ನಟಿ ಅನುಷ್ಕಾ ಶರ್ಮಾ ಅವರಿಗೆ ಇಂದು (ಮೇ 1) ಬರ್ತ್ಡೇ ಸಂಭ್ರಮ. ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಸಿಕ್ಕಿದೆ. ಈ ವಿಶೇಷ ದಿನದಂದು ಅವರ ಚೈಲ್ಡ್ಹುಡ್ ಫೋಟೋಗಳನ್ನು ಫ್ಯಾನ್ಸ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಅನುಷ್ಕಾ ಶರ್ಮಾ ಅವರ ಚೈಲ್ಡ್ಹುಡ್ ಫೋಟೋ ವೈರಲ್ ಆಗುತ್ತಿದೆ. ಬಾಲ್ಯದಲ್ಲೂ ಅವರು ಸಖತ್ ಕ್ಯೂಟ್ ಆಗಿದ್ದರು. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.
ಅನುಷ್ಕಾ ಶರ್ಮಾ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರು ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು.
ಅನುಷ್ಕಾ ಶರ್ಮಾಗೆ ‘ರಬ್ ನೆ ಬನಾದಿ ಜೋಡಿ’ ಸಿನಿಮಾದಿಂದ ಯಶಸ್ಸು ಸಿಕ್ಕಿದೆ. ಈ ಸಿನಿಮಾ ಸೂಪರ್ ಹಿಟ್ ಆಗಿದ್ದರಿಂದ ಅನುಷ್ಕಾ ವೃತ್ತಿಜೀವನ ಬದಲಾಯಿತು.
ಅನುಷ್ಕಾ ಹೊಸಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಅವರು ಮಗಳ ಆರೈಕೆಯಲ್ಲಿ ಬ್ಯುಸಿ ಇದ್ದಾರೆ.