- Kannada News Photo gallery Afghanistan Taliban Classroom Women Education and Employment details Photos here
Afghanistan: ತಾಲಿಬಾನ್ ಆಡಳಿತದಲ್ಲಿ ತರಗತಿಗಳು ಹೇಗೆ ನಡೆಯುತ್ತಿವೆ ನೋಡಿ!
Taliban: ತಾಲಿಬಾನ್ ನಿಯಮಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಬದುಕುವ ಹುಡುಗರು ಪಾಶ್ಚಿಮಾತ್ಯ ಸಂಪ್ರದಾಯದಂತೆ ಪ್ಯಾಂಟ್ ಹಾಗೂ ಶರ್ಟ್ ಧರಿಸುವಂತಿಲ್ಲ. ಮಹಿಳೆಯರು ಬುರ್ಕಾ ಧರಿಸುವುದು ಕಡ್ಡಾಯ.
Updated on: Sep 06, 2021 | 5:49 PM

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ಆ ಬಳಿಕ, ಅಲ್ಲಿನ ಚಿತ್ರಣ ಸಂಪೂರ್ಣ ಬದಲಾಗಿದೆ. 1990ರ ದಶಕದ ಅಫ್ಘಾನಿಸ್ತಾನ ತಾಲಿಬಾನ್ ಆಳ್ವಿಕೆಗಿಂತ ಈ ಬಾರಿಯ ಆಡಳಿತ ಭಿನ್ನವಾಗಿದೆ. ಈ ಬಾರಿ, ಹುಡುಗಿಯರು ಹಾಗೂ ಮಹಿಳೆಯರಿಗೆ ಶಿಕ್ಷಣದ ಮತ್ತು ಕಲಿಯುವ ಹಕ್ಕು ನೀಡಲಾಗಿದೆ. ಆದರೆ, ಅವರು ಹೇಳುವಷ್ಟು ಆರಾಮದಾಯಕವಾಗಿ ಕಲಿಕೆ ಸಾಗುತ್ತಿಲ್ಲ.

ಕಾಬೂಲ್ನ Ibn-e-Sina University ಯ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲಿ ಹುಡುಗರು ಹಾಗೂ ಹುಡುಗಿಯರು ಪ್ರತ್ಯೇಕವಾಗಿ ಕುಳಿತುಕೊಂಡಿದ್ದಾರೆ. ಅವರ ನಡುವೆ ಒಂದು ಪರದೆಯನ್ನು ಕೂಡ ಹಾಕಲಾಗಿದೆ. ಚಿತ್ರದಲ್ಲಿ ಕಾಣುವಂತೆ ಕಲಿಯಲು ಬಂದ ಹುಡುಗರು ಸಾಂಪ್ರದಾಯಿಕ ಉಡುಗೆ ತೊಟ್ಟುಕೊಂಡಿದ್ದಾರೆ. ಹುಡುಗಿಯರು ಬುರ್ಕಾ ಹಾಕಿದ್ದಾರೆ.

ತಾಲಿಬಾನ್ ನಿಯಮಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಬದುಕುವ ಹುಡುಗರು ಪಾಶ್ಚಿಮಾತ್ಯ ಸಂಪ್ರದಾಯದಂತೆ ಪ್ಯಾಂಟ್ ಹಾಗೂ ಶರ್ಟ್ ಧರಿಸುವಂತಿಲ್ಲ. ಕುರ್ತಾ ಧರಿಸುವುದು ಅವರಿಗೆ ಕಡ್ಡಾಯವಾಗಿದೆ. ಮಹಿಳೆಯರಿಗೆ ಬುರ್ಕಾ ಧರಿಸುವುದು ಕೂಡ ಕಡ್ಡಾಯ ಆಗಿದೆ.

ಈ ಬಗ್ಗೆ ತಾಲಿಬಾನ್ ಡಾಕ್ಯುಮೆಂಟ್ ಒಂದನ್ನು ಹಂಚಿಕೊಂಡಿದೆ. ಹಾಗೂ ಮಹಿಳೆಯರು ಹಾಗೂ ಹುಡುಗರು ಪ್ರತ್ಯೇಕವಾಗಿ ಕುಳಿತುಕೊಳ್ಳಬೇಕು ಎಂದು ಹೇಳಲಾಗಿದೆ. ಹಾಗೂ ಮಹಿಳೆಯರಿಗೆ ಮಹಿಳೆಯರೇ ಶಿಕ್ಷಣ ನೀಡುತ್ತಾರೆ ಎಂದು ಹೇಳಲಾಗಿದೆ. ಅಥವಾ ಉತ್ತಮ ಚಾರಿತ್ರ್ಯ ಹೊಂದಿರುವ ಒಬ್ಬ ವಯಸ್ಕ ವ್ಯಕ್ತಿಯಿಂದ ಕಲಿಸಲಾಗುವುದು ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಹಿಷ್ಣು ಎಂದು ತೋರಿಸಿಕೊಳ್ಳುತ್ತಿದೆ. ಆದರೆ, ನಿಜವಾಗಿಯೂ ತನ್ನ ಕಟ್ಟುಪಾಡುಗಳನ್ನು ಮೀರಿ ಇರುವಂತೆ ಕಾಣುತ್ತಿಲ್ಲ. ಇದೇ ಕಾರಣಕ್ಕೆ ಮಹಿಳೆಯರು ಹೆರಾತ್ ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮಹಿಳೆಯರ ಹಕ್ಕಿಗಾಗಿ ಧರಣಿ ನಡೆಸಿದ್ದಾರೆ.

ಒಂದು ಕಡೆ, ಮಹಿಳೆಯರು ಕೆಲಸ ಮಾಡಬಹುದು ಎಂದು ತಾಲಿಬಾನ್ ಹೇಳಿದೆ. ಆದರೆ, ಯಾವುದೇ ಗಂಡಸರ ಸಹಾಯ ಇಲ್ಲದೆ ಮನೆಯಿಂದ ಮಹಿಳೆಯರು ಹೊರಹೋಗಬಾರದು ಎಂದೂ ತಾಲಿಬಾನ್ಗಳು ಹೇಳಿದ್ದಾರೆ. ಆದರೆ, ಗಂಡ ತೀರಿಕೊಂಡವರು, ತಂದೆ, ಮಗ ಇಲ್ಲದವರು ಏನು ಮಾಡಬೇಕು? ಈ ಪ್ರಶ್ನೆಗೆ ಅಂತಹವರು ಮನೆಯಲ್ಲೇ ಕುಳಿತುಕೊಳ್ಳುವಂತೆ ತಾಲಿಬಾನ್ ಹೇಳಿದೆ.




