‘ಅಣ್ಣ ತಂಗಿ’ ಧಾರಾವಾಹಿಗೆ ಅನು ಪ್ರಭಾಕರ್ ಎಂಟ್ರಿ; ನವರಾತ್ರಿ ಪ್ರಯುಕ್ತ ದೇವಿಯ ಪಾತ್ರ

‘ಅಣ್ಣ ತಂಗಿ’ ಸೀರಿಯಲ್​ನಲ್ಲಿ ಹೊಸ ಟ್ವಿಸ್ಟ್​ಗಳನ್ನು ಪರಿಚಯಿಸಲಾಗುತ್ತಿದೆ. ನಟಿ ಅನು ಪ್ರಭಾಕರ್​ ಅವರ ಸೇರ್ಪಡೆಯಿಂದ ಹೊಸ ಮೆರುಗು ಬಂದಿದೆ. ಉದಯ ಟಿವಿಯಲ್ಲಿ ಸಂಜೆ 7 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ನವರಾತ್ರಿ ಹಬ್ಬದ ಪ್ರಯುಕ್ತ ದೇವಿಯ ರೂಪದಲ್ಲಿ ಅವರು ಪ್ರೇಕ್ಷಕರ ಎದುರು ಕಾಣಿಸಿಕೊಳ್ಳುತ್ತಿದ್ದಾರೆ.

ಮದನ್​ ಕುಮಾರ್​
|

Updated on: Oct 18, 2023 | 1:05 PM

ಎಲ್ಲ ಕಡೆಗಳಲ್ಲಿ ನವರಾತ್ರಿ ಹಬ್ಬವನ್ನು ವಿಶೇಷವಾಗಿ ಅಚರಿಸಲಾಗುತ್ತಿದೆ. ಕನ್ನಡದ ಕಿರುತೆರೆ ಲೋಕದಲ್ಲೂ ಹಬ್ಬದ ವಾತಾವರಣ ಮನೆ ಮಾಡಿದೆ. ಈ ಸಂದರ್ಭದಲ್ಲಿ ಉದಯ ಟಿವಿಯ ‘ಅಣ್ಣ ತಂಗಿ’ ಧಾರಾವಾಹಿಯಲ್ಲೂ ನವರಾತ್ರಿಯ ವೈಭವ ಕಾಣಬಹುದು. ಮಧುಸಾಗರ್​, ಅಖಿಲಾ ಮುಂತಾದವರು ನಟಿಸುತ್ತಿರುವ ಈ ಸೀರಿಯಲ್​ನಿಂದ ಹೊಸ ಸುದ್ದಿ ಸಿಕ್ಕಿದೆ.

1 / 6
ಉದಯ ಟಿವಿಯಲ್ಲಿ ಸಂಜೆ  7 ಗಂಟೆಗೆ ‘ಅಣ್ಣ ತಂಗಿ’ ಧಾರಾವಾಹಿ ಪ್ರಸಾರವಾಗುತ್ತಿದೆ. ಈ ಟೀಮ್​ಗೆ ಈಗ ಕನ್ನಡ ಚಿತ್ರರಂಗದ ಅನುಭವಿ ಕಲಾವಿದೆ ಅನು ಪ್ರಭಾಕರ್​ ಎಂಟ್ರಿ ನೀಡಿದ್ದಾರೆ. ಇದು ನವರಾತ್ರಿಯ ಸಮಯ ಆಗಿರುವುದರಿಂದ ಅನು ಪ್ರಭಾಕರ್​ ಅವರು ದೇವಿಯ ರೂಪದಲ್ಲಿ ಪ್ರೇಕ್ಷಕರ ಎದುರು ಕಾಣಿಸಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

2 / 6
ಅಣ್ಣ-ತಂಗಿ ನಡುವಿನ ಬಾಂಧವ್ಯ ಮತ್ತು ಭಾವುಕತೆಯ ಕಹಾನಿಯನ್ನು ಈ ಸೀರಿಯಲ್​ ಹೊಂದಿದೆ. ಕೌಟುಂಬಿಕ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಈ ಸೀರಿಯಲ್​ ಇತ್ತೀಚೆಗೆ 600 ಸಂಚಿಕೆಗಳನ್ನು ಪೂರೈಸಿದೆ. ಹೊಸ ಹೊಸ ಟ್ವಿಸ್ಟ್​ಗಳನ್ನು ಈ ಧಾರಾವಾಹಿಯಲ್ಲಿ ಪರಿಚಯಿಸಲಾಗುತ್ತಿದೆ. ನಟಿ ಅನು ಪ್ರಭಾಕರ್​ ಅವರ ಸೇರ್ಪಡೆಯಿಂದ ಇನ್ನಷ್ಟು ಮೆರುಗು ಬಂದಿದೆ.

3 / 6
ಈ ಧಾರಾವಾಹಿ ತಂಡದವರು ನವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಅತಿಥಿಯೊಂದಿಗೆ ಸ್ಪೆಷಲ್​ ಸಂಚಿಕೆಯೊಂದನ್ನು ಪ್ರೇಕ್ಷಕರಿಗೆ ನೀಡುತ್ತಿದ್ದಾರೆ. ದೇವಿ ಪಾತ್ರದಲ್ಲಿ ಅನು ಪ್ರಭಾಕರ್ ಅವರು ಕಾಣಿಸಿಕೊಳ್ಳುವುದು ಯಾಕೆ? ಅಣ್ಣ-ತಂಗಿಯ ಜೀವನದಲ್ಲಿ ಆವರಿಸಿರುವ ಕತ್ತಲನ್ನು ಹೊಡೆದೋಡಿಸಿ ಬೆಳಕನ್ನು ಚೆಲ್ಲುವ ಚಿಲುಮೆಯಾಗಿ ಈ ಪಾತ್ರ ಕಾಣಿಸಲಿದೆ. ಕೆ.ಎಮ್. ಚೈತನ್ಯ ಹಾಗೂ ಹರಿದಾಸ್ ಅವರು ಈ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ.

4 / 6
‘ಅಣ್ಣ ತಂಗಿ’ ಧಾರಾವಾಹಿಯ ವಿಶೇಷ ಎಪಿಸೋಡ್​ನಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಅನು ಪ್ರಭಾಕರ್​ ಅವರಿಗೆ ಖುಷಿ ಇದೆ. ಅದರ ಕುರಿತು ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ‘ನನಗೆ ತುಂಬ ಸಂತೋಷ ಆಗಿದೆ. ಈ ಧಾರಾವಾಹಿಯಲ್ಲಿ ಒಂದು ವಿಶೇಷ ಪಾತ್ರವನ್ನು ಮಾಡುತ್ತಿರುವುದು ಖುಷಿ ನೀಡಿದೆ. ಈ ಧಾರಾವಾಹಿಯ ಸೆಟ್ ಒಂದು ಕುಟುಂಬದ ರೀತಿ ಇತ್ತು’ ಅವರು ಹೇಳಿದ್ದಾರೆ.

5 / 6
ಇತ್ತೀಚಿನ ಸಂಚಿಕೆಗಳಲ್ಲಿ ತುಳಸಿ ತನ್ನ ಮಗುವನ್ನು ಕಳೆದುಕೊಂಡಿದ್ದಾಳೆ. ಮನಸ್ಸಿಲ್ಲದ ಮದುವೆಗೆ ಅಣ್ಣ ಕಾಲಿಡುತ್ತಾನೆ. ಹಂತಹಂತದಲ್ಲೂ ದುಷ್ಟರ ದ್ವೇಷಕ್ಕೆ ಕಾರಣ ಆಗುವ ಇವರ ಬದುಕು ಮುಳ್ಳಿನ ಹಾದಿ ಆಗಿರುತ್ತದೆ. ಆಗ ದೇವಿಯ ಪ್ರವೇಶ ಆಗುತ್ತದೆ. ಹಾಗಾದ್ರೆ ಸಂಕಷ್ಟಗಳಿಗೆ ಪೂರ್ಣವಿರಾಮ ಬೀಳುತ್ತಾ? ಅನು ಪ್ರಭಾಕರ್ ಅವರ ಈ ಪಾತ್ರ ಹೇಗಿರಲಿದೆ ಎಂಬುದಕ್ಕೆ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

6 / 6
Follow us
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.

ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ

ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ

ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ

ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು