- Kannada News Photo gallery according to acharya chanakya fate is everything and ultimatum about life and death
Chanakya Niti: ವಿಧಿಬರಹವೇ ಫೈನಲ್ -ಜನನ ಮರಣಗಳ ಬಗ್ಗೆ ಆಚಾರ್ಯ ಚಾಣಕ್ಯ ಹೇಳಿದ್ದೇನು?
ಆಚಾರ್ಯ ಚಾಣಕ್ಯರ ಬೋಧನೆಗಳು ಜೀವನ ಸಾಧನೆಗೆ ಮತ್ತು ಉನ್ನತ ಸ್ಥಾನಕ್ಕೆ ಏರಲು ಸಹಾಯ ಮಾಡುತ್ತದೆ. ಆದ್ದರಿಂದ .. ಇಂದಿಗೂ ಅನೇಕ ಜನರು ಚಾಣಕ್ಯ ನೀತಿಯ ಬೋಧನೆಗಳನ್ನು ಅನುಸರಿಸುತ್ತಾರೆ. ಚಾಣಕ್ಯ ಜೀವನದ ಬಗ್ಗೆ ಅನೇಕ ಮಹತ್ವದ ವಿಷಯಗಳನ್ನು ತಿಳಿಯ ಹೇಳಿದ್ದಾರೆ.
Updated on: Jul 01, 2022 | 5:31 PM

ಹುಟ್ಟುವ ಮೊದಲೇ ನಿರ್ಧಾರ: ನಮ್ಮ ಹಿಂದಿನ ಜನ್ಮದ ಕರ್ಮದ ಮೇಲೆ ನಮ್ಮ ಭವಿಷ್ಯವು ಅವಲಂಬಿತವಾಗಿರುತ್ತದೆ ಎಂದು ನಮ್ಮ ಪುರಾಣ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಜೀವನದಲ್ಲಿ ಏನೇ ಘಟಿಸಲಿ ಅದು ನಾವು ಹುಟ್ಟುವ ಮೊದಲೇ ನಿರ್ಧಾರವಾಗುತ್ತದೆ. ಆಚಾರ್ಯ ಚಾಣಕ್ಯ ಕೂಡ ಅದನ್ನೇ ನಂಬಿದ್ದರು.

ಸಂಸ್ಕಾರದ ಫಲಿತಾಂಶ: ಆಚಾರ್ಯ ಚಾಣಕ್ಯ ಹೇಳುವಂತೆ ಒಬ್ಬ ವ್ಯಕ್ತಿಯು ತನ್ನ ಪ್ರಸ್ತುತ ಜೀವನದಲ್ಲಿ ಸುಖ-ದುಃಖಗಳಿದ್ದರೂ, ಅದು ಅವನ ಹಿಂದಿನ ಜನ್ಮ ಸಂಸ್ಕಾರದ ಫಲಿತಾಂಶವಾಗಿದೆ. ಒಬ್ಬ ವ್ಯಕ್ತಿಯು ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ತನ್ನ ಭವಿಷ್ಯವನ್ನು ಬದಲಾಯಿಸಬಹುದು. ಆದರೆ ಕೆಲವು ವಿಷಯಗಳನ್ನು ಮೊದಲೇ ನಿರ್ಧರಿಸಲಾಗುತ್ತದೆ. ಅವರು ಅದೃಷ್ಟವಂತರೋ ಅಥವಾ ದುರದೃಷ್ಟವಂತರೋ.. ಈ ವಿಷಯಗಳು ಮೊದಲೇ ನಿರ್ಧಾರಿತ.

ಸಾವು: ಮನುಷ್ಯ ಎಷ್ಟೇ ಪ್ರಯತ್ನಿಸಿದರೂ ಸಾವಿನಿಂದ ಪಾರಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಸಾವಿನ ದಿನಾಂಕ ಮತ್ತು ಸಮಯ ಸಹ ಪೂರ್ವದಲ್ಲಿಯೇ ದಾಖಲಿಸಲಾಗಿದೆ. ಆ ನಿಗದಿತ ಸಮಯದಲ್ಲಿ ಅವನು ಇಹಲೋಕ ತ್ಯಜಿಸಬೇಕಾಗುತ್ತದೆ. ಆದ್ದರಿಂದ ನಿರ್ಭೀತಿಯಿಂದ ಬದುಕಿ. ಮರಣದ ಸಮಯ ಬರುವವರೆಗೂ ಯಾರೂ ಏನೂ ಮಾಡಲಾಗದು.