
ಅನುಪಮಾ ಪರಮೇಶ್ಚರನ್ ಜನಿಸಿದ್ದು ಕೇರಳದ ತ್ರಿಶೂರ್ನಲ್ಲಿ. ಫೆ.18ರಂದು ಈ ಸುಂದರಿಗೆ ಹುಟ್ಟುಹಬ್ಬದ ಸಂಭ್ರಮ. ಇದು ಅವರ ಬಾಲ್ಯದ ಫೋಟೋ. ಅವರ ಕೆಲವು ಅಪರೂಪ ಫೋಟೋಗಳು ಇಲ್ಲಿವೆ.

ಇಂದು ಇಡೀ ದಕ್ಷಿಣ ಭಾರತದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಅನುಪಮಾ ಪರಮೇಶ್ವರನ್ ಅವರು ಕಾಲೇಜು ಶಿಕ್ಷಣ ಪಡೆದಿದ್ದು ಕೇರಳದಲ್ಲಿ. ಸಿನಿಮಾದಲ್ಲಿ ನಟನೆಯ ಅವಕಾಶ ಸಿಕ್ಕ ಬಳಿಕ ಅವರು ಶಿಕ್ಷಣ ಮೊಟಕುಗೊಳಿಸಿ, ಚಿತ್ರರಂಗದಲ್ಲಿ ಬ್ಯುಸಿ ಆದರು.

ಅನುಪಮಾ ಪರಮೇಶ್ವರನ್ ನಟಿಸಿದ ಮೊದಲ ಸಿನಿಮಾ ‘ಪ್ರೇಮಂ’ ಸೂಪರ್ ಹಿಟ್ ಆಯಿತು. ಆ ಮೂಲಕ ಅವರಿಗೆ ಆರಂಭದಲ್ಲೇ ಗೆಲುವು ಸಿಕ್ಕಿತು. ಆ ಬಳಿಕ ಅನುಪಮಾ ಹಿಂದಿರುಗಿ ನೋಡಲಿಲ್ಲ.

ನಟಿ ಸಾಯಿ ಪಲ್ಲವಿ ಮತ್ತು ಅನುಪಮಾ ಪರಮೇಶ್ವರನ್ ಅವರು ‘ಪ್ರೇಮಂ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ನಟಿಸಿದ್ದರು. ಇಬ್ಬರ ನಡುವೆ ಒಳ್ಳೆಯ ಸ್ನೇಹ ಇದೆ. ಈ ನಟಿಯರು ಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಪಡೆದುಕೊಂಡಿದ್ದಾರೆ.

ಕನ್ನಡದ ಪ್ರೇಕ್ಷಕರು ಕೂಡ ಅನುಪಮಾ ಪರಮೇಶ್ವರನ್ ಅವರನ್ನು ಇಷ್ಟಪಟ್ಟಿದ್ದಾರೆ. ಪುನೀತ್ ರಾಜ್ಕುಮಾರ್ ಅಭಿನಯದ ‘ನಟ ಸಾರ್ವಭೌಮ’ ಚಿತ್ರಕ್ಕೆ ಅನುಪಮಾ ನಾಯಕಿ ಆಗಿದ್ದರು. ಆ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.