Updated on: Mar 09, 2022 | 7:43 PM
ಸಾಲುಸಾಲು ಚಿತ್ರಗಳನ್ನು ಒಪ್ಪಿಕೊಂಡೂ ಅಕ್ಷಯ್ ಪಾತ್ರಗಳ ಆಯ್ಕೆಯಲ್ಲಿ ಭಿನ್ನತೆಯನ್ನು ಕಾಯ್ದುಕೊಳ್ಳುತ್ತಾರೆ. ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ಭಿನ್ನ ಗೆಟಪ್ನಲ್ಲಿ ಮಿಂಚುತ್ತಾರೆ. ಈಗ ಅವರ ನಟನೆಯ ‘ಬಚ್ಚನ್ ಪಾಂಡೆ’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರ್ನಲ್ಲಿ ಸಖತ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಮಾರ್ಚ್ 18ರಂದು ಈ ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿ ಆಗಿದೆ. ನಾನಾ ಕಡೆಗಳಲ್ಲಿ ಸುದ್ದಿಗೋಷ್ಠಿ ಅಟೆಂಡ್ ಮಾಡುತ್ತಿದೆ.
ಅಕ್ಷಯ್ ಕುಮಾರ್, ಕೃತಿ ಸನೋನ್, ಜಾಕ್ವೆಲಿನ್ ಫರ್ನಾಂಡೀಸ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ತಮಿಳಿನ ‘ಜಿಗರ್ಥಂಡ’ ಚಿತ್ರದ ರಿಮೇಕ್ ಇದಾಗಿದೆ. ಇದು ಕನ್ನಡಕ್ಕೂ ರಿಮೇಕ್ ಆಗಿ ರಿಲೀಸ್ ಆಗಿತ್ತು.
ಅಕ್ಷಯ್, ಕೃತಿ ಹಾಗೂ ಜಾಕ್ವೆಲಿನ್ ಹಲವು ಪ್ರೆಸ್ಮೀಟ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರೆಸ್ಮೀಟ್ನಲ್ಲಿ ಈ ಮೂವರು ಸಖತ್ ಆಗಿ ಪೋಸ್ ನೀಡಿದ್ದಾರೆ.
ಹಿಂದಿಯಲ್ಲಿ ತೆರೆಗೆ ಬರಲಿರುವ ‘ಬಚ್ಚನ್ ಪಾಂಡೆ’ಯನ್ನು ಪ್ರೇಕ್ಷಕರು ಹೇಗೆ ಎದುರುಗೊಳ್ಳಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ‘ಬಚ್ಚನ್ ಪಾಂಡೆ’ ಚಿತ್ರವನ್ನು ಫರ್ಹಾದ್ ಸಮ್ಜಿ ನಿರ್ದೇಶನ ಮಾಡಿದ್ದು, ಸಾಜಿದ್ ನಾಡಿಯದ್ವಾಲಾ ನಿರ್ಮಾಣ ಮಾಡಿದ್ದಾರೆ.
ಅಕ್ಷಯ್ ಕುಮಾರ್
ಕೃತಿ-ಅಕ್ಷಯ್