ಗ್ಲೋಬಲ್ ಸೌತ್: ಭಾರತ ಕೇಂದ್ರಿತ ದೃಷ್ಟಿಯೊಡನೆ ಸವಾಲುಗಳು, ಅವಕಾಶಗಳು ಮತ್ತು ಬದಲಾಗುತ್ತಿರುವ ಆಯಾಮಗಳು

Global South; ‘ಗ್ಲೋಬಲ್ ಸೌತ್' ಎಂಬ ಪದ ಶೀತಲ ಸಮರದ ಅವಧಿಯಲ್ಲಿ ಬಳಕೆಗೆ ಬಂತು. ಗ್ಲೋಬಲ್ ಸೌತ್ ಎನ್ನುವುದು ಔದ್ಯಮೀಕರಣಗೊಂಡ, ಉತ್ತರಾರ್ಧ ಗೋಳದ ರಾಷ್ಟ್ರಗಳು ಮತ್ತು ದಕ್ಷಿಣಾರ್ಧ ಗೋಳದ ಅಭಿವೃದ್ಧಿಶೀಲ ರಾಷ್ಟ್ರಗಳ ನಡುವಿನ ಆರ್ಥಿಕ ಅಸಮಾನತೆಯನ್ನು ಸೂಚಿಸುತ್ತಿತ್ತು. ಇನ್ನಷ್ಟು ವಿವರಗಳಿಗೆ ಲೇಖನ ಓದಿ.

ಗ್ಲೋಬಲ್ ಸೌತ್: ಭಾರತ ಕೇಂದ್ರಿತ ದೃಷ್ಟಿಯೊಡನೆ ಸವಾಲುಗಳು, ಅವಕಾಶಗಳು ಮತ್ತು ಬದಲಾಗುತ್ತಿರುವ ಆಯಾಮಗಳು
ಸಾಂದರ್ಭಿಕ ಚಿತ್ರImage Credit source: tfipost.com
Follow us
TV9 Web
| Updated By: Ganapathi Sharma

Updated on: Sep 06, 2023 | 4:04 PM

ಅಪಾರ ಪ್ರಮಾಣದ ಜನಸಂಖ್ಯೆ ಹೊಂದಿರುವ, ಬೆಳೆಯುತ್ತಿರುವ ಆರ್ಥಿಕ ಶಕ್ತಿಗಳನ್ನು ಒಳಗೊಂಡಿರುವ ಗ್ಲೋಬಲ್ ಸೌತ್ (Global South), ಪ್ರಸ್ತುತ ಪಾಶ್ಚಾತ್ಯ ಜಗತ್ತಿನ ನೇತೃತ್ವದ ಜಾಗತಿಕ ವ್ಯವಸ್ಥೆಗೆ ಸವಾಲಾಗುವ ಮಟ್ಟಿನ ಸಾಮರ್ಥ್ಯ ಗಳಿಸಿಕೊಂಡಿದೆ. ಸೋವಿಯತ್ ಒಕ್ಕೂಟದ ನೇತೃತ್ವದ ಬ್ಲಾಕ್ (Bloc) 1991ರಲ್ಲಿ ವಿಸರ್ಜನೆಯಾದ ಬಳಿಕ, 2000ನೇ ದಶಕದ ಕೊನೆಯ ಭಾಗದಲ್ಲಿ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ರಾಷ್ಟ್ರಗಳ ಉದಯ ಪ್ರಸ್ತುತ ಜಾಗತಿಕ ಚಿತ್ರಣದಲ್ಲಿ ಗ್ಲೋಬಲ್ ಸೌತ್ ಮಹತ್ವದ ಕುರಿತ ಚರ್ಚೆಗಳನ್ನು ಹುಟ್ಟುಹಾಕಿತು.

ಆದರೆ, ಇತ್ತೀಚಿನ ಉಕ್ರೇನ್ ಸಮರದಂತಹ ಘಟನೆಗಳು ಗ್ಲೋಬಲ್ ಸೌತ್ ಮಹತ್ವವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಸಾರಿವೆ. ಈ ರಾಷ್ಟ್ರಗಳು ರಷ್ಯಾ ಜೊತೆಗಿನ ಆರ್ಥಿಕ ಬಂಧಗಳನ್ನು ಕತ್ತರಿಸಲು ಹಿಂದೇಟು ಹಾಕಿದ್ದು, ರಷ್ಯಾ ಮೇಲೆ ನಿರ್ಬಂಧಗಳನ್ನು ಹೇರಲೂ ನಿರಾಕರಿಸಿವೆ. ಆ ಮೂಲಕ ಜಾಗತಿಕ ವಿಚಾರಗಳಲ್ಲಿ ತಮ್ಮದು ಸ್ವಾಯತ್ತ ನಿಲುವು ಎಂದು ಸ್ಪಷ್ಟಪಡಿಸಿವೆ.

ಏನಿದು ಗ್ಲೋಬಲ್ ಸೌತ್?

‘ಗ್ಲೋಬಲ್ ಸೌತ್’ ಎಂಬ ಪದ ಶೀತಲ ಸಮರದ ಅವಧಿಯಲ್ಲಿ ಬಳಕೆಗೆ ಬಂತು. ಗ್ಲೋಬಲ್ ಸೌತ್ ಎನ್ನುವುದು ಔದ್ಯಮೀಕರಣಗೊಂಡ, ಉತ್ತರಾರ್ಧ ಗೋಳದ ರಾಷ್ಟ್ರಗಳು ಮತ್ತು ದಕ್ಷಿಣಾರ್ಧ ಗೋಳದ ಅಭಿವೃದ್ಧಿಶೀಲ ರಾಷ್ಟ್ರಗಳ ನಡುವಿನ ಆರ್ಥಿಕ ಅಸಮಾನತೆಯನ್ನು ಸೂಚಿಸುತ್ತಿತ್ತು.

1969ರಲ್ಲಿ, ಕಾರ್ಲ್ ಒಗ್ಲೆಸ್ಬಿ ಎಂಬಾತ ‘ಗ್ಲೋಬಲ್ ಸೌತ್’ ಎಂಬ ಪದವನ್ನು ಬಳಸಿ, ವಿಯೆಟ್ನಾಂ ಯುದ್ಧ ಮತ್ತು ಶತಮಾನಗಳ ಕಾಲ ಉತ್ತರ ಗೋಳಾರ್ಧದ ರಾಷ್ಟ್ರಗಳು ನಡೆಸಿದ ಶೋಷಣೆಯನ್ನು ವಿವರಿಸಿದ್ದ.

ಗ್ಲೋಬಲ್ ಸೌತ್ ರಾಷ್ಟ್ರ ಎನಿಸಿಕೊಳ್ಳುವುದರ ಕಾರಣಗಳು:

1. ಹೆಚ್ಚಿನ ನವಜಾತ ಶಿಶು ಮರಣ ದರ. 2. ಕಡಿಮೆ ಜೀವಿತಾವಧಿ. 3. ಉತ್ತಮ ಗುಣಮಟ್ಟದ ಶಿಕ್ಷಣದ ಕೊರತೆ.

ಬಡತನ ಇಂದಿಗೂ ಒಂದು ದೊಡ್ಡ ಅಡ್ಡಿಯಾಗಿದ್ದು, ಉತ್ತಮ ಜೀವನದ ಹುಡುಕಾಟ ನಡೆಸುತ್ತಾ ಜನರು ವಲಸೆ ಹೋಗುವುದು ಹೆಚ್ಚಾಗಿದೆ. ಅದಲ್ಲದೆ, ಗ್ಲೋಬಲ್ ಸೌತ್ ರಾಷ್ಟ್ರಗಳು ತ್ಯಾಜ್ಯ ಮತ್ತು ಮಾಲಿನ್ಯದಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ. ದುರದೃಷ್ಟವಶಾತ್, ಈ ಸಮಸ್ಯೆಗಳ ಮೂಲ ಶ್ರೀಮಂತ ರಾಷ್ಟ್ರಗಳೇ ಆಗಿವೆ.

ಗ್ಲೋಬಲ್ ಸೌತ್ ನಕಾಶೆ

ಗ್ಲೋಬಲ್ ಸೌತ್ ಎನ್ನುವುದು ದೊಡ್ಡ ಪ್ರಮಾಣದ ಭೂ ಪ್ರದೇಶವನ್ನು ಒಳಗೊಂಡಿದ್ದು, ಮೆಕ್ಸಿಕೊ, ಕೆರಿಬಿಯನ್, ದಕ್ಷಿಣ ಅಮೆರಿಕಾ, ಆಪ್ರಿಕಾ, ಮಧ್ಯಪೂರ್ವ, ಹಾಗೂ ಏಷ್ಯಾದ ಭೂಭಾಗಗಳನ್ನು ಒಳಗೊಂಡಿದೆ.

ಗ್ಲೋಬಲ್ ಸೌತ್ ಜಾಗತಿಕ ಜನಸಂಖ್ಯೆಯ 85%ಕ್ಕೂ ಹೆಚ್ಚಿನ ಪಾಲು ಹೊಂದಿದ್ದರೂ, ಜಾಗತಿಕ ಜಿಡಿಪಿಗೆ ಇದರ ಕೊಡುಗೆ ಬಹುತೇಕ 40% ಅಷ್ಟೇ ಆಗಿದೆ.

ಚೀನಾ ಮತ್ತು ಟರ್ಕಿಯಂತಹ ರಾಷ್ಟ್ರಗಳು ಇಂದು ಆರ್ಥಿಕವಾಗಿ ಪ್ರಬಲವಾದರೂ, ತಮ್ಮನ್ನು ತಾವು ಗ್ಲೋಬಲ್ ಸೌತ್ ಭಾಗ ಎಂದೇ ಪರಿಗಣಿಸುತ್ತವೆ. ಅವುಗಳು ಪಾಶ್ಚಾತ್ಯ ರಾಷ್ಟ್ರಗಳ ವಸಾಹತುಶಾಹಿ ಇತಿಹಾಸದೊಡನೆ ತಮ್ಮನ್ನು ತಾವು ಗುರುತಿಸಿಕೊಳ್ಳದಿರಲು, ಜೊತೆಯಾಗಿ ಕಾರ್ಯಾಚರಿಸುವ ಮೂಲಕ ನೂತನ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳನ್ನು ಹೊಂದಲು ಈ ಕ್ರಮ ಕೈಗೊಂಡಿವೆ.

ಗ್ಲೋಬಲ್ ಸೌತ್ ಸಮಾವೇಶ – ವಾಯ್ಸ್ ಆಫ್ ದ ಗ್ಲೋಬಲ್ ಸೌತ್ ಸಮ್ಮಿಟ್

ಜನವರಿ 2023ರಲ್ಲಿ, ಭಾರತ ಮೊತ್ತಮೊದಲ ‘ವಾಯ್ಸ್ ಆಫ್ ದ ಗ್ಲೋಬಲ್ ಸೌತ್ ಸಮ್ಮಿಟ್’ ಎಂಬ ಸಮಾವೇಶವನ್ನು ಆಯೋಜಿಸಿ, ಅಭಿವೃದ್ಧಿಶೀಲ ದೇಶಗಳಿಗೆ ಅವುಗಳ ಸಾಮಾನ್ಯ ಸಮಸ್ಯೆಗಳು ಮತ್ತು ಆದ್ಯತೆಗಳನ್ನು ಚರ್ಚಿಸಲು ಅವಕಾಶ ಮಾಡಿಕೊಟ್ಟಿತು. 125ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದ ಈ ಆನ್‌ಲೈನ್ ಸಮಾವೇಶ, ಅಭಿವೃದ್ಧಿಶೀಲ ಜಗತ್ತಿನ ನಾಯಕರು, ಸಚಿವರು ಭಾಗವಹಿಸಿದ ಅತಿದೊಡ್ಡ ಡಿಜಿಟಲ್ ಸಮಾವೇಶವಾಗಿತ್ತು.

ವಾಯ್ಸ್ ಆಫ್ ದ ಗ್ಲೋಬಲ್ ಸೌತ್ ಸಮಾವೇಶ 1961ರ ಅಲಿಪ್ತ ಚಳುವಳಿಯ ರೀತಿಯಲ್ಲೇ ದಕ್ಷಿಣ ಗೋಳಾರ್ಧದ ರಾಷ್ಟ್ರಗಳನ್ನು ಜೊತೆಯಾಗಿಸುವ ಉದ್ದೇಶ ಹೊಂದಿದೆ. ಇದು ಗ್ಲೋಬಲ್ ಸೌತ್ ದೇಶಗಳನ್ನು ಜೊತೆಯಾಗಿಸಿ, ಆ ಮೂಲಕ ಅಧಿಕಾರವನ್ನು ಹಲವು ರಾಷ್ಟ್ರಗಳು ಹಂಚಿಕೊಳ್ಳುವಂತೆ ಮಾಡುವ ಗುರಿ ಹೊಂದಿದೆ.

ಗ್ಲೋಬಲ್ ಸೌತ್ ಭವಿಷ್ಯವೇನು?

ರಷ್ಯಾದೊಡನೆ, ಗ್ಲೋಬಲ್ ಸೌತ್‌ನ ನಾಲ್ಕು ರಾಷ್ಟ್ರಗಳಾದ ಬ್ರೆಜಿಲ್, ಚೀನಾ, ಭಾರತ ಮತ್ತು ದಕ್ಷಿಣ ಆಫ್ರಿಕಾಗಳನ್ನು ಒಳಗೊಂಡ ಗ್ಲೋಬಲ್ ಸೌತ್, ಗ್ಲೋಬಲ್ ನಾರ್ತ್ ಮತ್ತು ಗ್ಲೋಬಲ್ ಸೌತ್ ನಡುವಿನ ಸಮಾಜೋ ಆರ್ಥಿಕ ಅಸಮಾನತೆಗಳನ್ನು ಎದುರಿಸುವ ಆಶಾಭಾವನೆ ಮೂಡಿಸಿದೆ. ಈ ರಾಷ್ಟ್ರಗಳು ಪಾಶ್ಚಾತ್ಯ ಮೇಲುಗೈ ಹೊಂದಿರುವ ಸಂಸ್ಥೆಗಳು ಮತ್ತು ಒಕ್ಕೂಟಗಳ ಹೊರಗಿನ ಆಯ್ಕೆಗಳನ್ನು ಎದುರು ನೋಡುತ್ತಿದ್ದು, ಇದರ ಪರಿಣಾಮವಾಗಿ ದಕ್ಷಿಣ ಗೋಳಾರ್ಧದಲ್ಲಿ ಹೆಚ್ಚಿನ ಅಭಿವೃದ್ಧಿ ಮತ್ತು ಸ್ವಾಯತ್ತತೆ ಸಾಧಿಸಲು ಸಾಧ್ಯವಾಗಬಹುದು.

ಹಾಗೆಂದು ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಹಿಂದಿನ ವಸಾಹತುಗಳನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲು ಸಿದ್ಧರಿಲ್ಲ. ಅಭಿವೃದ್ಧಿಶೀಲ ಜಗತ್ತಿನಲ್ಲಿ ಅಧಿಕಾರದ ಬದಲಿ ಮೂಲಗಳು ಹೆಚ್ಚು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿರುವಾಗ, ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಪ್ರಭಾವವನ್ನು ಉಳಿಸಿಕೊಳ್ಳಲು ವಿವಿಧ ಮಾರ್ಗೋಪಾಯಗಳನ್ನು ಬಳಸಬಹುದು.

ಹವಾಮಾನ ಬದಲಾವಣೆ ಗ್ಲೋಬಲ್ ಸೌತ್ ಪಾಲಿನ ದೊಡ್ಡ ತೊಂದರೆಯಾಗಿದೆ. ಈ ದೇಶಗಳು ಹವಾಮಾನದ ವೈಪರೀತ್ಯದ ಅತ್ಯಂತ ಕಠಿಣ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಮುದ್ರ ಮಟ್ಟದ ಏರಿಕೆ, ಕೃಷಿ ನಾಶಗಳೂ ಇದರಲ್ಲಿ ಪ್ರಮುಖವಾಗಿವೆ. ಈ ಪರಿಣಾಮಗಳು ಈಗಾಗಲೇ ತಲೆದೋರಿರುವ ಸಾಮಾಜಿಕ ಮತ್ತು ಆರ್ಥಿಕ ಅಂತರಗಳನ್ನು ಇನ್ನಷ್ಟು ಹೆಚ್ಚಿಸಿ, ಗ್ಲೋಬಲ್ ಸೌತ್ ರಾಷ್ಟ್ರಗಳು ಸಾಧಿಸಿರುವ ಅಭಿವೃದ್ಧಿಗೆ ಹಿನ್ನಡೆ ಉಂಟುಮಾಡಲಿವೆ.

ಇದನ್ನೂ ಓದಿ: ಜಿ20 ಶೃಂಗಸಭೆಗೆ ಭಾರತ ಸನ್ನದ್ಧ: ಪ್ರಮುಖ ವಿಚಾರಗಳು, ರಾಜತಾಂತ್ರಿಕ ಸವಾಲುಗಳೇನು?

ಈ ಸಮಸ್ಯೆಯನ್ನು ಎದುರಿಸಲು, ಗ್ಲೋಬಲ್ ಸೌತ್ ಒಂದಾಗಿ ಕಾರ್ಯಾಚರಿಸಿ, ಹವಾಮಾನ ನ್ಯಾಯಕ್ಕಾಗಿ ಆಗ್ರಹಿಸಬೇಕು. ಸಮಾನ ಪರಿಹಾರಗಳನ್ನು ಆಗ್ರಹಿಸುವುದರಿಂದ ಈ ರಾಷ್ಟ್ರಗಳು ಅವುಗಳಿಗೆ ಮತ್ತು ಭೂಮಿಗೆ ಸುಸ್ಥಿರ ಭವಿಷ್ಯವನ್ನು ಹೊಂದಲು ಸಾಧ್ಯವಿದೆ.

ಗ್ಲೋಬಲ್ ಸೌತ್‌ನಲ್ಲಿ ರಷ್ಯಾದ ಪಾತ್ರ

ರಷ್ಯಾ ನಿರಂತರವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳೊಡನೆ ಸಹಕರಿಸುತ್ತಾ ಬಂದಿದ್ದು, ಅವುಗಳ ಅಭಿವೃದ್ಧಿಗೆ ಪೂರಕವಾಗುವಂತೆ ಸಹಯೋಗಗಳು ಮತ್ತು ಆರ್ಥಿಕ ಸಂಬಂಧಗಳನ್ನು ಹೊಂದಿದೆ. ಬ್ರಿಕ್ಸ್ ರೀತಿಯ ಪ್ರಯತ್ನಗಳ ಮೂಲಕ ಗ್ಲೋಬಲ್ ಸೌತ್ ಜೊತೆ ರಷ್ಯಾ ಹೊಂದಿರುವ ಸಂಬಂಧ, ಅಧಿಕಾರ ಮತ್ತು ಪ್ರಭಾವ ಕೇವಲ ಪಾಶ್ಚಾತ್ಯ ದೇಶಗಳದ್ದು ಮಾತ್ರವಲ್ಲದೆ, ಹಲವು ಪ್ರಮುಖ ರಾಷ್ಟ್ರಗಳ ನಡುವೆ ಹಂಚಿಕೆಯಾಗುವಂತಹ ಜಾಗತಿಕ ಚಿತ್ರಣ ಸೃಷ್ಟಿಯಾಗಬೇಕು ಎಂಬ ದೃಢ ನಿರ್ಧಾರ, ಪ್ರಯತ್ನಗಳನ್ನು ಸಾಬೀತುಪಡಿಸುತ್ತದೆ.

ಗಿರೀಶ್ ಲಿಂಗಣ್ಣ

(ಲೇಖಕರು; ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ