- Kannada News Photo gallery Arjun Janya celebrated his birthday with Shiva Rajkumar and Geetha Shiva Rajkumar
ಅರ್ಜುನ್ ಜನ್ಯ ಹುಟ್ಟುಹಬ್ಬ ಆಚರಿಸಿದ ಶಿವಣ್ಣ-ಗೀತಕ್ಕ, ಇಲ್ಲಿವೆ ಚಿತ್ರಗಳು
Arjun Janya Birthday: ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹುಟ್ಟುಹಬ್ಬ ಇಂದು. ಶಿವರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ ಆಗಿರುವ ಅರ್ಜುನ್ ಜನ್ಯ ಅವರು ಅವರೊಟ್ಟಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದು, ಶಿವಣ್ಣ-ಗೀತಕ್ಕ ಅವರ ಆಶೀರ್ವಾದವನ್ನು ಸಹ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅರ್ಜುನ್ ಜನ್ಯ ಕುಟುಂಬದವರು ಸಹ ಇದ್ದರು. ಇಲ್ಲಿವೆ ಚಿತ್ರಗಳು.
Updated on: May 13, 2025 | 3:05 PM

ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹುಟ್ಟುಹಬ್ಬ ಇಂದು. ಜನ್ಯ ಅವರು ಮೇ 13, 1980 ರಲ್ಲಿ ಬೆಂಗಳೂರಿನಲ್ಲಿಯೇ ಜನಿಸಿದ್ದರು.

ಅರ್ಜುನ್ ಜನ್ಯ 25 ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹಲವು ಅತ್ಯುತ್ತಮ ಹಾಡುಗಳನ್ನು ಅರ್ಜುನ್ ಜನ್ಯ ನೀಡಿದ್ದಾರೆ.

ಶಿವರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ ಆಗಿರುವ ಅರ್ಜುನ್ ಜನ್ಯ ಅವರು ಅವರೊಟ್ಟಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದು, ಶಿವಣ್ಣ-ಗೀತಕ್ಕ ಅವರ ಆಶೀರ್ವಾದವನ್ನು ಸಹ ಪಡೆದುಕೊಂಡಿದ್ದಾರೆ.

ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ತೆರಳಿ ಅಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ಸಮಯದಲ್ಲಿ ಅರ್ಜುನ್ ಜನ್ಯ ಅವರ ಪತ್ನಿ ಮತ್ತು ಮಗಳು ಸಹ ಹಾಜರಿದ್ದರು.

ಅರ್ಜುನ್ ಜನ್ಯ ಇದೀಗ ಸಿನಿಮಾ ನಿರ್ದೇಶಕ ಆಗಿದ್ದಾರೆ. ತಮ್ಮ ಮೊದಲ ಸಿನಿಮಾಕ್ಕೆ ಶಿವಣ್ಣ ಅವರನ್ನು ನಾಯಕನಾಗಿ ಹಾಕಿಕೊಂಡಿದ್ದಾರೆ. ಸಿನಿಮಾದಲ್ಲಿ ಉಪೇಂದ್ರ, ರಾಜ್ ಬಿ ಶೆಟ್ಟಿ ಸಹ ಇದ್ದು, ಸಿನಿಮಾದ ಹೆಸರು ‘45’.




