- Kannada News Photo gallery 108 megapixel primary camera phone Realme C53 launching in India tomorrow July 19
Realme C53: 108MP ಕ್ಯಾಮೆರಾದ ಸ್ಮಾರ್ಟ್‌ಫೋನ್ ಬಿಡುಗಡೆಗೆ ಕೇವಲ ಒಂದೇ ದಿನ ಬಾಕಿ: ನಾಳೆ ರಿಯಲ್ ಮಿ C53 ರಿಲೀಸ್
ರಿಯಲ್ ಮಿ ಸಿ53 (Realme C53) ಮೊಬೈಲ್ ಬಿಡುಗಡೆಗೆ ಕೇವಲ ಒಂದೇ ದಿನ ಇರುವಾಗ ಇದರ ಡಿಸೈನ್, ಫೀಚರ್ಸ್ ಕುರಿತ ಕೆಲ ಮಾಹಿತಿ ಸೋರಿಕೆ ಆಗಿದೆ.
Updated on: Jul 18, 2023 | 6:55 AM

ರಿಯಲ್ ಮಿ ಕಂಪನಿ ಒಂದರ ಹಿಂದೆ ಒಂದರಂತೆ ಆಕರ್ಷಕ ಕ್ಯಾಮೆರಾ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಷ್ಟೆ ಬರೋಬ್ಬರಿ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ರಿಯಲ್ ಮಿ 11 ಪ್ರೊ+ ಫೋನನ್ನು ಬಿಡುಗಡೆ ಮಾಡಿತ್ತು. ಇದು ಮಾರುಕಟ್ಟೆಯಲ್ಲಿ ಈಗಲೂ ಟ್ರೆಂಡಿಂಗ್ನಲ್ಲಿದ್ದು ಭರ್ಜರಿ ಸೇಲ್ ಕಾಣುತ್ತಿದೆ.

ಇದೀಗ ಆಕರ್ಷಕ ಕ್ಯಾಮೆರಾ ಇರುವ ಮತ್ತೊಂದು ಮೊಬೈಲ್ ಲಾಂಚ್ ಮಾಡಲು ಮುಂದಾಗಿದೆ. ಭಾರತದಲ್ಲಿ ಜುಲೈ 19 ಕ್ಕೆ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರುವ ರಿಯಲ್ ಮಿ ಸಿ53 (Realme C53) ಮೊಬೈಲ್ ಅನಾವರಣಗೊಳ್ಳಲಿದೆ.

ಈ ಫೋನ್ ಬಿಡುಗಡೆಗೆ ಕೇವಲ ಒಂದೇ ದಿನ ಇರುವಾಗ ಇದರ ಡಿಸೈನ್, ಫೀಚರ್ಸ್ ಕುರಿತ ಕೆಲ ಮಾಹಿತಿ ಸೋರಿಕೆ ಆಗಿದೆ.

ರಿಯಲ್ ಮಿ C53 ಸ್ಮಾರ್ಟ್‌ಫೋನ್ ನೋಡಲು ಥೇಟ್ ರಿಯಲ್ ಮಿ 9i ಫೋನಿನ ರೀತಿಯಲ್ಲೇ ಇದೆ. ಇದು 18W ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯನ್ನು ಒಳಗೊಂಡಿದೆ. USB-C ಚಾರ್ಜಿಂಗ್ ಪೋರ್ಟ್ ಜೊತೆಗೆ, ಆಡಿಯೋ ಫೋನ್ ಜಾಕ್ ಅನ್ನು ಒಳಗೊಂಡಿದೆ.

ಈ ಫೋನಿನ ಬಲಭಾಗದಲ್ಲಿ ಪವರ್ ಬಟನ್ ಜೊತೆಗೆ ವಾಲ್ಯೂಮ್ ಬಟನ್‌ಗಳನ್ನು ನೀಡಲಾಗಿದೆ. ಇದು ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಈ ಫೋನ್ 5G ಬೆಂಬಲ ಪಡೆದುಕೊಂಡಿದೆಯೆ ಎಂಬುದು ಸ್ಪಷ್ಟವಾಗಿಲ್ಲ.

ರಿಯಲ್ ಮಿ C53 ಸ್ಮಾರ್ಟ್ಫೋನ್ನ ಬೆಲೆ ಬಹಿರಂಗವಾಗಿಲ್ಲ. ಆದರೆ, ರಿಯಲ್ ಮಿ C-ಸರಣಿಯ ಹಿಂದಿನ ಫೋನ್ ಲಾಂಚ್‌ಗಳ ಆಧಾರದ ಮೇಲೆ, ರಿಯಲ್ ಮಿ C35 ಬೆಲೆ ಸುಮಾರು 12,000 ರೂಪಾಯಿ ಎಂದು ನಾವು ನಿರೀಕ್ಷಿಸಬಹುದು.

ಇನ್ನು ರಿಯಲ್ ಮಿ C55 ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಹೆಚ್‌ಡಿ + ಎಲ್‌ಡಿಸಿ ಡಿಸ್‌ಪ್ಲೇ ಹೊಂದಿದೆ. ಮೀಡಿಯಾಟೆಕ್ ಹಿಲಿಯೋ G88 ಪ್ರೊಸೆಸರ್ ಅಳವಡಿಸಲಾಗಿದ್ದು, 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಆಯ್ಕೆ ನೀಡಲಾಗಿದೆ. ಹಾಗೆಯೇ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸರ್ ಇದೆ.

ರಿಯಲ್ ಮಿ C55 ಸ್ಮಾರ್ಟ್‌ಫೋನ್ ದೀರ್ಘ ಸಮಯ ಬಾಳಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. 29 ನಿಮಿಷಗಳಲ್ಲಿ ಶೇ. 50 ರಷ್ಟು ಚಾರ್ಜ್ ಆಗುತ್ತದೆ.




