
ಸೌತ್ ಸಿನಿರಂಗದಲ್ಲಿ ಬಾಲ ನಟಿಯಾಗಿ ಮಿಂಚಿದ್ದ ಚೆಂದುಳ್ಳಿ ಚೆಲುವೆ ಅನಿಕಾ ಸುರೇಂದ್ರನ್ಈಗೇನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ಭರ್ಜರಿ ಕಂಬ್ಯಾಕ್. ಹೌದು, ಮಲಯಾಳಂನ ದಿ ಗ್ರೇಟ್ ಫಾದರ್, ತಮಿಳಿನ ವಿಶ್ವಾಸಂ ಚಿತ್ರಗಳನ್ನು ನೋಡಿದವರಿಗೆ ಅನಿಕಾ ಚಿರಪರಿಚಿತ. ತಮ್ಮ ಮುದ್ದಾದ ನಗುವಿನೊಂದಿಗೆ ಅಧ್ಭುತ ಅಭಿನಯ ನೀಡಿದ್ದ ಈ ಪುಟ್ಟ ಪೋರಿಗೆ ಇದೀಗ 16ರ ಪ್ರಾಯ.

ಇತ್ತ ಬಾಲ ನಟಿ ಚೆಂದುಳ್ಳಿ ಚೆಲುವೆಯಾಗುತ್ತಿದ್ದಂತೆ ಅನಿಕಾಗಳಿಗೆ ಹಿರೋಯಿನ್ ಆಫರ್ಗಳು ಬರಲಾರಂಭಿಸಿದೆ. ಅದರಂತೆ ತಮಿಳಿನಲ್ಲಿ ಇನ್ನೂ ಹೆಸರಿಡದ ಒಂದು ಚಿತ್ರವನ್ನು ಮಲಯಾಳಿ ಚೆಲುವೆ ಒಪ್ಪಿಕೊಂಡಿದ್ದಾಳೆ.

ಇದರ ಬೆನ್ನಲ್ಲೇ ಟಾಲಿವುಡ್ನಿಂದಲೂ ಅನಿಕಾಗೆ ಬಿಗ್ ಆಫರ್ವೊಂದು ಸಿಕ್ಕಿದೆ. ಮಲಯಾಳಂನ ಸೂಪರ್ ಹಿಟ್ ಚಿತ್ರ ಕಾಪ್ಪೆಲಾ ತೆಲುಗಿಗೆ ರಿಮೇಕ್ ಆಗುತ್ತಿದೆ. ಮಾಲಿವುಡ್ನಲ್ಲಿ ಅನ್ನಾ ಬೆನ್ ಮಾಡಿದ ಪಾತ್ರಕ್ಕೆ ಅನಿಕಾ ಆಯ್ಕೆಯಾಗಿದ್ದಾಳೆ. ಈ ಚಿತ್ರವು ಶೀಘ್ರದಲ್ಲೇ ಸೆಟ್ಟೇರಲಿದ್ದು, ಈ ಚಿತ್ರದ ಮೂಲಕ ಅನಿಕಾ ಹಿರೋಯಿನ್ ಆಗಿ ಪದಾರ್ಪಣೆ ಮಾಡಲಿದ್ದಾರೆ.

ಇನ್ನು ಟಾಲಿವುಡ್ ಕಿಂಗ್ ನಾಗಾರ್ಜುನ ಅವರ ಮುಂದಿನ ಚಿತ್ರಕ್ಕೂ ಅನಿಕಾ ಕಾಲ್ಶೀಟ್ ನೀಡಿದ್ದಾರೆ. ಈ ಚಿತ್ರದಲ್ಲಿ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಲಯಾಳಂ ಹಾಗೂ ತಮಿಳಿನಲ್ಲಿ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಾಲನಟಿಯಾಗಿ ಮಿಂಚಿದ್ದ ಅನಿಕಾ ಶೀಘ್ರದಲ್ಲೇ ಹಿರೋಯಿನ್ ಆಗಿ ಸೆಕೆಂಡ್ ಇನಿಂಗ್ಸ್ ಆರಂಭಿಸುತ್ತಿದ್ದಾರೆ. ಇತ್ತ ಪುಟ್ಟ ಬಾಲಕಿಯ ಅಭಿನಯವನ್ನು ಆನಂದಿಸಿದ ಸಿನಿಪ್ರಿಯರು ಕೂಡ ನಾಯಕಿಯಾಗಿ ಅನಿಕಾಳ ಚೊಚ್ಚಲ ಚಿತ್ರವನ್ನು ಎದುರು ನೋಡುತ್ತಿರುವುದು ಸುಳ್ಳಲ್ಲ.

ಅನಿಕಾ ಸುರೇಂದ್ರನ್

ಅನಿಕಾ ಸುರೇಂದ್ರನ್

ಅನಿಕಾ ಸುರೇಂದ್ರನ್

ಅನಿಕಾ ಸುರೇಂದ್ರನ್

ಅನಿಕಾ ಸುರೇಂದ್ರನ್
Published On - 7:30 pm, Mon, 26 July 21