಪ್ರಾಯ. ಮಾರ್ಚ್ ತಿಂಗಳಲ್ಲಿ ಉಪಯೋಗಿಸುವ ರಾಸಾಯನಿಕಗಳು ಬೇರೆ ಇವೆ.

ಕನಿಷ್ಠ ವೇಳೆ:

ಹಸಿ ಅಡಿಕೆಯಿಂದ ಹಿಡಿದು ಪೂರ್ಣ ಪ್ರಮಾಣದಲ್ಲಿ ಪ್ರಕ್ರಿಯೆ ಮಾಡದಂತಹ ಅಡಿಕೆಯ ಖರೀದಿ ಆಗುತ್ತದೆ . ಖರೀದಿಸಿದ ವ್ಯಾಪಾರಸ್ಥರು ಅಡಿಕೆಗೆ ಆದಷ್ಟು ಬೇಗ ಪೇಟೆಗೆ ಪೂರ್ಣ ಪ್ರಮಾಣದಲ್ಲಿ ಮಾರಾಟಕ್ಕೆ ತರಲು ಯಾವ ಯಾವ ಪ್ರಯತ್ನ ಗಳಿವೆಯೋ ಅದನ್ನು ಪೂರ್ಣಗೊಳಿಸಿ ಕನಿಷ್ಠ ವೇಳೆಯಲ್ಲಿ ಪೇಟೆಗೆ ಮಾರಾಟಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಅಂದರೆ ಆದಷ್ಟು ಬೇಗನೆ ಒಣಗಲು ಕೆಲವು ಕಳೆನಾಶಕಗಳನ್ನು ಬಳಸುತ್ತಾರೆ ಎಂದು ಸುದ್ದಿ ಇದೆ.

ಸುಂದರತೆ ಮತ್ತು ಬಣ್ಣ:

ಅಡಿಕೆಯನ್ನು ವ್ಯಾಪಾರಸ್ಥರು ಚಲನಚಿತ್ರದ ನಾಯಕ ನಟಿಯಂತೆ ಅಡಿಕೆಯನ್ನು ವರ್ಣಿಸುತ್ತಾರೆ ಯಾವ ಪರಿಸ್ಥಿತಿಗೆ ಯಾವ ದೃಶ್ಯಕ್ಕೆ ಹೇಗೆ ನಾಯಕನಟಿಯನ್ನು ರೂಪಿಸಲಾಗುತ್ತಿದೆ ಅದೇ ರೀತಿ ಯಾವ ಭಾಗದಲ್ಲಿ ಯಾವ ಖರೀದಿದಾರರಿಂದ ಹೇಗೆ ಬೇಡಿಕೆ ಇರುತ್ತದೆ ಆ ರೀತಿ ಬಣ್ಣಗೊಳಿಸಲಾಗುತ್ತದೆ. ಬಣ್ಣಗೊಳಿಸುವ ಪ್ರಕ್ರಿಯೆಯಲ್ಲಿ ರಾಸಾಯನಿಕ ಬಣ್ಣಗಳನ್ನು ಕೂಡ ಬಳಸಲಾಗುತ್ತದೆ ಎಂದು ಕೇಳಿದ್ದೇನೆ. ಪಾರಂಪರಿಕವಾಗಿ ಅಡಿಕೆಯ ಜೋಗರು ಅಥವಾ ತೊಗರಿಂದಲೇ ಹೆಚ್ಚಿನ ಬಣ್ಣ ಬರುವಂತೆ ಮಾಡಲಾಗುತ್ತಿತ್ತು ಅಂತಹ ಕೆಲವೇ ಕೆಲವು ವ್ಯಾಪಾರಸ್ಥರು ಈಗ ಇದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ಕೊಳೆಯಡಿಕೆಯೆಂದು ಹೇಳಲ್ಪಡುವಂತಹ ಅತ್ಯಂತ ಕೊಳೆ ಅಡಿಕೆಯು ಹೆಚ್ಚಿನ ಮಾನದಲ್ಲಿ ವ್ಯಾಪಾರ ಆಗುತ್ತದೆ. ಅಡಿಕೆ ಬಣ್ಣಕ್ಕೆ ಬಣ್ಣ ಬರುವಂತಹ ರೆಡ್ಡಒಕ್ಸಾಯಿಡನ ಉಪಯೋಗ ನಡೆಯುತ್ತದೆಯೋ ಎಂಬ ಅನುಮಾನ ಹಲವರಿಂದ.

ಮೇಲ್ಕಂಡ ವಿಷಯಗಳ ಜೊತೆಗೆ ಪಾರಂಪರಿಕ ಅಡಿಕೆ ಬೆಳೆಗಾರರಿಂದ ಅಡಿಕೆ ಬೆಳೆಯುವ ತೋಟಗಳು ಪಾರಂಪರಿಕ ಅಡಿಕೆಬೆಳೆಗಾರರಲ್ಲದವರಿಂದ ಖರೀದಿಯಾಗುತ್ತಿರುವುದು, ಹಣದ ನಿವೇಶಕ್ಕಾಗಿ ಕೃಷಿ ಭೂಮಿ ಖರೀದಿಯಾಗುತ್ತಿರುವುದು ಕಾರಣ.
ಅಡಿಕೆ ವ್ಯವಹಾರಕ್ಕೂ ದೇಶ ಮೊದಲು ಎಂಬ ಮಾನಸಿಕತೆಯ ಅವಶ್ಯಕತೆ ಇಂದು ತೀವ್ರವಾಗಿದೆ, ತೆರಿಗೆ ತಪ್ಪಿಸಿ ನಡೆಯುವ ಅಡಿಕೆ ವ್ಯವಹಾರ ನಿಲ್ಲಬೇಕೆಂದು ಕೆಲವು ಪಾರಂಪರಿಕ ಅಡಿಕೆ ವ್ಯಾಪಾರಸ್ಥರು ಮುಖ್ಯವಾಗಿ ನೀಡುವ ಕಾರಣವಾಗಿದೆ

ಇದೇ ರೀತಿ ಮುಂದುವರೆದರೆ ಈಗೀರುವ ದರ ಇರುವಂತಹ ಅಡಿಕೆ ಪಾತಾಳಕ್ಕೆ ಮುಟ್ಟಲು ಬಹಳ ದಿನ ದೂರವಿಲ್ಲ.ಈ ಜಾಗೃತೆಯನ್ನು ಬೆಳೆಗಾರರು, ಖರೀದಿದಾರರು ಗಮನದಲ್ಲಿ ಇರಿಸಿ ಅಡಿಕೆಯ ಮಾನಕ್ಕೆ ಮಾನ ಬರುವಂತೆ ಯೋಚಿಸುವ ಯೋಜಿಸುವ ಅವಶ್ಯಕತೆ ಅಡಿಕೆ ಬೆಳೆಗಾರ ರೈತರು ವ್ಯಾಪಾರಸ್ಥರು ಹಾಗೂ ಅಡಿಕೆಯ ಸಂಬಂಧಿತ ಸಂಸ್ಥೆಗಳ ಹೆಗಲ ಮೇಲಿದೆ ಎಂಬ ಅಭಿಪ್ರಾಯ ಕೆಲವು ಬುದ್ಧಿ ಜೀವಿಗಳದ್ದು.

ಕೊನೆಯ ಮಾತು ಗರಿಷ್ಠ ದರ ,ಗರಿಷ್ಠ ಬೆಳೆ, ಕನಿಷ್ಠ ವೇಳೆ,ಸುಂದರತೆ ಮತ್ತು ಬಣ್ಣ ಇವೆಲ್ಲವುಗಳ ಗಡಿಬಿಡಿ ಯ ಮಧ್ಯ ಅಡಿಕೆ ತನ್ನ ಸಾವಯವತೆಯನ್ನು ಕಳೆದುಕೊಳ್ಳುತ್ತಿದೆಯೋ ಎಂಬ ಅನುಮಾನ ಹಲವರಿಂದ,ಬೋರ್ಡೂ ಮಿಶ್ರಣ, ಕಳೆನಾಶಕ,ರೆಡ್ಡಒಕ್ಸಾಯಿಡ ಇನ್ನಿತರ ರಾಸಾಯನಿಕಗಳಿಂದ ಅಡಿಕೆಯ ಮಾನ ಮುಂದೊಂದು ದಿನ ಹರಾಜು ಆಗಬಹುದೇ ಎಂಬ ಪ್ರಶ್ನೆ ಕೆಲವು ಅಡಿಕೆ ಬೆಳೆಗಾರರಲ್ಲಿ.

ಈ ಎಲ್ಲಾ ಅಂಶಗಳ ಉಪಯೋಗವನ್ನು ಗರಿಷ್ಠ ಮಿತಿಯಲ್ಲಿ ಮಾಡಿದರೆ ಮೊನ್ನೆ ಮೊನ್ನೆ ವಿಶ್ವಸಂಸ್ಥೆಯಿಂದ ಬಂದಂತಹ ವರದಿಯಂತೆ ಸತ್ಯವೂ ಆಗಬಹುದು. ಅಂದರೆ ಅಡಿಕೆಯಿಂದ ಕ್ಯಾನ್ಸರ್ ಬರಬಹುದು ಎಂಬ ವರದಿ ಏನಿದೆ, ಅದು . ಅಂದರೆ ಪಾರಂಪರಿಕ ಅಡಿಕೆ ಕೃಷಿ, ಪಾರಂಪರಿಕ ಅಡಿಕೆ ರೈತ ಪ್ರದೇಶದ ವನ್ನು ಬಿಟ್ಟು ಆಧುನಿಕ, ಹೊಸ ರಾಸಾಯನಿಕಗಳಿಂದ ಕೂಡಿದ ತಂತ್ರಜ್ಞಾನದ ಮೂಲಕ ಅಡಿಕೆಯ ಕೃಷಿ ಅಡಿಕೆಯ ಮಾನ ಹರಾಜು ಹಾಕುವುದರಲ್ಲಿ ಅನುಮಾನವೇ ಇಲ್ಲ.

ಇನ್ನೂ ಕೆಲವರ ಅಭಿಪ್ರಾಯದಂತೆ ಹಸಿ ಅಡಿಕೆ ಟೆಂಡರ್, ಫಲ ಗುತ್ತಿಗೆ ಖರೀದಿದಾರರು, ಕೆಲವು ರೈತರು
ತುರ್ತಾಗಿ ಪೂರ್ಣ ಪ್ರಮಾಣದಲ್ಲಿ ಅಡಿಕೆ ಮಾರುಕಟ್ಟೆಗೆ ತರುವ ಮತ್ತು ಬರುವ ಪ್ರಕ್ರಿಯೆ ಪೂರ್ಣಗೊಳಿಸುವ ಗಡಿಬಿಡಿಯಲ್ಲಿ ಈ ಎಲ್ಲಾ ವಾಮ ಮಾರ್ಗದ ಉಪಾಯಗಳನ್ನ ಬಳಸುತ್ತಾರೆ ಎಂಬ ಅನಿಸಿಕೆ ಇನ್ನೂ ಕೆಲವು ಪಾರಂಪರಿಕ ಬೆಳಗಾರರದ್ದು.

ಇನ್ನೂ ಕೆಲವು ರೈತರ ಅಭಿಪ್ರಾಯದಂತೆ ದೋಟಿ ಪ್ರಯೋಗವು ಇದಕ್ಕೆ ಮುಂದೊಂದು ದಿನ ಕಾರಣವಾಗಬಹುದು ಎಂದು ಮತ್ತು ದೋಟಿಯಿಂದ ಬೋರ್ಡೋ ಮಿಶ್ರಣವನ್ನು ಸಿಂಪಡಣೆ ಮಾಡುವಾಗ ಗಿಡ ಹಾಗೂ ಗೊನೆಯನ್ನು ಬಿಟ್ಟು ಸಿಂಪಡಣೆಯ ದ್ರಾವಣ ಕೆಳಗೆ ನೆಲಕ್ಕೆ ಬಂದು ಮಣ್ಣಿಗೆ ಸೇರುತ್ತದೆ . ಇದು ಕೂಡ ಮುಂದೊಂದು ದಿನ ಮಣ್ಣಿನಲ್ಲಿರುವ ಬೋರ್ಡೋ ದ್ರಾವಣದ ಅಂಶವನ್ನು ಹೆಚ್ಚು ಎಂದು ಹೇಳುವಂತೆ ಮಾಡಬಹುದು ‌. ಮುಂದೊಂದು ದಿನ ಹೊಸ ವಿಶ್ವಸಂಸ್ಥೆಯ ವರದಿಗೆ ಇದು ಕೂಡ ಗ್ರಾಸವಾಗಬಹುದು.

ಪಾರಂಪರಿಕ ಅಡಿಕೆ ಬೆಳೆಗಾರರ ಹಿತ ದೃಷ್ಟಿಯಿಂದ ಮಾರಾಟದ ಮೊದಲು ಅಡಿಕೆಯ ರಾಸಾಯನಿಕ ವಿಶ್ಲೇಷಣೆ ಮುಂದೊಂದು ದಿನ ಕಡ್ಡಾಯವಾಗಬಹುದು. ದೇವರ ಪೂಜೆಯಲ್ಲಿ ಪೂಗಿ ಫಲ ಎಂದು ಹೇಳಲ್ಪಡುವಂತಹ ಅಡಿಕೆಗೆ ಕ್ಯಾನ್ಸರ್ ಕಾರಕ ಎನ್ನುವ ಪ್ರಶಸ್ತಿಯಿಂದ ಆದಷ್ಟು ಬೇಗನೆ ಮುಕ್ತಗೊಳಿಸುವ ಎಲ್ಲ ಪ್ರಯತ್ನವನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಅಡಿಕೆಯ ಸಹಕಾರಿ ಸಂಸ್ಥೆಗಳು ಪ್ರಯತ್ನಪೂರ್ವಕ ಮಾಡಬೇಕಿದೆ. ಆ ಮೂಲಕ ಪಾರಂಪರಿಕ ಅಡಿಕೆ ಬೆಳೆಗಾರ ರೈತರ ರಕ್ಷಣೆಗೆ ಮುಂದಾಗಬೇಕಿದೆ.

ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ

Published On - 4:41 pm, Sat, 23 November 24