
ನಟಿ ಕೃತಿ ಸನೋನ್ ಅವರು ‘ಮಿಮಿ’ ಚಿತ್ರದಿಂದ ದೊಡ್ಡ ಯಶಸ್ಸು ಕಂಡರು. ಆ ಬಳಿಕ ಅವರ ನಟನೆಯ ಕೆಲ ಚಿತ್ರಗಳು ರಿಲೀಸ್ ಆಯಿತು. ಆದರೆ, ಯಶಸ್ಸು ಮಾತ್ರ ಅವರ ಕೈ ಹಿಡಿಯಲಿಲ್ಲ. ಈಗ ಅವರು ಹೊಸ ಫೋಟೋಶೂಟ್ನಲ್ಲಿ ಮಿಂಚಿದ್ದಾರೆ.

ಕೃತಿ ಸೋನನ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಹಲವು ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.

‘ಮಿಮಿ’ ಬಳಿಕ ‘ಹಮ್ ದೋ ಹಮಾರಿ ದೋ’, ‘ಬಚ್ಚನ್ ಪಾಂಡೆ’ ಚಿತ್ರಗಳಲ್ಲಿ ನಟಿಸಿದರು ಕೃತಿ. ‘ಹೀರೋಪಂತಿ 2’ ಚಿತ್ರದಲ್ಲಿ ಸಾಂಗ್ಗೆ ಡ್ಯಾನ್ಸ್ ಮಾಡಿದರು.

ಸದ್ಯ, ಕೃತಿ ನಾಲ್ಕು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರು ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಈ ಬಾರಿ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ ಕೃತಿ. ಈ ಚಿತ್ರಕ್ಕೆ ಅವರ ಫ್ಯಾನ್ಸ್ ಲೈಕ್ಸ್ ಒತ್ತಿದ್ದಾರೆ. ಅವರ ಅಭಿಮಾನಿ ವಲಯದಲ್ಲಿ ಫೋಟೋ ವೈರಲ್ ಆಗಿದೆ.