- Kannada News Photo gallery Adhvithi Shetty Starer Brahma Kamala Movie Selected for Dadasaheb Phalke film Festival
ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೆ ಆಯ್ಕೆ ಆದ ಅದ್ವಿತಿ ಶೆಟ್ಟಿ ನಟನೆಯ ‘ಬ್ರಹ್ಮ ಕಮಲ’ ಸಿನಿಮಾ
Adhviti Shetty: ಅದ್ವಿತಿ ಶೆಟ್ಟಿ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈಗ ‘ಬ್ರಹ್ಮ ಕಮಲ’ ಸಿನಿಮಾ ಮೂಲಕ ಅವರು ಜನಪ್ರಿಯತೆ ಹೆಚ್ಚಿದೆ.
Updated on:Apr 20, 2023 | 11:50 AM

ನಟಿ ಅದ್ವಿತಿ ಶೆಟ್ಟಿ ನಟನೆಯ ‘ಬ್ರಹ್ಮ ಕಮಲ’ ಸಿನಿಮಾ ಸುದ್ದಿಯಲ್ಲಿದೆ. ಅವರ ಸಿನಿಮಾ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೆ ಆಯ್ಕೆ ಆಗಿದ್ದು, ಅಲ್ಲಿ ಪ್ರದರ್ಶನ ಕಾಣಲಿದೆ. ಈ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದೆ. ದೆಹಲಿಯಲ್ಲಿ ಈ ಸಿನಿಮೋತ್ಸವ ನಡೆಯಲಿದೆ.

ಅದ್ವಿತಿ ಶೆಟ್ಟಿ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈಗ ‘ಬ್ರಹ್ಮ ಕಮಲ’ ಸಿನಿಮಾ ಮೂಲಕ ಅವರು ಜನಪ್ರಿಯತೆ ಹೆಚ್ಚಾಗಿದೆ.

‘ಬ್ರಹ್ಮ ಕಮಲ’ ಸಿನಿಮಾ ಮಹಿಳಾ ಪ್ರಧಾನ ಸಿನಿಮಾ. ಅದ್ವಿತಿ ಪಾತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ಇದೆ. ಮಾರ್ಚ್ನಲ್ಲಿ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಈ ಚಿತ್ರ ಪ್ರದರ್ಶನ ಕಂಡಿತ್ತು.

ಅದ್ವಿತಿ ಶೆಟ್ಟಿ ಜೊತೆಗೆ ಋತುಚೈತ್ರ, ಲೋಕೇಂದ್ರಸೂರ್ಯ, ಬಲ ರಾಜವಾಡಿ, ಗಂಡಸಿ ಸದಾನಂದಸ್ವಾಮಿ, ಕವಿತ ಕಂಬಾರ್, ರಾಧಾ ರಾಮಚಂದ್ರ ಮೊದಲಾದವರು ಆಭಿನಯಿಸಿದ್ದಾರೆ.

‘ದಾರಿ ಯಾವುದಯ್ಯ ವೈಕುಂಠಕೆ’ ಚಿತ್ರ ನಿರ್ದೇಶಿಸಿದ್ದ ಸಿದ್ದು ಪೂರ್ಣಚಂದ್ರ ಅವರು ‘ಬ್ರಹ್ಮ ಕಮಲ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರ ಕೂಡ ಅಂತರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಸದ್ದು ಮಾಡುತ್ತಿದೆ.
Published On - 11:47 am, Thu, 20 April 23




