Updated on: Mar 15, 2023 | 11:14 PM
ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಶೆರಿನ್ ಶ್ರೀನಗರ್ ಸೀರೆಯುಟ್ಟು ಕ್ಯಾಮೆರಾಕ್ಕೆ ಫೋಸು ನೀಡಿದ್ದಾರೆ.
ಕನ್ನಡದ ಧ್ರುವ, ಭೂಪತಿ, ಮಸ್ತ್ ಮಜಾ ಮಾಡಿ, ಎಕೆ 56, ಯೋಗಿ ಸಿನಿಮಾಗಳಲ್ಲಿ ಶೆರಿನ್ ಶ್ರೀನಗರ್ ನಟಿಸಿದ್ದಾರೆ.
ಕೆಲವು ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿಯೂ ನಟಿಸಿರುವ ಶೆರಿನ್ ಶ್ರೀನಗರ್ 2015 ರ ಬಳಿಕ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.
ತಮಿಳು ಮೂಲದ ಈ ನಟಿ ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ಕಿರುತೆರೆಯಲ್ಲಿಯೂ ಸಕ್ರಿಯರಾಗಿದ್ದಾರೆ. ಬಿಗ್ಬಾಸ್ ತಮಿಳಿನ ಸ್ಪರ್ಧಿಯಾಗಿದ್ದ ಶೆರಿನ್ ಇನ್ನೂ ಕೆಲವು ಟಿವಿ ಶೋಗಳಲ್ಲಿ ಪಾಲ್ಗೊಂಡಿದ್ದಾರೆ.
ಶೆರಿನ್ ತಮ್ಮ ಮಾಡರ್ನ್ ಲುಕ್ನ ಚಿತ್ರಗಳನ್ನು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆಗೊಮ್ಮೆ-ಈಗೊಮ್ಮೆ ಸೀರೆ ಧರಿಸಿ ಸಹ ಫೋಟೊಕ್ಕೆ ಫೊಸ್ ನೀಡುತ್ತಾರೆ.