Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​ನಲ್ಲಿ ವಿಶಿಷ್ಟ ನವರಾತ್ರಿ ಆಚರಣೆ; 5 ದಿನ ಅನ್ನ, ನೀರು ಸೇವಿಸದೆ ಕೂತಲ್ಲೇ ಕೂತು ದೇವಿಯ ಧ್ಯಾನ ಮಾಡುವ ಮಹಿಳೆ

ಬೀದರ್​​ ಜಿಲ್ಲೆಯಲ್ಲಿ ನವರಾತ್ರಿ ಹಬ್ಬವನ್ನ ಸ್ವಲ್ಪ ವಿಭಿನ್ನವಾಗಿ ಆಚರಿಸುತ್ತಾರೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ಮಹಿಳೆಯರು ಅನ್ನ, ನೀರು, ತೃಜ್ಜಿಸಿ ದೇವರಿಯ ಆರಾಧನೆಯಲ್ಲಿ ತೊಡಗುತ್ತಾರೆ. ಹಗಲು ರಾತ್ರಿ ಎನ್ನದೆ 5 ದಿನಗಳ ಕಾಲ ಕುಳಿತಲ್ಲೇ ಕುಳಿತು ನಾಡಿಗೆ ಒಳ್ಳೆಯದಾಗಲೆಂದು ಹಾರೈಸುತ್ತಾರೆ. ಹತ್ತಾರು ವರ್ಷಗಳಿಂದ ಈ ಸಂಪ್ರದಾಯ ಇಲ್ಲಿದ್ದು, ನವರಾತ್ರಿ ಸಂದರ್ಭದಲ್ಲಿ ಹೀಗೆ ಕಠೋರ ವೃತ್ತ ಮಾಡೋದರಿಂದ ದೈವ ಶಕ್ತಿ ಒಲೆಯುತ್ತೆ ಎನ್ನುವ ನಂಬಿಕೆ ಇವರಲ್ಲಿದೆ.

ಕಿರಣ್ ಹನುಮಂತ್​ ಮಾದಾರ್
|

Updated on:Oct 10, 2024 | 9:03 PM

 ಬೀದರ್ ಜಿಲ್ಲೆಯಲ್ಲಿ ನವರಾತ್ರಿ ಆಚರಣೆಯನ್ನ ವಿಶೇವಾಗಿ ಆಚರಿಸಲಾಗುತ್ತದೆ. ಬಹುತೇಕ ಭಾಗದಲ್ಲಿ ನವರಾತ್ರಿ ಸಮಯದಲ್ಲಿ ಮಹಿಳೆಯರು ಒಂಬತ್ತು ದಿನಗಳ ಕಾಲ ದೇವರ ಆರಾಧನೆಯಲ್ಲಿ ತೊಡಗುತ್ತಾರೆ. ಅದರಲ್ಲಿಯೂ ವಿಶೇಷವಾಗಿ, ಮಹಿಳೆಯರು ತೊಡೆಯ ಮೇಲೆ ಘಟ ಹಾಕಿಕೊಂಡು ದೇವಿಯ ಗರ್ಭ ಗುಡಿಯ ಕೋಣೆಯಲ್ಲಿ 5 ದಿನಗಳ ಕಾಲ ದೇವಿಯನ್ನ ಆರಾಧಿಸುತ್ತಾ ಕೂರುತ್ತಾರೆ.

1 / 6
ಬೀದರ್ ನಗರದ ಕುಂಬಾರವಾಡಾ ಬಡಾವಣೆಯಲ್ಲಿರುವ ಮಾತಾನ ಕಾಳಿಕಾದೇವಿ ಭವಾನಿ ಮಂದಿರದಲ್ಲಿ ಪುಣ್ಯವಂತಿ ವೈಜನಾಂಥ್ ಕೊಂಡಿಯವರು ಕಾಳಿಕಾದೇವಿಯ ಗರ್ಭಗುಡಿಯಲ್ಲಿ ತಮ್ಮ ಕೈಯಲ್ಲಿ ಬುಟ್ಟಿಹಿಡಿದುಕೊಂಡು (ಘಟ) ಹಿಡಿದುಕೊಂಡು ಕುಳಿತುಕೊಳ್ಳುತ್ತಾರೆ. ಈ ಸಮಯದಲ್ಲಿ ಅವರು ಅನ್ನ, ನೀರು, ಸೇವನೆ ಮಾಡದೆ ಕೇವಲ ಒಂದು ಬಾಳೆ ಹಣ್ಣು, ಸ್ವಲ್ಪ ಹಾಲು ಕುಡಿದು 5 ದಿನಗಳ ವೆರೆಗೆ ಕುಳಿತುಕೊಳ್ಳುತ್ತಾರೆ.

2 / 6
ಈ ಸಮಯದಲ್ಲಿ ಒಂಬತ್ತು ದಿನಗಳ ಕಾಲ ಭಕ್ತರು ಹೊರಗಡೆ ಭಜನೆ ಮಾಡುತ್ತಾ ದೇವಿಯ ಸ್ಮರಣೆ ಮಾಡುತ್ತಾರೆ. ಜೊತೆಗೆ 9 ದಿನಗಳ ಕಾಲ ದೇವಿಯ ಆರಾಧನೆ ಮಾಡುವುದರಿಂದ ಇವರಿಗೆ ವಿಶೇಷ ಶಕ್ತಿಗಳು ದೇವಿ ಕರುಣಿಸುತ್ತಾಳೆ ಎನ್ನುವ ಪ್ರತೀತಿ ಇದೆ. ಬೀದರ್‌ನ ಕುಂಬಾರವಾಡಾ ಬಡಾವಣೆಯ ನಿವಾಸಿ ಪುಣ್ಯವತಿ ಕೊಂಡೆ, ಸೇರಿದಂತೆ ಈ ವಿಶೇಷ ವ್ರತ ಆಚರಣೆಯಲ್ಲಿ ಜಿಲ್ಲೆಯ ಹತ್ತಾರು ಕಡೆಗಳಲ್ಲಿ ನಿರತರಾಗುತ್ತಾರೆ.

3 / 6
 ಅದರಂತೆ ಭವಾನಿ ಮಂದಿರದಲ್ಲಿ ಪ್ರತಿವರ್ಷದಂತೆ ದೇವಿಯ ಘಟ ಸ್ಥಾಪನೆ ಮಾಡಲಾಗಿದೆ. ಇದರೊಂದಿಗೆ ದೇವಿಯ ಆರಾಧಕಿ ಪುಣ್ಯವತಿ 5 ದಿನಗಳವರೆಗೆ ತಮ್ಮ ತೊಡೆಯ ಮೇಲೆ ದೇವಿಯ ಘಟ ಸ್ಥಾಪನೆ ಮಾಡಿಕೊಂಡು, ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ. ದೇವಿಯ ಆರಾಧಕರು ಮನೆಯಲ್ಲಿನ ದೇವರ ಜಗುಲಿಯ ಮೇಲೆ ಘಟ ಸ್ಥಾಪನೆ ಮಾಡುವುದು ವಾಡಿಕೆ. ಆದರೆ, ಇವರು ತಮ್ಮ ಶರೀರದ ಮೇಲೆ ಘಟ ಸ್ಥಾಪಿಸಿ ಧ್ಯಾನದಲ್ಲಿ ನಿರತರಾಗಿದ್ದಾರೆ.

4 / 6
48 ವರ್ಷಗಳಿಂದ ಸೇವೆ ಕಳೆದ 36 ವರ್ಷಕ್ಕೂ ಹೆಚ್ಚು ವರ್ಷಗಳಿಂದ ಮಂದಿರದಲ್ಲಿಯೇ ಈ ರೀತಿ ಹರಕೆ ಸಲ್ಲಿಸುತ್ತಿದ್ದು, ತಾವು ಈ ರೀತಿ ಭಕ್ತಿ ಸಮರ್ಪಿಸುವುದರಲ್ಲಿಯೇ ಸಂತೋಷ ಕಾಣುತ್ತಾರೆ. ಜಿಲ್ಲೆಯಲ್ಲಿ ಈ ರೀತಿಯ ಹತ್ತಾರು ಮಹಿಳೆಯರು ಪದ್ಮಾಸನ ಭಂಗಿಯಲ್ಲಿ ಕೂತು ಘಟವನ್ನ ಸ್ಥಾಪನೆ ಮಾಡಿಕೊಂಡು ದೇವಿಯ ಆರಾಧನೆ ಮಾಡುವುದರಲ್ಲಿ ತಲ್ಲಿನವಾಗುತ್ತಾರೆ. ಇವರು 5 ದಿನಗಳ ಕಾಲ ಯಾವುದೆ ಆಹಾರವನ್ನ ಸೇವಿಸುವುದಿಲ್ಲ. ಇದಕ್ಕಾಗಿ ನವರಾತ್ರಿ ಆರಂಭಕ್ಕೆ ಒಂದು ತಿಂಗಳ ಮುಂಚೆ ಆಹಾರವನ್ನ ಕಡಿಮೆ ಮಾಡುತ್ತಾ ಬರುತ್ತಾರೆ. ನವರಾತ್ರಿ ಆರಂಭದ ದಿನ ಎಲ್ಲವನ್ನ ತ್ಯಜಿಸಿ ಘಟವನ್ನ ಸ್ಥಾಪನೆ ಮಾಡಿಕೊಂಡು ದೇವಾಲಯದಲ್ಲಿ ಕೂತು ಬಿಡುತ್ತಾರೆ. ಈ ಸಂಪ್ರದಾಯ ಬಹುವರ್ಷದಿಂದ ನಡೆದುಕೊಂಡು ಬಂದಿದೆ ಎಂದು ಇಲ್ಲಿನ ಭಕ್ತರು ಹೇಳುತ್ತಾರೆ.

5 / 6
ಒಟ್ಟಾರೆ ಗಡಿ ಜಿಲ್ಲೆ ಬೀದರ್​ನಲ್ಲಿ ನವರಾತ್ರಿ ಉತ್ಸವ ಬಂದರೆ ಸಾಕು ದೇವಿ ಆರಾಧನೆ ಮಾಡಿ ದೇವಿಯ ಶಕ್ತಿಯನ್ನ ಸಿದ್ದಿ ಪಡಿಸಿಕೊಳ್ಳುವ ಭಕ್ತರ ಸಂಖ್ಯೆಯೇನು ಕಡಿಮೆ ಇಲ್ಲ. ಈ ಸಮಯದಲ್ಲಿ ದೇವಿಯ ಆರಾಧಾನೆ ಮಾಡಿದರೆ ಶಕ್ತಿ ಲಭಿಸುತ್ತೆ, ಅಷ್ಟೆ ಅಲ್ಲದೆ ತಮ್ಮ ಕಡೆ ಬರುವ ಭಕ್ತರ ಮನೊಕಾಮನೆಯನ್ನ ತಾಯಿ ಈಡೇರಿಸುತ್ತಾಳೆ ಎನ್ನುವ ಕಾರಣಕ್ಕೆ ಬಹುತೇಕ ಕಡೆ ಇಂತಹ ಕಠಿಣ ವೃತ್ತಕ್ಕೆ ಮುಂದಾಗುತ್ತಾರೆ.

6 / 6

Published On - 9:01 pm, Thu, 10 October 24

Follow us
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು

ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು

ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ

ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ

ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ

ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು

ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ

ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ

ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್